pejavar seer ಪೇಜಾವರ ಶ್ರೀಗಳಿಗೆ ಅಂತಿಮ ಇಹವಿದಾಯ

pejavar seer

pejavar seer  ವಿದ್ಯಾಪೀಠದಲ್ಲಿ ವೃಂದಾವನಸ್ಥರಾದ ಸಂತಶ್ರೀ

ಬೆಂಗಳೂರು: ಭಾನುವಾರ ಬೆಳಗ್ಗೆ ಸ್ವರ್ಗಸ್ಥರಾದ ಪೇಜಾವರ ಮಠಾಧೀಶ ( pejavar seer  ) ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅಂತ್ಯ ಸಂಸ್ಕಾರ ಸಕಲ ವಿಧಿ ವಿಧಾನಗಳೊಂದಿಗೆ ಬೆಂಗಳುರಿನ ವಿದ್ಯಾಪೀಠದಲ್ಲಿ ಸಂಜೆ ನೆರವೇರಿತು. ಶೋಕತಪ್ತ ಭಕ್ತಸಾಗರ ಶ್ರೀಗಳಿಗೆ ಅಶ್ರು ವಿದಾಯ ಸಲ್ಲಿಸಿತು.

ಇದನ್ನೂ ಓದಿ: ರಾಮಮಂದಿರ ವಿಚಾರವಾಗಿ ಮುಂಚೂಣಿಯಲ್ಲಿ ನಿಂತ ಯತಿ ಪೇಜಾವರರು

ಬೆಂಗಳೂರಿನ ವಿದ್ಯಾಪಿಠದಲ್ಲಿ ಶ್ರೀಗಳು ಸಕಲ ಸರಕಾರ ಗೌರವ-ಮರ್‍ಯಾದೆಗಳೊಂದಿಗೆ ಬೃಂದಾವನಸ್ಥರಾದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ನೂರಾರು ಗಣ್ಯರು ವಿದ್ಯಾಪೀಠದಲ್ಲಿ ಉಪಸ್ಥಿತರಿದ್ದರು. ಮಾಧ್ವ ಸಂಪ್ರದಾಯದಂತೆಯೇ ಶ್ರಿಗಳ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಭಾನುವಾರ ಬೆಳಗ್ಗೆ ಉಡುಪಿಯಲ್ಲಿ ಮತ್ತು ಮಧ್ಯಾಹ್ನದ ಬಳಿಕ ವಿಶೇಷ ವಿಮಾನದ ಮುಲಕ ಬೆಂಗಳೂರಿಗೆ ತಂದು ಬಸವನಗುಡಿಯಲ್ಲಿ ಶ್ರೀಗಳ ಅಂತಿಮ ದರ್ಶನದ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸ್ವಾಮೀಜಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಅಂತಿಮ ದರ್ಶನ ಪಡೆದುಕೊಂಡರು. ಇದನ್ನೂ ಮುನ್ನ ಶ್ರೀಗಳ ಉತ್ತರಾಯಣ ದರ್ಶನಕ್ಕೆ ಉಡುಪಿಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಅಧೋಕ್ಷಜ ಮಠದಲ್ಲಿ ಜನ ಸಾಲುಗಟ್ಟಿ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...