pak ಕೈಲಾಗದೇ ಮೈ ಪರಚಿಕೊಂಡ ಪಾಕ್, ‘ರಾಜತಂತ್ರ’ಕ್ಕೆ ಕೊಕ್ಕೆ

pak
pakistan desparate move

pak ಕಾಶ್ಮೀರ ಬೆಳವಣಿಗೆ ವಿರೋಧಿಸಿ ವ್ಯಾಪಾರವೂ ಕಟ್ ಎಂದ ಪಾಕ್

ಹೊಸದಿಲ್ಲಿ: ಭಾರತವು ಕಾಶ್ಮೀರ ಕುರಿತು ಕೈಗೊಂಡ ದಿಟ್ಟ ಕ್ರಮದಿಂದ ( pak ) ಮೈ ಪರಚಿ ಕೊಳ್ಳುವಂತಾಗಿರುವ ಪಾಕಿಸ್ತಾನವು ದಿಲ್ಲಿಗೆ ತನ್ನ ಹೊಸ ರಾಯಭಾರಿಯನ್ನು ಕಳುಹಿಸದಿರಲು ತೀರ್ಮಾನ ಕೈಗೊಂಡಿದೆಯಲ್ಲದೇ ವ್ಯಾಪಾರ ಸಂಬಂಧ ಕಡಿದುಕೊಳ್ಳುವುದಾಗಿ ಹೇಳಿದೆ.

ಇದನ್ನೂ ಓದಿ: ನುಡಿದಂತೆ ನಡೆದ ಮೋದಿ, ಕಾಶ್ಮೀರಕ್ಕೆ ನಿಜದ ಆಜಾದಿ

ಇಸ್ಲಾಬಾದಿನಲ್ಲಿರುವ ಭಾರತದ ರಾಯಭಾರಿಯನ್ನು ಕೂಡಲೇ ದಿಲ್ಲಿಗೆ ಮರಳುವಂತೆ ಸೂಚಿಸಿರುವ ಪಾಕಿಸ್ತಾನದ ಸರಕಾರವು ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡುವುದಾಗಿ ಘೋಷಿಸಿದೆ.

ಈ ಸಂಬಂಧ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಬುಧವಾರ ನಡೆಸಿದ ಉನ್ನತ ಮಟ್ಟದ ಭದ್ರತಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಾಕಿಸ್ಥಾನ ಸರಕಾರದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಘೋಷಿಸಲಾಗಿದೆ.

ಈ ತಿಂಗಳಿನಲ್ಲಿ ಹೊಸದಾಗಿ ಭಾರತಕ್ಕೆ ಪಾಕ್‌ ನಿಂದ ಆಗಮಿಸಬೇಕಾಗಿದ್ದ ಪಾಕ್‌ ರಾಯಭಾರಿಯನ್ನು ಕೂಡ ಕಳುಹಿಸಿಕೊಡದೇ ಇರುವುದಕ್ಕೆ ಪಾಕ್‌ ಮುಂದಾಗಿದೆ. ಭಾರತದ ನಡೆಯನ್ನು ಪ್ರತಿಭಟಿಸಿ ಐದು ಹಂತದ ಕಾರ್ಯಸೂಚಿ ಅನುಸರಿಸಲು ಪಾಕಿಸ್ತಾನ ನಿರ್ಧರಿಸಿದ್ದು ಅದಲ್ಲಿ ವ್ಯಾಪಾರ-ವಹಿವಾಟು ಸ್ಥಗಿತವೂ ಒಂದಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...