pailwaan censor ಸೆನ್ಸಾರ್ ಮುಗಿಸಿದ ಕಿಚ್ಚನ ಪೈಲ್ವಾನ್, ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

pailwaan piracy
Sudeep Pailwan

pailwaan censor ಸುದೀಪ್ ಪೈಲ್ವಾನ್‌ಗೆ ಸಿಕ್ತು ಯು/ಎ ಪ್ರಮಾಣಪತ್ರ

ಬೆಂಗಳೂರು: ಇಡೀ ಕನ್ನಡ ಚಿತ್ರೋದ್ಯಮವೇ ಕಾತರದಿಂದ ಎದಿರು ನೋಡುತ್ತಿರುವ ( pailwaan censor ) ಕಿಚ್ಚ ಸುದೀಪರ್‍ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಸೆನ್ಸಾರ್‍ ಮಂಡಳಿ ಅಸ್ತು ಎಂದಿದೆ. ಎಲ್ಲರೂ ಕುಳಿತು ನೋಡಬಹುದಾದ ಚಿತ್ರ ಎಂಬ ಕಾರಣಕ್ಕೆ ಮಂಡಳಿಯು ಪೈಲ್ವಾನನಿಗೆ ಯು/ಎ ಪ್ರಮಾಣಪತ್ರ ನೀಡಿದೆ.

ಇದನ್ನೂ ಓದಿ: ಹಿಂದಿಯಲ್ಲೂ ಕಿಚ್ಚನ ಪೈಲ್ವಾನ್ ರಾಕಿಂಗ್; 2 ದಿನಕ್ಕೆ 58 ಲಕ್ಷ ವೀಕ್ಷಣೆ

ಕನ್ನಡ ಹೊರತಾಗಿ ನಾಲ್ಕು ಭಾಷೆಗಳಲ್ಲಿ ಪೈಲ್ವಾನ್ ಅವತರಿಸಲಿದ್ದು, ಉಳಿದ ಭಾಷೆಗಳಲ್ಲಿಯೂ ಸೆನ್ಸಾರ್ ಅಪ್ಪೆ ಪಡೆದುಕಳ್ಳುವ ಕೆಲಸ ಪ್ರಗತಿಯಲ್ಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ದೊಡ್ಡ ಬಜೆಟ್, ದೊಡ್ಡ ತಾರಾಗಣ, ದೊಡ್ಡ ವ್ಯಾಪ್ತಿಯ ಚಿತ್ರ ಎನಿಸಿರುವ ಪೈಲ್ವಾನ್ ಟ್ರೇಲರುಗಳ ಮೂಲಕ ಈಗಾಗಲೇ ಸೃಷ್ಟಿ ಮಾಡಿರುವ ಹವಾ ನೋಡಿದರೇ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಬಾರೀ ಸದ್ದು ಮಾಡುಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿದೆ.

ಪೈಲ್ವಾನ್ ಚಿತ್ರದ ಹಿಂದಿ ಟ್ರೇಲರ್‌ಗೆ ಇನ್ನಿಲ್ಲದ ಫ್ಯಾನ್ ಫಾಲೋಯಿಂಗ್ ಸೃಷ್ಟಿಯಾಗಿದೆ. ಬಿಡುಗಡೆಯಾದ ದಿನದಿಂದ ಈವರೆಗೆ ಪೈಲ್ವಾನ್ ಹಿಂದಿ ಟ್ರೇಲರ್‌ ಅನ್ನು ಒಂದಿ ಕೋಟಿಗೂ ಹೆಚ್ಚಿನ ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರ ಸೆಪ್ಟೆಂಬರ್ 12ಕ್ಕೆ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಮೊದಲ ತುಣುಕು ನೋಡಿಯೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರ ಜೊತೆಗೆ ಹಿಂದಿ ನಟ ಸುನೀಲ್ ಶೆಟ್ಟಿ ಸಹ ನಟಿಸುತ್ತಿದ್ದು ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ದರದಲ್ಲಿ ಸುದೀಪ್ ಜೊತೆ ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ತೆರೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...