pailwaan booking ಕೆಜಿಎಫ್-1 ದಾಖಲೆ ಮುರಿದ ಕಿಚ್ಚನ ಪೈಲ್ವಾನ್

pailwaan review
kichchaa sudeep in pailwan

pailwaan booking 3000ಕ್ಕೂ ಹೆಚ್ಚು ತೆರೆಗಳಲ್ಲಿ ಪ್ರದರ್ಶನ, ಬುಕಿಂಗ್‌ ಶುರು

ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳು ಬಹಳ ಕಾತರದಿಂದ ಎದಿರುನೋಡುತ್ತಿರುವ ( pailwaan booking ) ಪೈಲ್ವಾನ್ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಭಾನುವಾರದಿಂದಲೇ ಮುಂಗಡ ಟಿಕೆಟ್‌ ಬುಕಿಂಗಿಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: ಸೆನ್ಸಾರ್ ಮುಗಿಸಿದ ಕಿಚ್ಚನ ಪೈಲ್ವಾನ್, ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

ಇದೇ 12ರ ಬೆಳಗ್ಗೆ 5.30ಕ್ಕೇ ತೆರೆ ಮೇಲೆ ಅನಾವರಣಗೊಳ್ಳಲಿರುವ ಪೈಲ್ವಾನನ ಪಟ್ಟುಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.

ಈ ಮಧ್ಯೆ ಬಿಡುಗಡೆಗೂ ಮುನ್ನವೇ ಪೈಲ್ವಾನ ಚಿತ್ರವು ಕೆಜಿಎಫ್ ಸಿನೆಮಾದ ದಾಖಲೆಯೊಂದನ್ನು ಮುರಿದಿದೆ. ಹೌದು ಯಶ್ ಅಭಿನಯದ ಕೆಜಿಎಫ್ ಸುಮಾರು 250 ತೆರೆಗಳಲ್ಲಿ ಮೊದಲ ಪ್ರದರ್ಶನ ಕಂಡಿದ್ದರೇ ಪೈಲ್ವಾನ ಅದನ್ನೂ ಮೀರಿಸಿ 3000ಕ್ಕೂ ಹೆಚ್ಚು ತೆರೆಗಳಲ್ಲಿ ಅಬ್ಬರಿಸಲಿದ್ದಾನೆ.

ಕಿಚ್ಚ ಸುದೀಪ್ ಕುಸ್ತಿ ಪಟುವಾಗಿ ವಿಭಿನ್ನ ಗೆಟಪ್ಪೊನಲ್ಲಿ ಕಾಣಿಸಿಕೊಂಡಿರುವ ಈ ಪಂಚಭಾಷಾ ಚಿತ್ರ ಟೀಸರ್‍ ಮತ್ತು ಟ್ರೇಲರ್‌ಗಳಿಂದಲೇ ಸಾಕಷ್ಟು ಸದ್ದು ಮಾಡಿದೆ. ಚಿತ್ರ ತುಣುಕುಗಳನ್ನು ಜನ ಗುಂಗೆದ್ದು ನೋಡಿದ್ದಾರೆ.

ಪೈಲ್ವಾನ್ ಚಿತ್ರದ ಹಿಂದಿ ಟ್ರೇಲರ್‌ಗೆ ಇನ್ನಿಲ್ಲದ ಫ್ಯಾನ್ ಫಾಲೋಯಿಂಗ್ ಸೃಷ್ಟಿಯಾಗಿದೆ. ಬಿಡುಗಡೆಯಾದ ದಿನದಿಂದ ಈವರೆಗೆ ಪೈಲ್ವಾನ್ ಹಿಂದಿ ಟ್ರೇಲರ್‌ ಅನ್ನು ಒಂದಿ ಕೋಟಿಗೂ ಹೆಚ್ಚಿನ ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ಸುದೀಪ್ ಅವರ ಜೊತೆಗೆ ಹಿಂದಿ ನಟ ಸುನೀಲ್ ಶೆಟ್ಟಿ ಸಹ ನಟಿಸುತ್ತಿದ್ದು ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ದರದಲ್ಲಿ ಸುದೀಪ್ ಜೊತೆ ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ತೆರೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...