onion prices ಇನ್ನೂ ಒಂದು ತಿಂಗಳು ಕೈಗೆಟುಕದು ಈರುಳ್ಳಿ

onion touches
onion market

onion prices ಈರುಳ್ಳಿ ಆಮದು ಪೂರೈಕೆ ತಡ, ಗ್ರಾಹಕ ಬಡ

ಹೊಸದಿಲ್ಲಿ: ದೇಶಾದ್ಯಂತ ಗಗನಕ್ಕೇರಿರುವ ಈರುಳ್ಳಿ ಸದ್ಯಕ್ಕೆ ಗ್ರಾಹಕದ ಕೈಗೆಟುಕುವ ( onion prices ) ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಶತಕ ಬಾರಿಸಿ ಮುನ್ನಡೆದಿರುವ ಈರುಳ್ಳಿಯ ಧಾರಣೆ ಅಲ್ಲಿಂದ ಕೆಳಗಿಳಿಯಲು ಕನಿಷ್ಟ ತಿಂಗಳಾದರೂ ಬೇಕಾಗುತ್ತದೆ ಎಂಬ ಪರಿಸ್ಥಿತಿ ಇದೆ.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕಾರಣದಲ್ಲಿ ಕಿಚ್ಚು ಹಚ್ಚಿದ ಅನಂತ್ ಹೆಗಡೆ ಮಾತು

ವಿಸ್ತೃತ ಮುಂಗಾರು ತಂದ ಸಂಕಷ್ಟಗಳಲ್ಲಿ ಈರುಳ್ಳಿ ಬೆಳೆಗೆ ಬಿದ್ದ ಹೊಡೆತವೂ ಒಂದಾಗಿದೆ. ಮಳೆಯ ಹೊಡೆತದಿಂದ ಈರುಳ್ಳಿ ಬೆಳೆ ಹಾಳಾಗಿ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗಿಲ್ಲ. ಅದನ್ನು ಸರಿದೂಗಿಸಲು ಸರಕಾರವೂ ನಾನಾ ತಂತ್ರ ಮಾಡಿದ್ದು ವಿದೇಶಗಳಿಂದಲೂ ಆಂದಿಗೆ ಮುಂದಾಗಿದೆ.

ಈ ಡಿಸೆಂಬರ್‍ ಮಧ್ಯಭಾಗದ ವೇಳೆಗೆ ಸುಮಾರು 6 ಸಾವಿರ ಮೆಟ್ರಿಕ್ ಟನ್ ಆಮದು ಈರುಳ್ಳಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಆದರೆ 11 ಸಾವರಿ ಮೆಟ್ರಿಕ್ ಟನ್‌ ಈರುಳ್ಳಿಯ ಎರಡನೇ ಕಂತಿನ ಆಮದು ಮಾರುಕಟ್ಟೆಗೆ ಬರಲು ಕನಿಷ್ಟ ತಿಂಗಳ ಕಾಲಾವಕಾಶ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.

ಈ ಕಾರಣದಿಂದಾಗಿ ಮತ್ತು ಹೊಸ ಬೆಳೆ ಬರುವುದು ತಡವಾಗಿರುವ ಕಾರಣ ಸದ್ಯದ ಮಟ್ಟಿಗೆ ಈರುಳ್ಳಿ ಧಾರಣೆ ಸ್ಥಿರವಾಗಲು ಸಾಧ್ಯವಿಲ್ಲ. ಈ ಮಧ್ಯೆ ಕೇಂದ್ರ ಸರಕಾರ ನಾಲ್ವರು ಸಚಿವರ ತಂಡವನ್ನು ರಚಿಸಿದ್ದು, ಈ ತಂಡ ದಿನನಿತ್ಯ ಆಧಾರದಲ್ಲಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...