odeya release ಒಡೆಯನ ’ದರ್ಶನ’ಕ್ಕೆ ತುದಿಗಾಲ ಮೇಲೆ ನಿಂತ ಅಭಿಮಾನಿಗಳು

odeya release
odeya poster

odeya release ಗುರುವಾರ ರಾಜ್ಯದೆಲ್ಲೆಡೆ ದರ್ಶನ್ ಒಡೆಯ ತೆರೆಗೆ, ಮುಗಿಲು ಮುಟ್ಟಿದ ಕಾತರ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ( odeya release ) ನಿರೀಕ್ಷತ ಒಡೆಯ ಗುರುವಾರ ತೆರೆ ಕಾಣಲಿದ್ದು, ಅಭಿಮಾನಿಗಳಲ್ಲಿ ಕಾತರ ಮುಗಿಲು ಮುಟ್ಟಿದೆ. ಮೊದಲ ದಿನ ಮದೊಲ ಪರದೆಯಲ್ಲಿಯೇ ಒಡಯನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ.

ಇದನ್ನೂ ಓದಿ: ಡಿ. 12ರಂದು 700 ತೆರೆಗಳಲ್ಲಿ ಅಬ್ಬರಿಲಿದ್ದಾನೆ ದರ್ಶನ್ ಒಡೆಯ

ಒಡಯನಲ್ಲಿ ಸೋದರ ಸಂಬಂಧದ ಎಳೆಯಿದ್ದು, ಸಂಪೂರ್ಣ ಕೌಂಟುಂಬಿಕ ಚಿತ್ರವಾಗಿದೆ. ಬಂಧಗಳಿಗೆ ಬೆಲೆ ಕೊಡುವ ನಾಯಕನಾಗಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲ ಇದ್ದರೂ ಅಭಿಮಾನಿಗಳಿಗೆ ನಿರಾಸೆಯಾದ ರೀತಿಯಲ್ಲಿ ಸಾಕಷ್ಟು ಸಾಹಸ ಸನ್ನಿವೇಶಗಳು ಸಹ ಚಿತ್ರದಲ್ಲಿದೆ ಎನ್ನಲಾಗಿದೆ.

ಈಗಾಗಲೇ ಒಡೆಯ ಟೀಸರ್ 36 ಲಕ್ಷ ಮಂದಿಯಿಂದ ವೀಕ್ಷಣೆ ಕಂಡಿದೆ. ಇನ್ನು ಟ್ರೇಲರ್ ಬಿಡುಗಡೆಗೊಂಡ ಒಂದೇ ವಾರದಲ್ಲಿ 20 ಲಕ್ಷ ಮಂದಿಯಿಂದ ಸೈ ಎನಿಸಿಕೊಂಡಿದೆ. ಈ ತುಣುಕುಗಳು ಒಟ್ಟಾರೆ ಚಿತ್ರ ಹೇಗಿರಬಹುದು ಎಂಬ ಕುತೂಹಲ ಹೆಚ್ಚಿಸಿದೆ.

ಈ ಚಿತ್ರದಲ್ಲಿ ದರ್ಶನ್‌ ಅವರಿಗೆ ನಾಯಕಿಯಾಗಿ ಇದೇ ಮೊದಲ ಬಾರಿಗೆ ಸನಾ ತಿಮ್ಮಯ್ಯ ಅಭಿನಯಿಸಿದ್ದಾರೆ. ಉಳಿದಂತೆ ದೇವರಾಜ್‌, ರವಿಶಂಕರ್‌, ಸಾಧುಕೋಕಿಲ, ಶರತ್‌ ಲೋಹಿತಾಶ್ವ, ಚಿಕ್ಕಣ್ಣ, ಯಶಸ್‌ ಸೂರ್ಯ, ಪಂಕಜ್‌, ನಿರಂಜನ್‌, ಸಮರ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದು ತಮಿಳಿನ ವೀರಂ ಚಿತ್ರದ ರೀಮೇಕ್ ಆಗಿದ್ದರೂ, ಕನ್ನಡದ ಸೊಗಡಿಗೆ ತಕ್ಕಂತೆ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ. ಯಜಮಾನ, ಕುರುಕ್ಷೇತ್ರ ಯಶಸ್ಸಿನ ಬೆನ್ನಲ್ಲಿಯೇ ಬರುತ್ತಿರುವ ಒಡಯ ದರ್ಶನ್ ಅವರಿಗೆ ಹ್ಯಾಟ್ರಿಕ್ ಹಿಟ್ ಕೊಲಿದೆಯೇ ಎಂಬುದೇ ಈಗ ಕುತೂಹಲ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...