notfairmodiji ಕರ್ನಾಟಕದ ಬಗ್ಗೆ ಮೋದಿ ಸರಕಾರದ ಅನಾದರಕ್ಕೆ ಟ್ವೀಟಿಗರ ಹಿಡಿಶಾಪ

notfairmodiji
prime minister narendra modi

notfairmodiji ಹ್ಯಾಶ್‌ಟ್ಯಾಗ್ನಲ್ಲಿ ಕಮೆಂಟುಗಳ ಸುರಿಮಳೆ, ಸದಾನಂದ ಗೌಡರಿಗೂ ತರಾಟೆ

ಬೆಂಗಳೂರು: ನೆರೆಬಿದ್ದು ಎರಡು ತಿಂಗಳಾದರೂ ಕಣ್ಮುಚ್ಚಿ ( notfairmodiji ) ಕುಳಿತಿರುವ ಕೇಂದ್ರ ಸರಕಾರದ ವಿರುದ್ಧ ರಾಜ್ಯದ ಜನರ ಸಹನೆಯ ಕಟ್ಟೆ ಒಡೆದಿದೆ. #notfairmodiji ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಜನರು ಪ್ರಧಾನಿ ಮೋದಿ ಕುರಿತಾದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೇ ಪರಿಹಾರ ಕೇಳಿದ್ದೇ ತಪ್ಪು ಎನ್ನುವಂತೆ ಮಾತನಾಡಿದ ಸಚಿವ ಸದಾನಂದ ಗೌಡರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಸ್ವಲ್ಪ ತಡೀರಿ, ಬಿಜೆಪಿಯವರ ಜಾತಕ ಬಿಚ್ಚಿಡುತ್ತೇನೆ: ಡಿಕೆಶಿ ಗುಡುಗು

ಟ್ವಿಟರ್‌ನ ಮುಂಚೂಣಿಯ ಗುಂಗಾಗಿ (top trending) ಹೊರಹೊಮ್ಮಿರುವ ಈ ಹ್ಯಾಶ್‌ಟ್ಯಾಗ್‌ ಮೂಲಕ ಜನ ಮೋದಿ ಸರಕಾರದ ವಿಳಂಬ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದಲ್ಲಿ ನೆರೆ ಬಮದು ಎರಡು ತಿಂಗಳು ಕಳೆದರೂ ಈವರೆಗೆ ಯಾವುದೇ ಪರಿಹಾರದ ಮಾತಾಡದ ಕೇಂದ್ರ ಸರಕಾರದ ಕುರುಡು ನೀತಿಗೆ ಟ್ವೀಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹಿಡಿಶಾಪವನ್ನೂ ಹಾಕಿದ್ದಾರೆ.

25 ಮಂದಿ ಬಿಜೆಪಿ ಸಂಸದರನ್ನು ಆರಿಸಿ ಕಳುಹಿಸಿದ್ದಕ್ಕೆ ರಾಜ್ಯ ಜನರಿಗೆ ತಕ್ಕ ಪ್ರತಿಫಲ ನೀಡಿದ್ದೀರಿ ಎಂದು ಟ್ವೀಟಿಗರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆರೆ ಪರಿಹಾರ ಕೇಳಿದರೆ ನಮ್ಮನ್ನು ದೇಶದ್ರೋಹಿಗಳೆಂದು ನಿಮ್ಮ ಸಂಪುಟದ ಸಚಿವರಾದ ಸದಾನಂದ ಗೌಡರು ಬಣ್ಣಿಸುತ್ತಾರೆ. ಇದಕ್ಕೇ ಏನು ಉತ್ತರ ಕೊಡುವಿರಿ ಎಂದೂ ಜನ ಪ್ರಶ್ನೆ ಮಾಡಿದ್ದಾರೆ.

ನಾವು ಪರಿಹಾರ ಕೇಳಿದ್ದೇವೆಯೇ ಹೊರತು ಯಾರದ್ದೋ ಆಸ್ತಿ ಕೊಡಿ ಎಂದು ಕೇಳುತ್ತಿಲ್ಲ. ಸದಾನಂದ ಗೌಡರ ಮೇಲೆ ನೀವು ಏನು ಕ್ರಮ ಕೈಗೊಳ್ಳುವಿರಿ ತಿಳಿಸಿ ಎಂದು ಇನ್ನು ಕೆಲವರು ತಮ್ಮ ಅತೃಪ್ತಿ ಹೊರಹಾಕಿದ್ದಾರೆ.

ನೆರೆ ಪ್ರದೇಶಗಳಲ್ಲಿ ಕನಿಷ್ಟ 10 ನಿಮಿಷ ಇದ್ದು ನೋಡಿ ವಾಸ್ತವದ ಅರಿವು ನಿಮಗಾಗುತ್ತದೆ. ಮೋದಿ ಅವರು ಜನರ ನಾಯಕ ೆಂದು ಭಾವಿಸಿದ್ದೆವು. ಆದರೆ ಈಗ ಾ ಭಾವನೆ ಕಳೆದುಹೋಗುತ್ತಿದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...