north east ಪೌರತ್ವ ತಿದ್ದುಪಡಿಗೆ ರಾಜ್ಯಸಭೆ ಅಸ್ತು. ಹೊತ್ತಿ ಉರಿದ ಈಶಾನ್ಯ ಭಾರತ

north east

north east ಅಸ್ಸಾಂ, ತ್ರಿಪುರಾದಲ್ಲಿ ಪ್ರತಿಭಟನೆ ತಾರಕಕ್ಕೆ, ಸೇನೆಗೆ ಬುಲಾವ್

ಹೊಸದಿಲ್ಲಿ: ಸಾಕಷ್ಚಟು ವಿವಾದಕ್ಕೆ ಕಾರಣವಾಗಿರುವ ಭಾರತದ ಪೌರತ್ವ ಕಾಯಿದೆಗೆ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡಯುವಲ್ಲಿ ಮೋದಿ ಸರಕಾರ ಯಶಸ್ವಿಯಾಗಿದೆ. ಲೋಕಸಭೆಯಲ್ಲಿ ಈಗಾಗಲೇ ಅಂಗೀಕಾರ ಪಡೆದಿದ್ದ ತಿದ್ದುಪಡಿ ಮಸೂದೆಗೆ ಬುಧವಾರ ರಾಜ್ಯ ಸಭೆ 125-105 ಮತಗಳಿಂದ ಓಕೆ ಎಂದಿದೆ.

ಈ ಮಧ್ಯೆ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ( north east ) ಪ್ರತಿಭಟನೆ ತೀರಾ ವ್ಯಾಪಕವಾಗಿ ಹಡರಡಿದ್ದು ಪರಿಸ್ಥಿತಿ ನಿಭಾಯಿಸಲು ಅಸ್ಸಾಂ, ತ್ರಿಪುರಾದ ಹಲವೆಡೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಅಲ್ಲದೇ ಪರಿಸ್ಥಿತಿ ನಿಭಾಯಿಸಲು ಸೇನೆಗೆ ಬುಲಾವ್ ನೀಡಲಾಗಿದೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆ: ಉಲ್ಟಾ ಹೊಡೆದ ಶಿವಸೇನೆ

ಪರಿಸ್ಥಿತಿ ನಿಯಂತ್ರಣಕ್ಕೆ ಜಮ್ಮು ಕಾಶ್ಮೀರದಿಂದ ಕೇಂದ್ರೀಯ ಮೀಸಲು ಪಡೆಯ 10 ತುಕಡಿಗಳನ್ನು ತುರ್ತಾಗಿ ಅಸ್ಸಾಂ ರಾಜ್ಯಕ್ಕೆ ರವಾನಿಸಲಾಗಿದೆ. ಅಲ್ಲದೇ ಇನ್ನೂ ಹತ್ತು ತುಕಡಿಗಳನ್ನು ಹೆಚ್ಚುವರಿಯಾಗಿ ಅಲ್ಲಿ ನಿಯೋಜಿಸಲಾಗುವುದು ಎಂದು ಹೇಳಲಾಗಿದೆ.

ಪ್ರತಿಭಟನೆ ಹಿಂಸೆಯ ರೂಪ ತಳೆಯುವುದನ್ನು ತಪ್ಪಿಸಲು ತ್ರಿಪುರಾದ ಕಾಂಚನ್ಪು‍ರ ಮತ್ತು ಮಾನು ಪ್ರದೇಶಗಳಿಗೆ ಎರಡು 140 ಯೋಧರನ್ನು ಕಳುಹಿಸಲಾಗಿದೆ. ಅಸ್ಸಾಂನ ಬೋನ್ಗೈಗಾಂವ್ ಪ್ರದೇಶಕ್ಕೂ ಸೇನಾಪಡೆಯನ್ನು ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಲೋಕಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿರುವ ಈ ತಿದ್ದುಪಡಿ ಮಸೂದೆ ಈಗ ರಾಜ್ಯಸಭೆಯ ಅನುಮೋದನೆಗೆ ಕಾದಿದ್ದು, ಅದಕ್ಕೆ ಅನುಮೋದನೆ ನೀಡದಂತೆ ಈಶಾನ್ಯ ರಾಜ್ಯಗಳಲ್ಲಿ ಅದರಲ್ಲಿಯೂ ಪ್ರಮುಖವಾಗಿ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಜನ ಬೀದಿಗಿಳಿದಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಧರ್ಮದ ಆಧಾರದ ಮೇಲೆ ಪೌರತ್ವ ನೀಡಲಾಗುತ್ತಿರುವುದಕ್ಕೆ ಪ್ರತಿಭಟನೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...