ಚಮಚ ಬಳಸಬೇಡಿ, ಕೈಯಲ್ಲಿ ಊಟ ಮಾಡಿ ಅಸಿಡಿಟಿಯಿಂದ ದೂರವಿರಿ..!

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು

ಕೈಯಲ್ಲಿ ಊಟ ಮಾಡುವುದು ನಮ್ಮ(ಭಾರತೀಯರು)ಲ್ಲಿ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ. ಆದರೆ ಇದು ಬರಿ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ ಮತ್ತು ವೈಜ್ಞಾನಿಕ ಲಾಭಗಳಿವೆ.

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ ಹಾಗೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಆಹಾರ ಕ್ರಮಗಳಲ್ಲಿ ಸಾಕಷ್ಟು ಬದಲಾವಣೆಗಳಿರುತ್ತವೆ. ರುಚಿ, ಸಂಸ್ಕೃತಿ ಪ್ರತಿಯೊಂದರಲ್ಲೂ ಭಿನ್ನವಾಗಿರುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಫೋರ್ಕ್, ಸ್ಪೂನ್‍ಗಳನ್ನು ಬಳಸಿದರೆ, ಚೀನಾದವರು ಊಟ ಮಾಡಲು ಕಡ್ಡಿಗಳನ್ನು ಬಳಸುತ್ತಾರೆ. ಆಯಾ ದೇಶದ ಭೋಜನ ಪದ್ದತಿಗಳು ಅಲ್ಲಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಆಧ್ಯಾತ್ಮಿಕತೆ ಹಿನ್ನೆಲೆಯುಳ್ಳ ನಾವು (ಭಾರತೀಯರು) ಹೆಚ್ಚಾಗಿ ನಮ್ಮ ಕೈಗಳಿಂದಲೇ ಊಟ ಮಾಡುವುದು ಹಿಂದಿನಿಂದಲೂ ಬಳಕೆಯಲ್ಲಿರುವ ಪದ್ಧತಿ. ಈ ಪದ್ಧತಿಯ ಹಿಂದೆ ನಾನಾ ವೈಜ್ಞಾನಿಕ ಕಾರಣಗಳಿವೆ.

ಇತ್ತೀಚಿಗೆ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ. ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಸ್ಫೂನ್ ಅಭ್ಯಾಸ ಮಾಡುತ್ತಿದ್ದಾರೆ ತಂದೆತಾಯಿ. ಅದಕ್ಕೆ ಅವರು ಕೊಡುತ್ತಿರುವ ಮುಖ್ಯ ಕಾರಣ…ಕೈಗಳು ಸ್ವಚ್ಛವಾಗಿರಲ್ಲ ಅನ್ನೋದು. ಆದರೆ ಕೈಯಲ್ಲಿ ಊಟ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿದರೆ ಖಂಡಿತವಾಗಿಯೂ ನೀವು ಸ್ಪೂನ್ ಬಳಸುವುದಿಲ್ಲ.

ಮನಸ್ಸಿಗೆ ತೃಪ್ತಿ

ಸ್ಪೂನ್ ಅಥವಾ ಫೋರ್ಕ್‍ನಲ್ಲಿ ಊಟ ಮಾಡಿದರೆ ಮನಸ್ಸು ತೃಪ್ತಿಯಾಗದೆ ಹೋಗಬಹುದು. ಆದರೆ ಕೈಯಲ್ಲಿ ಮಾಡುವ ಊಟದಿಂದ ಹೆಚ್ಚು ಸಂತಸ ಉಂಟು ಮಾಡುತ್ತದೆ. ಸೂಪ್‍ನಂತಹ ಆಹಾರ ಪದಾರ್ಥವನ್ನು ಕೈಬಳಸಿ ತಿನ್ನಲು ಸಾಧ್ಯವಿಲ್ಲ. ಅಂತಹ ಕಡೆ ವಿನಾಯ್ತಿ ನೀಡಿದರೂ ಆಹಾರ ಸೇವಿಸಲು ಪ್ರಧಾನವಾಗಿ ಕೈಯನ್ನೇ ಬಳಸುವುದು ಸೂಕ್ತ.

ಎಲ್ಲವನ್ನೂ ಆಸ್ವಾದಿಸಬಹುದು

ಕೈಯಿಂದ ಊಟಮಾಡುದು ಜೀರ್ಣಕ್ರಿಯೆ ಸರಾಗವಾಗುವುದು ಮಾತ್ರವಲ್ಲ, ನೀವು ತಿನ್ನುವ ಆಹಾರದ ವಾಸನೆ, ಉಷ್ಣಾಂಶ, ರುಚಿ ಎಲ್ಲವನ್ನೂ ಚೆನ್ನಾಗಿ ಆಸ್ವಾದಿಸಬಹುದು. ಜೊತೆಗೆ ನೀವು ಎಷ್ಟು ತಿಂದಿದ್ದೀರಾ ಎಂಬುದರ ಅಂದಾಜು ಕೂಡ ಸಿಗುತ್ತದೆ.

ಆಯುರ್ವೇದದ ನಂಬಿಕೆ

ನಮ್ಮ ಪುರಾಣಗಳ ಕಾಲದಿಂದಲೂ ಕೈಯಲ್ಲಿ ಊಟ ಮಾಡುವುದರ ಬಗ್ಗೆ ಒಂದು ನಂಬಿಕೆ ಇದೆ. ನಮ್ಮ ಇಡೀ ಶರೀರ ಐದು ಬೆರಳು ಹಾಗೂ ಹಸ್ತಕ್ಕೆ ಹೋಲಿಸಲಾಗುತ್ತದೆ. ಅದರಲ್ಲಿ ಒಂದು ಶಕ್ತಿಯೂ ಅಡಗಿದೆ. ಆಯುರ್ವೇದದ ಪ್ರಕಾರ ಪ್ರತಿಯೊಂದು ಬೆರಳಿನಲ್ಲಿ ಒಂದೊಂದು ವಿಶೇಷತೆಯಿದೆ. ಹೆಬ್ಬೆರಳು ಆಕಾಶವನ್ನು ಪ್ರತಿನಿಧಿಸಿದರೆ, ತೋರು ಬೆರಳು ವಾಯುವನ್ನು, ಮಧ್ಯ ಬೆರಳು ಅಗ್ನಿಯನ್ನು , ಉಂಗುರ ಬೆರಳು ನೀರನ್ನು, ಕಿರುಬೆರಳು ಭೂಮಿಗೆ ಹೋಲಿಸಲಾಗುತ್ತದೆ. ನಾವು ಊಟ ಮಾಡುವಾಗ ಈ ಐದು ಬೆರಳುಗಳನ್ನು ಒಗ್ಗೂಡಿಸಿ ತಿನ್ನಬೇಕಾಗುತ್ತದೆ. ಇದರಿಂದ ನಾವು ಸೇವಿಸುವ ಆಹಾರದ ಸ್ವಾದ ಸವಿಯಲು ಮನಸು ಜಾಗೃತಗೊಳ್ಳುತ್ತದೆ. ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಈ ಐದು ಬೆರಳುಗಳು ಜೀರ್ಣದ್ರವಗಳನ್ನು ಮುಂದಕ್ಕೆ ತರುವಲ್ಲಿ ಸಹಕಾರಿ.

ವೈಜ್ಞಾನಿಕ ಕಾರಣಗಳು

 • ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.
 • ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವಂತೆ.
 • ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ.
 • ಕೈಯಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೆ, ಯಾವುದೇ ಆಲೋಚನೆಗಳು ಬರದೆ ಒಂದೇ ಆಲೋಚನೆಯಲ್ಲಿ ಇರುತ್ತೇವೆ.
 • ನಮ್ಮ ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ತಯಾರಿಸಿದ ಆಹಾರವನ್ನು ಸ್ಫೂನ್ಸ್, ಫೋರ್ಕ್ಸ್‌ನಿಂದ ತಿನ್ನುವುದರಿಂದ ಪ್ರತಿಕ್ರಿಯೆ ಏರ್ಪಟ್ಟು ರುಚಿ ಕೆಡುತ್ತದೆ.
 • ಕೈ ಬೆರಳಲ್ಲಿ ಆಹಾರವನ್ನು ಕಲೆಸಿಕೊಂಡು, ಒಂದೊಂದೇ ತುತ್ತು ತಿನ್ನುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.
 • ಕೈಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ, ಬೆರಳು ತುಟಿಗೆ ತಾಗುತ್ತಿದ್ದಂತೆ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ.
 • ಇನ್ನು ಕೈ ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಪಾಲಾಗದೆ, ಆರೋಗ್ಯವಾಗಿರುತ್ತೇವೆ. ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇದು ಒಂದು ರೀತಿ ವ್ಯಾಯಾಮದಂತಿರುತ್ತದೆ.

ಜೋತಿಷ್ಯ ಮತ್ತು ಉರಾಣಗಳ ಏನು ಹೇಳುತ್ತದೆ…

 • ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ತತ್ವವನ್ನು ಹೊಂದಿರುತ್ತವೆ.
 • ಹೆಬ್ಬೆರಳು: ಅಗ್ನಿತತ್ವ
 • ತೋರು ಬೆರಳು: ವಾಯುತತ್ವ
 • ಮಧ್ಯ ಬೆರಳು: ಆಕಾಶ
 • ಉಂಗುರ ಬೆರಳು: ಭೂಮಿ
 • ಕಿರುಬೆರಳು: ಜಲತತ್ವ

ಈ ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ. ಇನ್ನೆಂದೂ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಮತ್ತು ಆರೋಗ್ಯವಂತರಾಗಿರಿ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...