newsmakers 2019ರಲ್ಲಿ ಸದ್ದುಗೈದು ಸುದ್ದಿ ಮಾಡಿದ ಪ್ರಮುಖರು

newsmakers

newsmakers 2019 ವರ್ಷದ ಐವರು ಸುದ್ದಿವೀರರು

ಬೆಂಗಳೂರು: ಕಾಲಚಕ್ರ ಉರುಳುತ್ತಿದೆ. ಅದರಡಿ 2019 ಇತಿಹಾಸದ ( newsmakers ) ಪುಟ ಸೇರುತ್ತಿದೆ. ಈ ವರ್ಷ ನಾನಾ ಕಾರೆಣಕ್ಕೆ ಸದ್ದು ಗದ್ದಲ ಎಬ್ಬಿಸಿತ್ತು. ಅದರ ಜೊತೆಗೇ ಅನೇಕರು ಸಾಕಷ್ಟು ಸದ್ದು ಮಾಡಿ ಸುದ್ದಿಯಲ್ಲಿ ಉಳಿದರು. ಅಂತಹ ಐವರು ಪ್ರಮುಖರನ್ನು ಇಲ್ಲಿ ಹೆಸರಿಸಲಾಗಿದೆ.

ಇದನ್ನೂ ಓದಿ: ಪೌರತ್ವ ಕಾಯ್ದೆ ವಿರೋಧಿಸಿ ರಂಗೋಲಿ, ಚೆನ್ನೈನಲ್ಲಿ 7 ಮಂದಿ ಬಂಧನ

ಮೋದಿ ಮೇನಿಯಾ
2014ರ ಗೆಲುವು ಅಚಾನಕ್ ಅಲ್ಲ, ಜನಮಾನಸದಲ್ಲಿ ತಮ್ಮ ಸ್ಥಾನ ಶಾಶ್ವತ ಎಂಬುದನ್ನು ನಿರೂಪಿಸುವಂತೆ ನರೇಂದ್ರ ಮೋದಿ ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಭರ್ಜರಿ ಬಹುಮತದೊಂದಿಗೆ ಪ್ರಧಾನಿಯಾಗಿ ಪುನರಾಯ್ಕೆಗೊಂಡು ದೇಶದ ರಾಜಕೀಯ ಕ್ಷಿತಿಜದಲ್ಲಿ ಹೊಸ ಅಧ್ಯಾಯದ ಸೃಷ್ಟಿಗೆ ಕಾರಣರಾದರು.

ರಾಹುಲ್ ಫ್ಲಾಪ್ ಶೋ
ಐದು ವರ್ಷಗಳಿಗೆ ಮೋದಿ ಆಡಳಿತಕ್ಕೆ ಕೊನೆ ಹಾಡುವ ಸಂಕಲ್ಪದಿಂದ ರಣಕಹಳೆ ಊದಿದ್ದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವನೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದರು. ಅವರ ಸ್ವಂತ ಕ್ಷೇತ್ರ ಅಮೇಠಿಯಲ್ಲಿ ಸಹ ಜನ ಅವರನ್ನಯ ಕೈಬಿಟ್ಟರು. ಚುನಾವಣಾ ಪ್ರಚಾರ ಕಣದಲ್ಲಿ ಸಾಕಷ್ಟು ಕಿಚ್ಚು ಪ್ರದರ್ಶಿಸಿದ್ದ ರಾಹುಲ್ ಪಾಲಿಗೆ ಗತ ವರ್ಷ ಒಂದು ರೀತಿಯಲ್ಲಿ ಫ್ಲಾಪ್ ಶೋ ಆಗಿತ್ತು

ಗೊಗೋಯಿ ನ್ಯಾಯ
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಸುದ್ದಿ ಪಟ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ ತಮ್ಮ ನಿವೃತ್ತಿಯ ಮೂರು ದಿನಗಳ ಮುಂಚೆ ಮಾಜಿ ಸಿಜೆ ರಂಜನ್ ಗೊಗೋಯಿ ಮಹತ್ವದ ತೀರ್ಪುಗಳನ್ನು ಪ್ರಕಟಿಸಿ ಸುದ್ದಿ ಶೂರರಾದರು. ಅದರಲ್ಲಿಯೂ ಅಯೋಧ್ಯಾ ರಾಮಜನ್ಮ ಭೂಮಿ ವಿಚಾರದಲ್ಲಿ ಗೊಗೋಯಿ ನೇತೃತ್ವದ ಐವರ ನ್ಯಾಯಪೀಠ ನೀಡಿದ ತೀರ್ಪು ವಿವಾದವನ್ನು ಸಮಾಧಿ ಮಾಡಿತು.

ಛಲದಂಕ ಮಲ್ಲ ಯಡಿಯೂರಪ್ಪ
2018ರಲ್ಲಿ ಮುಖ್ಯಮಂತ್ರಿ ಕುರ್ಚಿ ಮೇಲೆ ವಿರಾಜಮಾನರಾಗುವ ಅವಕಾಶವನ್ನು ಕಳೆದುಕೊಂಡ ಯಡಿಯೂರಪ್ಪ ಒಂದೇ ವರ್ಷದಲ್ಲಿ ಅಂದರೆ 2019ರಲ್ಲಿ ತಮ್ಮ ಆಸೆ ಈಡೇರಿಸಿಕೊಂಡರು. ಕೈ-ದಳ ಅತೃಪ್ತರ ಮನವೊಲಿಸಿ ಅವರು ನೀಡಿದ ರಾಜೀನಾಮೆಯಿಂದ ಸೃಷ್ಟಿಯಾದ ಬಹುಮತದ ಮೂಲಕ ಸಿಎಂ ಆದ ಬಿಎಸ್ವೈ ಉಪಚುನಾವಣೆಯಲ್ಲಿ ಬಹುತೇಕ ಅನರ್ಹರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

ಬೇವಿನಲ್ಲಿಯೇ ಬೆಲ್ಲದ ಸಿಹಿ ಕಂಡ ಡಿಕೆಶಿ
ವರ್ಷಾರಂಭದಲ್ಲಿ ಅಚಿವರಾಗಿದ್ದ ಡಿಕೆ ಶಿವಕುಮಾರ್‍ ವರ್ಷದ ಕೊನೆಯ ವೇಳೆಗೆ ಸಾಕಷ್ಟು ಏರುಪೇರು ಕಂಡರು. ಮೈತ್ರಿ ಸರಕಾರ ಉಳಿಸಿಕೊಳ್ಳಲು ನಡೆಸಿ ಪ್ರಯತ್ನ ಅವರ ಕೈಹಿಡಿಯಲಿಲ್ಲ. ಅಧಿಕಾರ ಹೋದ ಬೆನ್ನಿಗೇ ಐಟಿ ಮತ್ತು ಇಡಿ ಅಧಿಕಾರಿಗಳು ಬೆನ್ನು ಬಿದ್ದು ಡಿಕೆ ಅವರಿಗೆ ತಿಹಾರ್‍ ಜೈಲಿನ ರುಚಿ ತೋರಿಸಿದರು. ಬೇಲ್ ಮೇಲೆ ಹೊರಬಂದ ಡಿಕೆಶಿ 2020ರಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿಯ ಹೊಸ್ತಿಲಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...