nagara panchami ಹಬ್ಬಗಳ ಸಾಲಿನ ಹೆಬ್ಬಾಗಿಲು ನಾಗರ ಪಂಚಮಿ

nagara panchami
invoking the snake god

nagara panchami ಸೋದರ ಸಂಬಂಧ ಗಟ್ಟಿಗೊಳಿಸುವ ಹಬ್ಬ

ಬೆಂಗಳೂರು: ಶ್ರಾವಣ ಮಾಸ ಬಂತೆಮದರೆ ಅದೆಂತದೋ ಸಡಗರ, ( nagara panchami ) ಉಲ್ಲಾಸ ಮನೆ ಮಾಡುತ್ತದೆ. ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅದರದ್ದೇ ಆದ ಮಹತ್ವ ಇದೆ. ಅಂತಹ ಹಬ್ಬಗಳ ಋತುವನ್ನು ಬರಮಾಡಿಕೊಳ್ಳು ಮೊದಲ ಹಬ್ಬ ಎಂದರೆ ಅದು ನಾಗರ ಪಂಚಮಿ.

ಇದನ್ನೂ ಓದಿ: ಕಣ್ಮನ ಸೆಳೆಯುತ್ತಿರುವ ಶಿರಡಿ ಸಾಯಿ ನಿಜರೂಪದ ಮೇಣದ ಪ್ರತಿಮೆ

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಪ್ರಾರಂಭವಾಗುವ ಮೊದಲ ಹಬ್ಬ ನಾಗರ ಪಂಚಮಿಯಾಗಿರುವುದರಿಂದ ಇದನ್ನು ಹಬ್ಬಗಗಳ ಸಾಲಿನ ಹೆಬ್ಬಾಗಿಲು ಎಂದೂ ಕರೆಯುತ್ತಾರೆ.

ಪೌರಾಣಿಕ ಹಿನ್ನೆಲೆ

ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು ಜನಮೇಜಯನು ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ.

ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಜನಮೇಜಯನನ್ನು ಒಲಿಸಿಕೊಂಡು ವರ ಪಡೆಯುತ್ತಾನೆ. ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳುತ್ತಾನೆ.

ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿ ಪ್ರಾಯಶ್ಚಿತ್ತಕ್ಕಾಗಿ ಮಹಾಭಾರತ ಕೇಳಲು ಶುರುಮಾಡಿದುದು ಶ್ರಾವಣ ಶುದ್ಧ ಪಂಚಮಿ ದಿನವೇ ಈಗಿನ ನಾಗರ ಪಂಚಮಿ ಎನಿಸಿದೆ.

ನಾಗದೇವತೆಯನ್ನು ಪ್ರಾಣಗಳಿಗೆ ಸಮೀಕರಣ ಮಾಡಿಕೊಂಡು ಆಧ್ಯಾತ್ಮ ಸಾಧನೆ ಮಾಡಲಾಗುತ್ತದೆ. ಸರ್ಪ ಕುಂಡಿಲಿನಿ ಶಕ್ತಿಯ ಪ್ರತೀಕ. ಸರ್ಪದ ಮಂಡಲಾಕಾರ ಪೂರ್ಣವೃತ್ತ ಅಥವಾ ಶೂನ್ಯ. ಈ ಪೂರ್ಣದಲ್ಲಿ ಪೂರ್ಣವನ್ನು ಕಳೆದರೆ ಶೇಷವೂ ಪೂರ್ಣ. ಈ ಶೇಷನೇ ಆದಿಶೇಷನೆಂದು ಹೇಳುವರು. ಸರ್ಪ ಸ್ವರೂಪದಲ್ಲಿರುವ ಸಚ್ಚಿದಾನಂದ ಸ್ವರೂಪವನ್ನು ಕುಂಡಲಿನಿ ಶಕ್ತಿಯಿಂದ ಜಾಗೃತಗೊಳಿಸಿ ಆರಾಧಿಸಲಾಗುತ್ತದೆ.

ನಾಗರ ಪಂಚಮಿಯಂದು ಸೋದರ – ಸೋದರಿಯರು ಸಂವೃದ್ಧಿಯಿಂದ ಇರಲಿ ಎಂದು ಪ್ರಾರ್ಥಿಸಿ ಹುತ್ತಕ್ಕೆ ಎರೆದ ಹಾಲನ್ನು ಸಹೋದರರ ಬೆನ್ನಿಗೆ ಹಚ್ಚಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಈ ಕಾರಣದಿಂದ ನಾಗರಪಂಚಮಿಯನ್ನು ಅಣ್ಣ-ತಂಗಿ ಹಬ್ಬವೆಂದೂ ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...