mysuru ಜಂಬೂಸವಾರಿಗೆ ಮೈಸೂರು ಸಜ್ಜು, 8 ಸಾವಿರ ಪೊಲೀಸರ ಭದ್ರತೆ

mysuru
mysuru dasara procession (file photo)

mysuru ಮಂಗಳವಾರ ಜಂಬೂಸವಾರಿ ಕಣ್ತುಂಬಿಕೊಳ್ಳಲು ಮೈಸೂರಿನತ್ತ ಜನಸಾಗರ

ಮೈಸೂರು: ನಾಡಹಬ್ಬ ದಸರೆಯ ಪ್ರಧಾಣ ಆಕರ್ಷಣೆಯಾದ ಜಂಬೂಸವಾರಿಗೆ ( mysuru ) ಸಾಂಸ್ಕೃತಿಕ ನಗರಿ ಮೈಸೂರು ಸರ್ವಸನ್ನದ್ಧವಾಗಿದೆ. ಈ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನ ಸಾಗರೋಪಾದಿಯಲ್ಲಿ ಜನ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ದಸರೆ ಎಂದರೆ ಸಂಭ್ರಮ, ನಾನು ದೇವಿಯ ಆರಾಧಕಿ: ರಚಿತಾರಾಮ್

ಕಳೆದ ಎಂಟು ದಿನಗಳಿಂದ ಸಂಭ್ರಮದಿಂದ ಸಾಗಿರುವ ನವರಾತ್ರಿಯ ಪೂಜಾರಾಧನೆ ಜೊತೆಗೆ ಸೋಮವಾರ ಅರಮನೆಯಲ್ಲಿ ಆಯುಧಪೂಜೆ ವಿಜೃಂಭಣೆಯಿಂದ ಸಾಂಪ್ರದಾಯಿಕವಾಗಿ ನೆರವೇರಿತು.

ವಿಜಯದಶಮಿ ಅಂಗವಾಗಿ ಮಂಗಳವಾರ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯದ ನಂತರ ಮಧ್ಯಾಹ್ನ 2.15 ರಿಂದ 2.58ರವರೆಗಿನ ಶುಭ ಮಕರ ಲಗ್ನದಲ್ಲಿ ನಂದಿ ಪೂಜೆ ನಡಯಲಿದೆ.

ಇದಾದ ಬಳಿಕ ಚಿನ್ನದ ಅಂಬಾರಿ ಹೊತ್ತ ಗಜಪಡೆ ಬನ್ನಿ ಮಂಟಪದವರೆಗೆ ಗಜಗಾಂಬೀರ್ಯದಲ್ಲಿ ಸಾಗಲಿವೆ. ಕಳೆದ ಕೆಲ ವರ್ಷಗಳಂತೆಯೇ ಈ ಬಾರಿಯೂ ಅರ್ನುನ ಗಜಪಡೆಯ ನೇತೃತ್ವ ವಹಿಸಲಿದ್ದಾನೆ.

ಈ ಬಾರಿ ದಸರಾ ಹಬ್ಬ ಸುಸೂತ್ರವಾಗಿ ನೆರವೇರುವ ಸಲುವಾಗಿ ಅಧಿಕಾರಿಗಳು ಎಲ್ಲ ಅಗತ್ಯ ಏರ್ಪಾಟುಗಳನ್ನು ಮಾಡಿದ್ದಾರೆ. ಸುಮಾರು ಎಂಟು ಸಾವಿರ ಮಂದಿ ಪೊಲೀಸರು ಜಂಬೂ ಸವಾರಿಯ ಮೇಲೆ ಹದ್ದಿನ ಕಣ್ಣಿಡಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...