modi states ರೈತರಿಗೆ 12 ಸಾವಿರ ಕೋಟಿ ರೂ ನೆರವು: ಪ್ರಧಾನಿ ಮೋದಿ

modi states
prime minister narendra modi

modi states ತುಮಕೂರಿನಲ್ಲಿ ಕೃಷಿ ಕರ್ಮಣರನ್ನು ಸಮ್ಮಾನಿಸಿದ ಮೋದಿ

ತುಮಕೂರು: ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ( modi states ) ಕಳೆದ 12 ತಿಂಗಳಲ್ಲಿ ದೇಶಾದ್ಯಂತ 8 ಕೋಟಿ ರೈತರಿಗೆ 12 ಸಾವಿರ ಕೋಟಿ ರೂಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಉದ್ಧವ್ ಸಂಪುಟ 19 ಕುಟುಂಬಗಳ ಕೂಟ!

ತುಮಕೂರಿನಲ್ಲಿ ಗುರುವಾರ ಕೃಷಿ ಕರ್ಮಣ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಅನ್ನದಾತರ ಏಳಿಗೆಗೆ ತಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ರೈತರು ಬೆಳೆದ ಬೆಳೆಗೆ ಕನಿಷ್ಟ ಬೆಂಬಲ ನೀಡುವ ಕಾರ್ಯಗಳನ್ನು ಈಗಾಗಲೇ ಅನುಷ್ಟಾನಗೊಳಿಸಿದ್ದೇವೆ ಎಂದರು

ಕೃಷಿ ಸಮ್ಮಾನ್ ಯೋಜನೆ ಎಲ್ಲ ರಾಜ್ಯಗಳಲ್ಲೂ ಜಾರಿಯಾಗಬೇಕು. ಇದರಲ್ಲಿ ಯಾವುದೇ ರಾಜಕೀಯ ಲಾಭದ ಉದ್ದೇಶವಿಲ್ಲ. ಈ ಯೋಜನೆಯನ್ನು ವಿರೋಧಿಸುವುದು ಸರಿಯಲ್ಲ. ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಗೆ ಹೆಚ್ಚಿಸುವ ಗುರಿ ಹಾಕಿಕೊಂಡಿದ್ದೇವೆ. ಇದರಲ್ಲಿ ರೈತರ ಪಾಲು ಹೆಚ್ಚಾಗಿರಲಿದೆ ಎಂದು ಮೋದಿ ಹೇಳಿದರು.

ಹಿಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಒಂದು ರೂ ಬಿಡುಗಡೆ ಮಾಡಿದ್ದರೆ ಕೇವಲ 15 ಪೈಸೆ ತಲುಪುತ್ತಿತ್ತು. ಆದರೆ ನಮ್ಮ ಸರ್ಕಾರ ಪೂರ್ಣ ಹಣ ಫಲಾನುಭವಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಮೋದಿ ತಿಳಿಸಿದರು.

ದೇಶದಲ್ಲಿ ದಾಖಲೆ‌ ಪ್ರಮಾಣದಲ ಆಹಾರ ಉತ್ಪಾದನೆಯಾಗಿದೆ.‌ ಇದರ ಹಿಂದಿನ ರೈತರ ಪರಿಶ್ರಮಕ್ಕೆ ಅಭಿನಂದನೆಗಳು. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಮೀನುಗಾರರಿಗೆ ಅನುಕೂಲವಾಗುವಂತೆ ವಿಶೇಷ ಸಲಕರೆಣೆಗಳನ್ನು ಒದಗಿಸಿರುವುದು ನನಗೆ ಸಂತಸ ತಂದಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...