modi on verdict ರಾಮ, ರಹೀಮ ಭಕ್ತಿಗಿಂತ ದೇಶಭಕ್ತಿ ಮಿಗಿಲು, ತೆರೆದ ನವ ಭಾರತದ ಬಾಗಿಲು: ಮೋದಿ

modi on verdict
prime minister narendra modi

modi on verdict ಅಯೋಧ್ಯಾ ವಿವಾದ ಪರಿಹಾರ ಕುರಿತು ಪ್ರಧಾನಿ ಮೋದಿ ಮಾತು

ಹೊಸದಿಲ್ಲಿ: ದಶಕಗಳಿಂದ ದೇಶದ ಶಾಂತಿಗೆ ಕಂಟಕವಾಗಿದ್ದ ( modi on verdict ) ಅಯೋಧ್ಯಾ ವಿವಾದಕ್ಕೆ ಸುಪ್ರೀಂ ಕೋಟರ್ಉ ಅಂತ್ಯ ಹಾಡಿರುವುದನ್ನು ಶ್ಲಾಘಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ತೀರ್ಪು ನವ ಭಾರತದ ಬಾಗಿಲು ತೆರೆದಿದೆ. ಒಂದಾಗಿ ನಡೆಯಬೇಕಾದ ಕರ್ತವ್ಯವನ್ನು ಪುನರುಚ್ಛರಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಅಯೋಧ್ಯಾ ಐತೀರ್ಪು: ರಾಮ ಮಂದಿರ ನಿರ್ಮಾಣ ಹಾದಿ ಸುಗಮ, ಮಸೀದಿಗೆ ಪರ್ಯಾಯ…

ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಟಣೆಯೊಂದಿಗೆ ಈ ವಿವಾದದ ಕುರಿತಾದ ಎಲ್ಲ ಕಾನೂನು ಪ್ರಕ್ರಿಯೆಗಳಿಗೆ ತೆರೆ ಬಿದ್ದಂತಾಗಿದೆ ಎಂದು ಪ್ರಧಾನಿ ಮೋದಿ ಅವರು ಶನಿವಾರ ಸಂಜೆ ದೇಸವನ್ನು ಉದ್ದೇಶೀಸಿ ಹೇಳಿದರು. ಇದೇ ವೇಳೆ ಇಂತಹ ಒಂದು ಸವ‍್ ಒಪ್ಪಿತ ತೀರ್ಪು ಹೊರಬರುವಂತಾಗಲು ಶ್ರಮಿಸಿದ ನ್ಯಾಯ ವ್ಯವಸ್ಥೆಗೆ ಮೋದಿ ಶರಣೆಂದರು.

ಈ ತೀರ್ಪು ಯಾರೊಬ್ಬರ ಸೋಲು, ಗೆಲುವು ಅಲ್ಲ. ರಾಮ ಅಥವಾ ರಹೀಮ ಭಕ್ತಿಯೇ ಆಗಿರಲಿ ರಾಷ್ಟ್ರಭಕ್ತಿಯ ಚೈತನ್ಯವನ್ನು ಬಲಪಡಿಸಿಕೊಳ್ಳುವುದು ಮುಖ್ಯ. ಸದ್ಯದ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಜಯಿಸಬೇಕಿದೆ ಎಂದು ಇದಕ್ಕೆ ಮುನ್ನ ಮೋದಿ ಟ್ವೀಟ್ ಮಾಡಿದ್ದರು.

ದೇಶದ ನ್ಯಾಯಾಂಗ ವ್ಯವಸ್ಥೆಯ ದೂರದೃಷ್ಠಿ, ಪಾರ್ದರ್ಶಕತೆ ಮತ್ತು ಸ್ವಾಂತತ್ರ್ಯವನ್ನು ಈ ಐತಿಹಾಸಿಕ ತೀರ್ಪು ಎತ್ತಿ ಹಿಡಿದಿದೆ. ಕಾನೂನಿನ ಅಡಿ ಎಲ್ಲರೂ ಸಮಾನರೇ ಎಂಬುದನ್ನು ಈ ತೀರ್ಪು ಸಾರಿ ಹೇಳಿದೆ ಎಂದು ಮೋದಿ ಹೇಳಿದ್ದರು.

ಸುಪ್ರೀಂ ಕೋರ್ಟ್‌ ನೀಡಿರುವ ಈ ತೀರ್ಪನ್ನು ಒಪ್ಪಿಕೊಂಡು ದೇಶವಾಸಿಗಳು ಶಾಂತಿ ಕಾಪಾಡುವ ಮೂಲಕ ಭಾರತದಲ್ಲಿ ಶಾಂತಿ ಸಹಬಾಳ್ವೆ ಅಂತರ್ಗತವಾಗಿದೆ ಎಂಬುದನ್ನು ತೋರಬೇಕಾಗಿದೆ. ಏಕತೆ ಮತ್ತು ಒಗ್ಗಟ್ಟಿನ ಮೂಲಕ ಪ್ರತಿಯೊಬ್ಬ ಭಾರತೀಯನೂ ಸಶಕ್ತನಾಗಲಿ ಎಂದು ಪ್ರಧಾನಿ ಹಾರೈಸಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...