mobile ban ಆಡಿಯೋ, ವಿಡಿಯೋ ಭೀತಿ: ಸಿಎಂ ಯಡಿಯೂರಪ್ಪ ಸುತ್ತ ಮೊಬೈಲ್ ಬ್ಯಾನ್

mobile ban
chief minister yediyurappa

mobile ban ಹುಬ್ಬಳ್ಳಿ ವಿಡಿಯೋ ಲೀಕ್ ನಂತರ ಬಿಎಸ್ವೈ ಜಾಗೃತ

ಬೆಂಗಳೂರು: ಹುಬ್ಬಳ್ಳಿ ಸಭೆಯಲ್ಲಿ ಆಡಿದ ಮಾತುಗಳ ( mobile ban) ಆಡಿಯೋ ಲೀಕ್ ಆಗಿ ಮೂಡಿಸಿರುವ ಮುಜುಗರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಮೊಬೈಲ್‌ ಬ್ಯಾನ್ ಮಾಡಲಾಗಿದೆ.

ಇದನ್ನೂ ಓದಿ: ಟಿಪು ಪರ ಬ್ಯಾಟ್ ಬೀಸಿದ ನ್ಯಾ. ಸಂತೋಷ್ ಹೆಗ್ಡೆ

ಯಾರು ಯಾವಾಗ ಏನು ವಿಡಿಯೋ ಮಾಡುತ್ತಾರೋ, ತಾವಾಡುವ ಮಾತುಗಳನ್ನು ರೆಕಾರ್ಡ್‌ ಮಾಡಿ ಆಡಿಯೋ ಬಿಡುಗಡೆ ಮಾಡುತ್ತಾರೋ ಎಂಬ ಆತಂಕ ಮುಖ್ಯಮಂತ್ರಿಯನ್ನು ಕಾಡುತ್ತಿರುವಂತಿದ್ದು, ಅದಕ್ಕಾಗಿಯೇ ಅಧಿಕಾರಿಗಳು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿಗಳ ಭೇಟಿಗೆ ತೆರಳುವವರು ನಿರ್ದಿಷ್ಟ ಸ್ಥಳದಲ್ಲಿ ತಮ್ಮ ಮೊಬೈಲ್ ಫೋನುಗಳನ್ನು ಜಪ್ತು ಮಾಡಿ ಸಿಎಂ ಭೇಟಿ ಮಾಡಬೇಕು ಎಂದು ಅಲಿಖಿತ ಆದೇಶ ಹೊರಡಿಸಲಾಗಿದೆ ಎಂದು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ.

ಈ ವಿಚಾರವಾಗಿ ಪಕ್ಷದ ಎಲ್ಲ ಜಿಲ್ಲಾ ಮುಖಂಡರು ಹಾಗೂ ಕಾರ್‍ಯಕರ್ತರಿಗೆ ಮೌಖಿಕ ಸೂಚನೆ ನೀಡಲಾಗಿದೆ. ಇನ್ನು ಯಡಿಯೂರಪ್ಪ ಅವರು ರಾಜಧಾನಿಯಿಂದ ಹಿರಗೆ ಪ್ರವಾಸ ಹೋದಾಗಲೂಅವರ ಭೇಟಿಗೆ ಬರುವವರಿಂದ ಮೊಬೈಲ್ ಅನ್ನು ಪ್ರತ್ಯೇಕಿಸುವ ಕಾರ್‍ಯ ನಡೆದಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...