mithun unique ಒಂದೇ ಓವರಿನಲ್ಲಿ 5 ವಿಕೆಟ್ ಕಿತ್ತ ಮಿಥುನ್: ಟಿ-20 ಫೈನಲ್ಲಿಗೆ ಕರ್ನಾಟಕ

mithun unique
abhimanyu mithun

mithun unique  ಮುಷ್ತಾಕ್ ಅಲಿ ಸೆಮಿಫೈನಲ್; ಹರ್‍ಯಾಣ 8/194, ಕರ್ನಾಟಕ 2/195

ಸೂರತ್: ಮಧ್ಯಮ ವೇಗಿ ಅಭಿಮನ್ಯು ಮಿಥುನ್ ಅವರ ದಾಖಲೆಯ ( mithun unique  ) ಬೌಲಿಂಗ್ ಪ್ರದರ್ಶನ ಮತ್ತು ನೆರವಿನಿಂದ ಹರ್‍ಯಾಣವನ್ನು ಬಗ್ಗುಬಡಿದ ಕರ್ನಾಟಕ ಸಯ್ಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಪಂದ್ಯಾವಳಿಯ ಫೈನಲ್ಲಿಗೆ ಕಾಲಿಟ್ಟಿದೆ.

ಇದನ್ನೂ ಓದಿ: ಮಿಂಚಿದ ರಾಹುಲ್, ಮೋರೆ: ಪಂಜಾಬ್‌ಗೆ ಕರ್ನಾಟಕ ಪಂಚ್

ಶುಕ್ರವಾರ ನಡೆದ ಪಂದ್ಯದಲ್ಲಿ ಮಿಥುನ್ ಟೂರ್ನಿಯ ತಮ್ಮ ಎರಡನೇ ಹ್ಯಾಟ್ರಿಕೆ ದಾಖಲಿಸಿದರಲ್ಲದೇ ಒಂದೇ ಓವರಿನಲ್ಲಿ ಹ್ಯಾಟ್ರಿಕ್ ಸಮೇತ 5 ವಿಕೆಟ್ ಕಬಳಿಸಿ ಟಿ-20 ಇತಿಹಾಸದಲ್ಲಿ ಹೊಸ ವಿಕ್ರಮ ಸ್ಥಾಪಿಸಿದರು.

ಹರ್‍ಯಾಣದ ಕಡೆಯ ಓವರಿನಲ್ಲಿ ದಾಳಿಗಿಳದ ಮಿಥುನ್ ಮೊದಲ ನಾಲ್ಕು ಎಸೆತಗಳಲ್ಲಿ ನಾಲ್ವರು ಹರ್‍ಯಾಣ್ವಿಗಳನ್ನು ಪೆವಿಲಿಯನ್‌ಗೆ ಅಟ್ಟಿದರು ಮತ್ತೆ ಆರನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದು ದಾಖಲೆ ಬರೆದರು. ಹರ್‍ಯಾಣದ ಸರದಿ 8 ವಿಕೆಟ್ಟಿಗೆ 194 ರನ್ನುಗಳಿಗೆ ಕೊನೆಗೊಂಡಿತು. ರಾಣಾ ೬೧ ಹಾಗೂ ಬಿಶ್ನೋಯಿ ೫೫ ರನ್ ಮಾಡಿದರು.

ಇದಕ್ಕೆ ಉತ್ತರವಾಗಿ ಕರ್ನಾಟಕ ಶರವೇಗದಲ್ಲಿ ಮುನ್ನುಗ್ಗಿತು. ಕೇವಲ ೧೫ ಓವರುಗಳಲ್ಲಿ ಕರ್ನಾಟಕದ ದಾಂಡಿಗರು ೨ ಹುದ್ದರಿ ನಷ್ಟಕ್ಕೆ ೧೯೫ ರನ್ ದಾಖಲಿಸಿ ಸುಲಭದ ಜಯ ತಂದಿತ್ತರಲ್ಲದೇ ಫೈನಲ್‌ಗೆ ಅಣಿಯಾದರು.

ಕರ್ನಾಟಕದ ಉತ್ತರದಲ್ಲಿ ಆರಂಭಿರಕರಾದ ಕೆಎಲ್ ರಾಹುಲ್ ಹಾಗು ದೇವದತ್ ಪಡಿಕ್ಕಲ್ ಮಿಮಚಿನ ಆಟವಾಡಿದರು. ರಾಹುಲ್ 31 ಎಸೆತಗಳಲ್ಲಿ 66 ರನ್ ಗಳಿಸಿದರೆ ದೇವದತ್ತ ಪಡಿಕ್ಕಲ್ 42 ಎಸೆತಗಳಲ್ಲಿ 87 ರನ್ ಸಿಡಿಸಿದರು. ನಾಯಕ ಮನೀಶ್ ಪಾಂಡೆ 14 ಎಸೆತಗಳಲ್ಲಿ 30 ರನ್ ಮಾಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...