ಈ ಕೆಲಸಗಳನ್ನು ಮಾಡಿದರೆ ಜೈಲು ಗ್ಯಾರಂಟಿ

ವಾಟ್ಸ್ಆಪ್‌ನಲ್ಲಿ ಬಹಳ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡ್ತಿರ್ತೀರಾ? ಅಥವಾ ಯಾವುದಾದರೂ ವಾಟ್ಸ್ಆಪ್‌ ಗ್ರೂಪ್‌ನ ಅಡ್ಮಿನ್ ಆಗಿದ್ದೀರಾ? ನಿಮಗೆ ಬಂದ ಸಂದೇಶಗಳ ಸಾಚಾತನ ಪರಿಶೀಲನೆ ಮಾಡದೆ ಹಾಗೇ ಇನ್ನೊಬ್ಬರಿಗೆ ಫಾರ್ವರ್ಡ್ ಮಾಡಿದರೋ ಹುಷಾರ್‌! ಕೆಲವು ಸಂದೇಶಗಳು ಜೈಲು ತಲುಪಿಸಬಹುದು. ವಾಟ್ಸ್‌ಆಪ್

ವಾಟ್ಸ್ಆಪ್‌ ತಪ್ಪು ಮಾಹಿತಿ, ಕೆಟ್ಟ ಸಂದೇಶ ಇತ್ಯಾದಿಗಳ ವಿರುದ್ಧ ಸಮರ ಸಾರಿದೆ. ತಪ್ಪು ಸಂದೇಶಗಳು, ಸುಳ್ಳಿನ ಸುದ್ದಿಗಳನ್ನು ಹರಡುವಿಕೆ ವಾಟ್ಸ್ ಆಪ್‌ನಲ್ಲಿ ಇತ್ತೀಚೆಗೆ ಅಧಿಕಗೊಂಡಿದೆ.

ವಾಟ್ಸ್ಆಪ್‌
whatsapp

ಪ್ರತಿ ಬಳಕೆದಾರರ ಮೆಟಾ ಡಾಟಾವನ್ನು ಕಂಪೆನಿಯು ಕಲೆಕ್ಟ್ ಮಾಡುತ್ತದೆ ಮತ್ತು ಇದನ್ನು ಕಾನೂನು ಅಗತ್ಯತೆ ಬಿದ್ದಾಗ ಕಾನೂನಿಗೆ ತೋರಿಸಲು ಕೂಡ ವಾಟ್ಸ್ ಆಪ್ ಮುಂದಾಗುತ್ತದೆ ಎಂಬ ವಿಚಾರ ಹೆಚ್ಚಿನ ವಾಟ್ಸ್ಆಪ್‌ ಬಳಕೆದಾರರಿಗೆ ತಿಳಿದಿರಲಿಕ್ಕಿಲ್ಲ. ಪೋಲೀಸರು ನೀವು ಯಾರ ಜೊತೆಗೆ ಚಾಟ್ ಮಾಡುತ್ತಿದ್ದೀರಿ, ಎಷ್ಟು ಹೊತ್ತು , ಯಾವ ಸಮಯಕ್ಕೆ ಚಾಟ್ ಮಾಡಿದ್ದೀರಿ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.

ಕೆಳಗೆ ತಿಳಿಸಿರುವ ಯಾವುದೇ ಕೃತ್ಯದಲ್ಲಿ ವಾಟ್ಸ್ ಆಪ್ ಬಳಕೆದಾರ ತೊಡಗಿದ್ದರೆ ಅಂತಹವರನ್ನು ಅರೆಸ್ಟ್ ಮಾಡುವುದಕ್ಕೆ ಪೋಲೀಸರಿಗೆ ಅವಕಾಶವಿರುತ್ತದೆ.

  • ವಾಟ್ಸ್ಆಪ್‌ನಲ್ಲಿ ಯಾವುದೇ ರೀತಿಯ ದೇಹದ ವ್ಯಾಪಾರ ಮತ್ತು ವೇಶ್ಯಾವಾಟಿಕೆಯನ್ನು ಉತ್ತೇಜಿಸುವ ಕೆಲಸ ಮಾಡುವಂತಿಲ್ಲ.
  • ಮಾರ್ಫಿಡ್ ಮಾಡಿರುವ ಯಾವುದೇ ಪ್ರಮುಖ ವ್ಯಕ್ತಿಯ ಫೋಟೋವನ್ನು ವಾಟ್ಸ್ಆಪ್‌ನಲ್ಲಿ ಹಂಚುವಂತಿಲ್ಲ.
  • ವಾಟ್ಸ್ಆಪ್‌ನಲ್ಲಿ ಮಹಿಳಾ ದೌರ್ಜನ್ಯ ನಡೆಸುವಂತಿಲ್ಲ
  • ಬೇರೆ ಯಾವುದೋ ವ್ಯಕ್ತಿಯ ಹೆಸರಿನಲ್ಲಿ ವಾಟ್ಸ್ಆಪ್‌ ಅಕೌಂಟ್‌ನ್ನು ತೆರೆದು ನಡೆಸುವಂತಿಲ್ಲ.
  • ಅವಮಾನ ಮಾಡುವ ಉದ್ದೇಶದಿಂದ ಯಾವುದೇ ಧರ್ಮ ಅಥವಾ ಪೂಜಾ ಸ್ಥಳಕ್ಕೆ ಸಂಬಂಧಿಸಿದ ದ್ವೇಷ ಪೂರಿತ ಸಂದೇಶಗಳನ್ನು ಕಳುಹಿಸುವಂತಿಲ್ಲ.
  • ಸುಳ್ಳು ಸುದ್ದಿಗಳನ್ನು ಹರಡುವುದು ಅಥವಾ ಹಿಂಸಾಚಾರ, ಗಲಭೆಗೆ ಕಾರಣವಾಗುವ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಅಥವಾ ವದಂತಿಗಳನ್ನು ಹರಡುವಂತಿಲ್ಲ.
  • ಬ್ಯಾನ್ ಆಗಿರುವ ಯಾವುದೇ ವಸ್ತು ಅಥವಾ ಔಷಧವನ್ನು ಪ್ರಮೋಟ್ ಮಾಡುವುದು ಅಥವಾ ಮಾರಾಟ ಮಾಡುವಂತಿಲ್ಲ.
  • ಅಕ್ರಮವಾಗಿ ಚಿತ್ರಿಸಿದ ಯಾವುದೇ ಜನರ ವೀಡಿಯೋವನ್ನು ಹಂಚುವಂತಿಲ್ಲ.
  • ಅಶ್ಲೀಲ ಚಿತ್ರ ಅಥವಾ ಅಶ್ಲೀಲ ವಸ್ತುವನ್ನು ವಾಟ್ಸ್ಆಪ್‌ನಲ್ಲಿ ಹಂಚಿಕೆ ಮಾಡುವಂತಿಲ್ಲ.
ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...