missed call ಪೌರತ್ವ ಶಾಸನ ಬೆಂಬಲಿಸಲು 8866288662ಗೆ ಮಿಸ್ಡ್ ಕಾಲ್ ಮಾಡಿ

missed call

missed call ಪೌರತ್ವ ಕಾಯಿದೆ ಪರ ಬಿಜೆಪಿಯಿಂದ ಹೊಸ ಅಭಿಯಾನ

ಹೊಸದಿಲ್ಲಿ: ಪೌರತ್ವ ಕಾಯಿದೆಯ ಪರ ದೊಡ್ಡ ಮಟ್ಟದ ಅಭಿಯಾನಕ್ಕೆ ( missed call ) ಬಿಜೆಪಿ ಮುಂದಾಗಿದ್ದು, ಇದಕ್ಕಾಗಿ ಹೊಸ ಉಪಾಯ ಕಂಡುಕೊಂಡಿದೆ. ಪೌರತ್ವ ಪರ ಇರುವವರು ಮಿಸ್ಡ್ ಕಾಲ್ ಮಾಡುವ ಮೂಲಕ ತಮ್ಮ ಬೆಂಬಲ ದಾಖಲಿಸಲು ಬಿಜೆಪಿ ಅನುವು ಮಾಡಿಕೊಟ್ಟಿದೆ.

ಇದನ್ನೂ ಓದಿ: ರೈತರಿಗೆ 12 ಸಾವಿರ ಕೋಟಿ ರೂ ನೆರವು: ಪ್ರಧಾನಿ ಮೋದಿ

ಇದಕ್ಕಾಗಿಯೇ ಎಂಬ ಹೊಸ ನಂಬರ್‍ 8866288662 ಚಾಲು ಮಾಡಲಾಗಿದ್ದು, ಈ ನಂಬರಿಗೆ ಫೋನಾಯಿಸಿ ಪೌರತ್ವ ಶಾಸನವನ್ನು ಬೆಂಬಲಿಸುವಂತೆ ಬಿಜೆಪಿ ಜನರಿಗೆ ಕರೆ ಕೊಟ್ಟಿದೆ. ಈ ಶಾಸನದ ವಿರುದ್ಧ ದೇಶದಲ್ಲಿ ಪ್ರತಿಭಟನೆ ಅವ್ಯಾಹತವಾಗಿ ಸಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಈ ಕ್ರಮಕ್ಕೆ ಮುಂದಾಗಿದೆ.

ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ದೇಸದ ವಿವಿಧೆಡೆ ಪೌರತ್ವ ಕಾಯಿದೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದು ಸುಮಾರು ೨೫ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈಗಲೂ ಸಹ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಲೆ ಇವೆ.

ಈ ಕಾಯಿದೆಯಿಮದ ದೇಶವಾಸಿಗಳಿಗೆ ಯಾವುದೇ ಬಾಧೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಿಜೆಪಿ ಸಹ ಸಾಕಷ್ಟು ಪ್ರಯತ್ನ ಮಾಡಿದೆ. ಈ ಪ್ರಯತ್ನದ ಅಂಗವಾಗಿಯೇ ಈಗ ಮಿಸ್ಡ್ ಕಾಲ್ ಅಭಿಯಾನ ಸಹ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...