minto ಮಿಂಟೊ ಅಚಾತುರ್ಯ ವೈದ್ಯರ ನಿರ್ಲಕ್ಷ್ಯ ಅಲ್ಲ: ಡಾ. ವೆಂಕಟೇಶ್

minto
minto eye hospital

minto ಔಷಧದ ಪರಿಣಾಮ ಆದ ದುರ್ಘಟನೆ ಎಂದ ವೈದ್ಯಾಧಿಕಾರಿಗಳು

ಬೆಂಗಳೂರು: ನಗರದ ಪ್ರತಿಷ್ಠಿತ ಮಿಂಟೊ ಕಣ್ಣಾಸ್ಪತ್ರೆಯಲ್ಲಿ ( minto ) ಶಸ್ತ್ರಚಿಕಿತ್ಸೆಗೆ ಒಳಗಾದವರು ದೃಷ್ಟಿ ಸಂಬಂಧಿ ತೊಂದರೆಗೆ ಒಳಗಾಗಿದ್ದಾರೆ ಎಂಬ ವರದಿಗಳಿಗೆ ಆಸ್ಪತ್ರೆ ಅಧಿಕಾರಿಗಳು ಸ್ಪಂದಿಸಿದ್ದು, ಇದು ವೈದ್ಯರ ನಿರ್ಲಕ್ಷ್ಯದಿಂದ ಆದ ಪ್ರಮಾದವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪ್ರೊಟೀನ್ಸ್ ತಿನ್ನಿ, ಆಯಸ್ಸನ್ನು ವೃದ್ಧಿಗೊಳಿಸಿ

120 ವರುಷಗಳಿಗಿಂತ ಅಧಿಕ ಸೇವೆಸಲ್ಲಿಸುತ್ತಿರುವ ಪ್ರತಿಷ್ಟಿತ ಮಿಂಟೋ ಕಣ್ಣಾಸಿಯಲ್ಲಿ ಕಳೆದ ಒಂಬತ್ತರಂದು ನಡೆದ 24 ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ಉಂಟಾದ ತೊಂದರೆಗಳ ಬಗ್ಗೆ ವರದಿಗಳು ಪ್ರಕಟವಾಗಿದ್ದವು.

ಇದಕ್ಕೆ ಸ್ಪಷ್ಟೀಕರಣ ನೀಡಿರುವ ವಿಂಟೋ ಕಣ್ಣಾಸ್ಪತ್ರೆಯ ನೇತ್ರಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಎಂ. ವೆಂಕಟೇಶ್ ಅವರು ಈ ವಿಷಾದನೀಯ ಪ್ರಕರಣ ವೈದ್ಯರ ಅಚಾತುರ್ಯದಿಂದ ಆದದ್ದಲ್ಲ ಎಂದು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸುವ ರೋಗಿಗಳಿಗೆ ಉಪಯೋಗಿಸಿದ ಔಷಧಿ ( Occugel 2 % ) ಯಲ್ಲಿ ಸೋಂಕಿನಿಂದ ಕಣ್ಣುಗಳ ದೃಷ್ಟಿಗೆ ತೊಂದರೆಯಾಗಿರುತ್ತದೆ . ಕೂಡಲೇ ವೈದ್ಯರು ಈ ಔಷಧಿಗಳನ್ನು ಬೆಂಗಳೂರಿನ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿದ್ದು ರೋಗಿಗಳು ಗುಣಮುಖವಾಗಲು ಅಗತ್ಯ ಕ್ರಮಗಳನ್ನು ಜರುಗಿಸಿದ್ದಾರೆ .

ವಿಕ್ಟೋರಿಯಾ ಆಸ್ಪತ್ರೆ ಮೈಕ್ರೋಬಯೋಲಜಿ ವಿಭಾಗದಿಂದ ಹಾಗೂ ಪಿ. ಎಂ. ಎಸ್. ಎಸ್. ಐ ಆಸ್ಪತ್ರೆಯ ಪ್ರಯತೋಗಾಲಯಗಳಿಂದ ಈ ಔಷಧಿಯಲ್ಲಿ pseudomonas ಎಂಬ ವೈರಾಣು ಪತ್ತೆಯಾಗಿದ್ದು , ಈ ಔಷಧಿ ಪಾಸಿಟೀವ್ ಎಂಬ ವರದಿ ಬಂದಿದೆ.

ಈ ಪ್ರಕರಣವು ಯಾವುದೇ ವೈದ್ಯರ ನಿರ್ಲಕ್ಷದಿಂದಾಗಲಿ ಅಥವಾ ಆಸ್ಪತ್ರ ಇತರೆ ಸಿಬ್ಬಂದಿಯಿಂದಾಗಲಿ ಆಗಿರುವ ತೊಂದರೆಗಳಲ್ಲ ಎಂಬ ಅಂಶ ಗಮನಿಸಬಹುದು.

ಈಗಾಗಲೇ ಈ ಔಷಧ ವಿತರಿಕರ ವಿರುದ್ಧ ಸೂಕ್ತ ಕ್ರಮಜರುಗಿಸಲು ಹಾಗೂ ಈ ಘಟನೆ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಲು ಆಸ್ಪತ್ರೆಯ ಅಧಿಕಾರಿಗಳು ಸರ್ಕಾರ ಮತ್ತು ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ದೃಷ್ಟಿ ತೊಂದರೆಗಳಿಗೆ ಒಳಗಾದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಯನ್ನು ವೈದ್ಯರುಗಳು ಅತೀ ಕಾಳಜಿಯಿಂದ ನೀಡುತ್ತಿದ್ದು ಬಹುತೇಕ ರೋಗಿಗಳು ಗುಣಮುಖರಾಗಿದ್ದಾರೆ . ಸಾರ್ವಜನಿಕರು ಆಸ್ಪತ್ರೆಯ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...