minimum balance ಮಿನಿಮಮ್ ಬ್ಯಾಲೆನ್ಸ್: ಜನರಿಂದ 2 ಸಾವಿರ ಕೋಟಿ ರೂ ಪೀಕಿದ ಬ್ಯಾಂಕುಗಳು

shortfall
indian currency

minimum balance ಖಾತೆಯಲ್ಲಿ ಕನಿಷ್ಟ ಹಣ ಇಡದ ಕಾರಣ ವರ್ಷದಲ್ಲಿ 2 ಸಾವಿರ ಕೋಟಿ ರೂ ದಂಡ

ಹೊಸದಿಲ್ಲಿ: ತಮ್ಮ ಖಾತೆಗಳಲ್ಲಿ ಕನಿಷ್ಟ ಹಣ ( minimum balance ) ಉಳಿಸದ ಕಾರಣ (ಮಿನಿಮಮ್ ಬ್ಯಾಲೆನ್ಸ್) ಸಾರ್ವಜನಿಕ ಬ್ಯಾಂಕುಗಳು ಖಾತೆದಾರರ ಜೇಬಿಗ ಕನ್ನ ಹಾಕಿದೆ. ಕಳೆದ ವರ್ಷ ಖಾತೆದಾರರಿಂದ ಬ್ಯಾಂಕುಗಳು ಸುಮಾರು 2 ಸಾವಿರ ಕೋಟಿ ರೂಗಳನ್ನು ದಂಡ ರೂಪದಲ್ಲಿ ಪೀಕಿವೆ.

ಇದನ್ನೂ ಓದಿ: ಶಬರಿಮಲೆ: ಅಯ್ಯಪ್ಪ ಭಕ್ತೆಯ ಮೇಲೆ ’ಖಾರದ ಪುಡಿ’ ಆಕ್ರಮಣ

ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ ಅದರಲ್ಲಿ ಕನಿಷ್ಟ ಇಂತಿಷ್ಟು ಹಣ ಯಾವುದೇ ಸಂದರ್ಭದಲ್ಲಿ ಇರಲೇಬೇಕು. ಅದೊಂದು ರೀತಿ ಅಕ್ಷಯ ಪಾತ್ರೆಯಲ್ಲಿ ಉಳಿದ ಅಗುಳನ್ನದಂತೆ. ಆದರೆ ಅದನ್ನು ಉಳಿಸದಿದ್ದರೇ ಬ್ಯಾಂಕುಗಳು ದಂಡ ಹಾಕುತ್ತವೆ.

ಈ ರೀತಿ ದಂಡ ಸ್ವರೂಪದಲ್ಲಿ 2018-19 ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಮಕುಗಳಿಂದಲೇ ಖಾತೆದಾರರ ಜೇಬು ತೂತಾಗಿದ್ದು, ಅದರ ಪ್ರಮಾಣ 1996.46 ಕೋಟಿ ರೂಗಳಾಗಿದೆ ಎಂದು ಖುದ್ದು ಸರಕಾರಿ ಸಂಕಿ ಅಂಶಗಳೇ ಹೇಳುತ್ತಿವೆ.

ಮಲ್ಯ, ಮೋದಿ ಅಂಥವರಿಗೆ ಸಾಲ ನೀಡಿ ವಸೂಲು ಮಾಡಲಾಗದೇ ಕದ ಹಾಕುವ, ಕೈಚೆಲ್ಲುವ ಬ್ಯಾಂಕುಗಳು ತೀರಾ ಪ್ರಾಮಾಣಿಕವಾಗಿ ಸಾಮಾನ್ಯ ಖಾತೆದಾರರಿಂದ ನಾನಾ ರೂಪದಲ್ಲಿ ದಂಡ ವಸೂಲಿ ಮಾಡುತ್ತಿರುವುದು ಹೊಸದೇನಲ್ಲ. ಅದರಲ್ಲಿ ಈ ಕನಿಷ್ಟ ಉಳಿತಾಯವೂ ಒಂದಾಗಿದೆ.

2017ರ ನಂತರ ದಂಡ ಪ್ರಮಾಣವನ್ನು ಬ್ಯಾಂಕುಗಳು ಹೆಚ್ಚಿಸಿದ್ದು ಇದು ಖಾತೆದಾರರ ಪಾಳಿಗೆ ದೊಡ್ಡ ಹೊಡೆತವೇ ಆಗಿದೆ. ಅದಕ್ಕೆ ಮುನ್ನ ದಂಢ ಪ್ರಮಾಣ ಕಡಿಮೆ ಪ್ರಮಾಣದಲ್ಲಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...