ದೇಹದಿಂದ ವಿಷವಸ್ತುಗಳನ್ನು ಹೊರಹಾಕಲು ಪರಿಣಾಮಕಾರಿ

ಜೇನುತುಪ್ಪ ಹಾಗೂ ಬೆಳ್ಳುಳ್ಳಿ ಎರಡೂ ಸಹ ನಮ್ಮ ಅಡುಗೆ ಮನೆಯಲ್ಲಿರುವ ಅತ್ಯಂತ ಪರಿಣಾಮಕಾರಿ ಆಹಾರೌಷಧ. ಹಲವಾರು ವರ್ಷಗಳಿಂದ ಔಷಧವಾಗಿ ಬಳಕೆಯಲ್ಲಿರುವ ಆರೋಗ್ಯಕ್ಕೆ ಹೆಚ್ಚು ಸಹಕಾರಿ.

ಈಗಿನ ಆಹಾರಪದ್ಧತಿಯ ಪರಿಣಾಮವಾಗಿ ನಾವು ಕಾಬೋಹೈಡ್ರೇಟ್​ಯುುಕ್ತ ಆಹಾರವನ್ನು ಹೆಚ್ಚು ಸೇವಿಸುತ್ತಿದ್ದೇವೆ. ಇದರಿಂದಾಗಿ ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹವಾಗಿ ಇನ್ನಿತರ ಅನೇಕ ತೊಂದರೆಗಳಿಗೂ ಅದು ಕಾರಣವಾಗುತ್ತಿದೆ.

ಕೆಟ್ಟ ಕೊಲೆಸ್ಟ್ರಾಲ್ ಟ್ರೈಗ್ಲಿಸರೈಡ್ ಅಂಶವನ್ನು ಕಡಿಮೆ ಮಾಡುವಲ್ಲಿ ಬೆಳ್ಳುಳ್ಳಿ ಪರಿಣಾಮಕಾರಿ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಬೆಳ್ಳುಳ್ಳಿ-ಜೇನುತುಪ್ಪ ಹೆಚ್ಚು ಸಹಾಯಕಾರಿ.

ಈ ಎರಡು ಪದಾರ್ಥಗಳು ಆಂಟಿ ಆಕ್ಸಿಡೆಂಟ್​ಗಳ ಆಗರ. ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತವೆ. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಎಸಳುಗಳನ್ನು ಜೇನುತುಪ್ಪದೊಂದಿಗೆ ತಿನ್ನುವುದು ಮುಖ್ಯ.

garlic

ಕೆಲವರಿಗೆ ಜೇನುತುಪ್ಪ ಹಾಗೂ ಬೆಳ್ಳುಳ್ಳಿ ಅಸಹಜ ಸಂಯೋಜನೆ ಎನಿಸಬಹುದು. ಆದರೆ ಇದು ಅದ್ಭುತ ಕೆಲಸ ಮಾಡಬಲ್ಲದು. ಅದರಲ್ಲಿಯೂ ಹೊಟ್ಟೆಯ ಬೊಜ್ಜನ್ನು ಕರಗಿಸುವಲ್ಲಿ ಇದು ಎತ್ತಿದ ಕೈ. ಶೀತ, ನೆಗಡಿಯ ವಿರುದ್ಧ ಹೋರಾಡಲು ಸಹಕಾರಿ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬೆಳ್ಳುಳ್ಳಿ-ಜೇನುತುಪ್ಪ ಅನುಕೂಲಕಾರಿ. ದೇಹದಿಂದ ವಿಷವಸ್ತುಗಳನ್ನು ಹೊರಹಾಕಲು ಹಾಗೂ ಲಿವರ್​ನ ಆರೋಗ್ಯ ಹೆಚ್ಚಿಸಲು, ಹೃದಯಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಣ ಮಾಡಲು ಇದು ಸಹಕಾರಿ.

ಬೆಳ್ಳುಳ್ಳಿಯು ಆಂಟಿ ಕ್ಯಾನ್ಸರ್, ಆಂಟಿ ಫಂಗಲ್, ಆಂಟಿ ಮೈಕ್ರೋಬಿಯಲ್ ಗುಣಗಳನ್ನು ಹೊಂದಿದೆ. ದೇಹದ ಕೋಶಗಳು ಪುನಾರಚನೆಗೊಳ್ಳಲು, ಕಾಂತಿಯುಕ್ತ, ಮೊಡವೆ ಇಲ್ಲದ ಮೃದು ತ್ವಚೆಯ ರಚನೆಗೆ ಬೆಳ್ಳುಳ್ಳಿ ಹಾಗೂ ಜೇನುತುಪ್ಪ ಸಹಕಾರಿ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...