maruti ದಿಕ್ಕೆಟ್ಟ ಎಕಾನಮಿ: 2 ದಿನ ಬಾಗಿಲು ಬಾಗಿಲು ಬಂದ್ ಮಾಡಿದ ಮಾರುತಿ

maruti
maruti suzuki production line

maruti  ಕುಸಿದ ಬೇಡಿಕೆ ಕಾರಣ 2 ದಿನ ಉತ್ಪಾದನೆ ಬಂದ್ ಎಂದ ಮಾರುತಿ

ಹೊಸದಿಲ್ಲಿ: ದೇಶದ ಆರ್ಥಿಕ ಪರಿಸ್ಥಿತಿ ಅದರಲ್ಲಿಯೂ ಆಟೊದ್ಯಮದ ( maruti  ) ಸ್ಥಿತಿ ಹದಗೆಟ್ಟಿರುವ ಬೆನ್ನಲ್ಲಿಯೇ ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ಎರಡು ದಿನ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಆರ್ಥಿಕ ಕುಸಿತ ಮೋದಿ ಸರಕಾರದ ಕೆಟ್ಟ ನೀತಿಗಳ ಫಲ: ಮನಮೋಹನ್

ತಗ್ಗಿದ ಗ್ರಾಹಕರ ಬೇಡಿಕೆ, ಕುಸಿಯುತ್ತಿರುವ ಮಾರಾಟ ಪ್ರಮಾಣ ಮತ್ತು ಷೇರು ಮೌಲ್ಯದ ಕುಸಿತದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಮದಾಗಿರುವುದಾಗಿ ಮಾರುತಿ ಸಂಸ್ಥೆಯು ಮುಂಬೈ ಶೇರು ಖೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ವಿವರಣೆ ನೀಡಿದೆ.

ಹರ್‍ಯಾಣದ ಗುರುಗ್ರಾಮ ಹಾಗೂ ಮಾಣೆಸರದಲ್ಲಿರುವ ಕಾರು ಉತ್ಪಾದನಾ ಘಟಕಗಳನ್ನು ಇದೇ 7 ಮತ್ತು 9ರಂದು ಮುಚ್ಚುವುದಾಗಿ ಸಂಸ್ಥೆ ಪತ್ರದಲ್ಲಿ ಹೇಳಿದೆ. ಕಳೆದ ತಿಂಗಳು ಮಾರುತಿ ಕಾರುಗಳ ಮಾರಾಟದಲ್ಲಿ ಶೇ. 32ರಷ್ಟು ಕುಸಿತ ಉಂಟಾಗಿತ್ತು.

ಗ್ರಾಹಕ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಕಂಪೆನಿಯು ಉತ್ಪಾದನೆಯನ್ನು ಸಹ ಇಳಿಸಿದೆ. ಕಳೆದ ತಿಮಗಳು 1.113 ಲಕ್ಷ ಕಾರುಗಳನ್ನು ಕಂಪಡನಿ ಉತ್ಪಾದಿಸಿತ್ತು. ಕಳೆದ ವರ್ಷ ಇದೇಅವಧಿಯಲ್ಲಿ 1.687 ಲಕ್ಷ ಕಾರುಗಳು ಉತಾದನೆಯಾಗಿದ್ದವು ಎಂದು ಕಂಪಡನಿ ತಿಳಿಸಿದೆ.

ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಕಳೆದ ವಾರ ಕೆಲ ಕ್ರಮಗಳನ್ನು ಘೋಷಿಸಿತಾದರೂ ಅದರಿಂದ ವಾಹನ ತಯಾರಿಕಾ ರಂಗ ಚೇತರಿಸಿಕೊಳ್ಳುವ ಲಕ್ಷಣಗಳನ್ನೇ ತೋರಿಲ್ಲ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...