ಕಬ್ಬಿನಹಾಲಿನ ಹಲವು ಅದ್ಭುತ ಪ್ರಯೋಜನಗಳು

ಕಬ್ಬಿನಹಾಲು ಕುಡಿಯಿರಿ ಆರೋಗ್ಯವಂತರಾಗಿರಿ

ಹೆಚ್ಚಿನ ತಾಪಮಾನ ಮತ್ತು ಉರಿಗಾಲಿಯಿಂದ ನಿಮ್ಮ ದೇಹವನ್ನು ಸಂರಕ್ಷಿಸಲು, ನಿಮ್ಮ ದೇಹಕ್ಕೆ ಇನ್ನು ಹೆಚ್ಚಿನ ಕಾಳಜಿಯ ಅವಶ್ಯಕತೆ ಇದೆ.  ಬಿಸಿಲಿಗೆ ಧಗೆಗೆ ಸಂತೃಪ್ತಿ ನೀಡುವ ಪಾನೀಯವೆಂದರೆ ಕಬ್ಬಿನಹಾಲು. ಇದು ಕೇವಲ ರುಚಿಯಾಗಿರುವ ಪಾನೀಯವಷ್ಟೇ ಅಲ್ಲದೆ, ನಿಮ್ಮ ದೇಹದ ನೈಸರ್ಗಿಕ ಗ್ಲುಕೋಸ್ ಮಟ್ಟವನ್ನೂ ನಿಯಂತ್ರಿಸುತ್ತದೆ. ಇದರ ಅಸಂಖ್ಯಾತ ಅರೋಗ್ಯ ಪ್ರಯೋಜನಗಳು ಇದನ್ನು ಉನ್ನತ ಬಗೆಯ ಪಾನೀಯ ಎಂದು ಸಾಬೀತು ಪಡಿಸುತ್ತದೆ.

ಕಬ್ಬಿನಹಾಲು ಅಥವಾ ಕಬ್ಬಿನ ಜ್ಯೂಸು ಅತಿಯಾದ ಜನಪ್ರಿಯತೆಯನ್ನು ಪಡೆದಿದೆ. ಅದರಲ್ಲಿ ಪ್ರಮುಖ ಕಾರಣ ಅದರ ವಿವಿಧ ಬಗೆಯ ಆರೋಗ್ಯ ಪ್ರಯೋಜನಗಳು. ಅದು ಮನಸ್ಸು ಮತ್ತು ದೇಹವನ್ನು ತಣ್ಣಗಾಗಿಸುವುದಷ್ಟೇ ಅಲ್ಲದೇ, ಬಿಸಿಲಿಗೆ ಧಗೆಗೆ ನಿಮ್ಮ ದೇಹ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕಬ್ಬಿನಹಾಲಿನಲ್ಲಿ ವಿಟಮಿನ್ ಸಿ ಮತ್ತು ಇತರ ಮಿನರಲ್ಸ್ ಗಳಿದ್ದು, ಅದೇ ಕಾರಣದಿಂದ ಹಲವಾರು ಅರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನೂ ಬಲಿಷ್ಠಗೊಳಿಸಬಹುದು.

ತೂಕ ಇಳಿಸಲು ರಾಮಬಾಣ

ತೂಕ ಇಳಿಸಲು ಬಯಸುವ ಪ್ರತಿಯೊಬ್ಬರೂ ಅವಲಂಬಿಸಬಹುದಾದ ಪಾನೀಯವೆಂದರೆ ಕಬ್ಬಿನಹಾಲು ಕಬ್ಬಿಣ ಹಾಲಿನಲ್ಲಿ ನಾರಿನಂಶ ಮತ್ತು ನೈಸರ್ಗಿಕ ಸಕ್ಕರೆ ಇದ್ದು, ಕೃತಕ ಸಿಹಿಕಾರಕಗಳು ಮತ್ತು ಕೊಬ್ಬಿನ ಆಹಾರ ಪದಾರ್ಥಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಕಬ್ಬಿನಹಾಲು ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಿ, ಹೆಚ್ಚಿನ ಕೊಬ್ಬಿನಂಶವನ್ನು ಸುಡುವಂತೆ ಮಾಡು, ಪಚನ ಕ್ರಿಯೆಯನ್ನು ಸುಧಾರಿಸುತ್ತದೆ. ಇವುಗಳ ಸಹಜವಾಗಿ ನಿಮ್ಮ ದೇಹದ ತೂಕವನ್ನು ನೈಸರ್ಗಿಕವಾಗಿ ಮತ್ತು ಸುರಕ್ಷಿತವಾಗಿ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಹಾನಿಕಾರಕ ತೂಕ ಇಳಿಸುವ ಪದಾರ್ಥಗಳನ್ನು ಸೇವಿಸುವುದಕ್ಕಿಂತ, ಕಬ್ಬಿನಹಾಲಿನ ಮೇಲೆ ಅವಲಂಬಿಸುವುದು ಸೂಕ್ತ.

ಕಿಡ್ನಿ ಸ್ಟೋನ್‌ಗೆ ತುಂಬ ಒಳ್ಳೆಯದು

ಕಬ್ಬಿನಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರದ ಸೋಂಕುಗಳನ್ನು ತಡೆಗಟ್ಟಬಹುದು. ಕಬ್ಬಿನಹಾಲಿನ ಮೂತ್ರವರ್ಧಕ ಗುಣದಿಂದಾಗಿ, ಮೂತ್ರಪಿಂಡ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಿ, ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ಮತ್ತು ಬೆಳವಣಿಗೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹಾಗಾಗಿ, ನಿಮಗೆ ಮೂತ್ರಪಿಂಡ ಅಥವಾ ಮೂತ್ರ ಸಂಬಂಧಿತ ಯಾವುದಾದರೂ ಸೋಂಕುಗಳಾಗಿದ್ದರೆ, ಕಬ್ಬಿನಹಾಲನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯಕರ.

ಕಾಮಾಲೆ ರೋಗಕ್ಕೆ ಕಬ್ಬಿನಹಾಲು ಕುಡಿಯಿರಿ

ನಿಮ್ಮ ದೇಹದ ಆಮ್ಲೀಯತೆ ಮತ್ತು ಇತರ ಜೀರ್ಣಕ್ರಿಯೆಗೆ ಸಂಬಂಧಿತ ಸಮಸ್ಯೆಗಳನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಕಬ್ಬಿನಹಾಲಿನಲ್ಲಿರುವ ನಾರಿನಂಶ ನಿಮ್ಮ ಜೀರ್ಣಕ್ರಿಯೆಯನ್ನು ತೀವ್ರವಾಗಿ ಸುಧಾರಿಸುತ್ತದೆ.  ಕಬ್ಬಿನಹಾಲು ಮಲಬದ್ಧತೆ ಮತ್ತು ಉರಿಯೂತವನ್ನು ನಿವಾರಿಸುತ್ತದೆ.ಜೀರ್ಣಾಂಗಗಳ ಸಂಬಂಧಿತ ರೋಗಗಳಿಂದ ಮುಕ್ತಿ ನೀಡಿ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ರಕ್ತದೊತ್ತಡವನ್ನು ನಿವಾರಿಸುತ್ತದೆ

ಕಬ್ಬಿನಹಾಲಿನಲ್ಲಿರುವ ಪೊಟ್ಯಾಸಿಯಂ ನಿಮ್ಮ ದೇಹದಲ್ಲಿ ರಕ್ತ ಸಾಮಾನ್ಯವಾಗಿ ಹರಿಯುವಂತೆ ಮಾಡಿ, ಅಭಿಧಮನಿ ಮತ್ತು ರಕ್ತನಾಳಗಳ ಮೇಲಿನ ಹೆಚ್ಚಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇದರಿಂದ ನಿಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಹಲ್ಲುಗಳ ಆರೋಗ್ಯ ಸುಧಾರಿಸುವಲ್ಲಿ ಸಹಾಯ

ಕಬ್ಬಿನಹಾಲಿನ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಅದು ಹಲ್ಲುಗಳ ಕುಳಿಗಳ ವಿರುದ್ಧ ಹೋರಾಡಿ, ಹಲ್ಲುಗಳ ಆರೋಗ್ಯ ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಕಬ್ಬಿನಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ಗಳ ಮಟ್ಟ ಹೆಚ್ಚಿದ್ದು, ನಿಮ್ಮ ಹಲ್ಲಿನ ಕುಳಿಗಳ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಒಸಡು ಸುರಕ್ಷಿತವಾಗಿರುತ್ತದೆ.

ಕ್ಯಾನ್ಸರ್‌ಗೆ ಒಳ್ಳೆಯದು

ಯಾರಾದರೂ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರೆ, ಅವರು ವೈದ್ಯರ ಸಲಹೆ ಪಡೆದು ಕಬ್ಬಿನಹಾಲನ್ನು ಸೇವಿಸುವುದರಿಂದ ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಬಹುದು. ಕಬ್ಬಿನಹಾಲು ಹೆಚ್ಚು ಕ್ಷಾರೀಯವಾಗಿದ್ದು, ಕಬ್ಬಿನಹಾಳನ್ನು ನಿಯಮಿತವಾಗಿ ಸೇವಿಸುವುದರಿಂದ ನೈಸರ್ಗಿಕವಾಗಿ, ಕ್ಯಾನ್ಸರ್ ಜೀವಕೋಶಗಳನ್ನು ಕಡಿಮೆಗೊಳಿಸಬಹುದು.

ಮೊಡವೆ, ಚರ್ಮದ ಕಲೆಯಿಂದ ಮುಕ್ತಿ

ಮೊಡವೆ, ಚರ್ಮದ ಕಲೆ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಚಿಕಿತ್ಸಿಸುವಲ್ಲಿ ಕಬ್ಬಿನಹಾಲು ಪರಿಣಾಮಕಾರಿಯಾಗಿದೆ. ಇದನ್ನು ನಿಯಮಿತವಾಗಿ ಕುಡಿಯುವುದಷ್ಟೇ ಅಲ್ಲದೆ, ಇದನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಂಡರೆ, ನಿಮ್ಮ ಚರ್ಮ ಸುಂದರವಾಗಿ, ಮೊಡವೆ ಮತ್ತು ಕಲೆಗಳಿಂದ ಮುಕ್ತಿಪಡೆಯುತ್ತದೆ. ಇದು ನಿಮ್ಮ ಚರ್ಮವನ್ನು ಪುನರ್ಜಳೀಕರಿಸುತ್ತದೆ. ನಿಮ್ಮ ಮುಖಕ್ಕೆ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲಿಗೆ, ನೈಸರ್ಗಿಕವಾದ ಕಬ್ಬಿನಹಾಳನ್ನು ಬಳಸಿ, ನಿಮ್ಮ ಚರ್ಮಕ್ಕೆ ಸಂಬಂಧಿತ ಎಲ್ಲ ತೊಂದರೆಗಳಿಂದ ಮುಕ್ತಿ ಪಡೆಯಿರಿ.

ಗ್ಯಾಸ್ಟ್ರಿಕ್ ನಿವಾರಿಸುತ್ತದೆ

ಮಸಾಲೆಯುಕ್ತ ಆಹಾರದ ಸೇವನೆಯಿಂದ ಎದೆಯುರಿತ ಅಥವಾ ಆಮ್ಲೀಯತೆಯಂತಹ ಸಮಸ್ಯೆ ನಿಮಗೆ ಕಾಡುತ್ತಿದ್ದರೆ, ಕಬ್ಬಿನಹಾಲು ಅದರಿಂದ ನಿಮಗೆ ಮುಕ್ತಿ ದೊರೆಯುವಂತೆ ಮಾಡುತ್ತದೆ. ಹಾಗಾಗಿ, ಪ್ರತಿರಾತ್ರಿ ನೀವು ಮಲಗುವ ಮುನ್ನ ಒಂದು ಲೋಟ ಕಬ್ಬಿನಹಾಲು ಸೇವಿಸುವುದು ಆರೋಗ್ಯಕರ. ಕಬ್ಬಿನಹಾಲಿನಲ್ಲಿರುವ ಅಮೈನೊ ಆಮ್ಲ, ಟ್ರಿಪ್ಟಾಫಾನ್, ಮೆಗ್ನೀಷಿಯಂ ದೇಹದ ಒತ್ತಡವನ್ನು ನಿವಾರಿಸಿ, ನಿಮ್ಮ ನಿದ್ರೆ ಸುಧಾರಿಸುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...