mandya famous ಮಂಡ್ಯ ಅಂದ್ರೆ ಇಂಡ್ಯಾಗೇ ಫೇಮಸ್ ಅಂದ್ರು ಸುಮಲತಾ

mandya famous
mandya mp sumalatha

mandya famous ಮಂಡ್ಯದ ಎಂಪಿ ಅಂದ್ರೆ ದೇಶದ ಜನ ಕೈಮುಗೀತಾರೆ: ಸುಮಲತಾ

ಮಂಡ್ಯ: ಸಕ್ಕರೆಯ ನಾಡು ಮಂಡ್ಯ ಅಂದ್ರ ಬರಿ ಕರ್ನಾಟಕವಲ್ಲ ಇಡೀ ಇಂಡ್ಯಾಗೇ ( mandya famous ) ಫೇಮಸ್ಸು ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಕಾವೇರಿಗಾಗಿ ಕೂಗು

ಕಾವೇರಿ ಕೂಗು ಅಭಿಯಾನದ ಜಾಥಾವನ್ನು ಮಂಡ್ಯಕ್ಕೆ ಬರಮಾಡಿಕೊಂಡು ಸಂದರ್ಭದಲ್ಲಿ ಮಾತನಾಡಿದ ಇಲ್ಲಿನ ಪಕ್ಷಾತಿತ ಸಂಸದೆ ಸುಮಲತಾ ಮಂಡ್ಯವನ್ನು ಇಡೀ ಇಂಡಿಯಾ ಗುರುತಿಸುತ್ತದೆ ಎಂದು ಹೇಳಿದರು.

ಮಂಡ್ಯದ ಬಗ್ಗೆ ಇಂಡಿಯಾನೆ ಮಾತಾಡುತ್ತೆ. ಸಂಸತ್ತಿನಲ್ಲಿ ನನ್ನನ್ನ ನೀವು ಯಾವ ಪಾರ್ಟಿ ಅಂತ ಕೇಳ್ತಾರೆ. ನಾನು ಪಕ್ಷೇತರ ಸಂಸದೆ ಅಂತೀನಿ. ಹಾಗಾದ್ರೆ ಯಾವ ಕ್ಷೇತ್ರ ನಿಮ್ಮದು ಅಂತಾರೆ. ಮಂಡ್ಯದ ಸಂಸದೆ ಎಂದು ಹೆಮ್ಮೆಯಿಂದ ಹೇಳ್ತೀನಿ. ಆಗ ಎಲ್ಲರೂ ಕೈ ಮುಗಿದು ನಮಸ್ಕರಿಸ್ತಾರೆ ಎಂದು ಸುಮಲತಾ ಹೇಳಿದರು.

ಅಷ್ಟೇ ಅಲ್ಲ ಮಂಡ್ಯದ ಜನತೆ ಓರ್ವ ಮಹಿಳೆಯನ್ನ, ಅದರಲ್ಲಿಯೂ ಪಕ್ಷೇತರವಾಗಿ ಸ್ಪರ್ಧೆ ಮಾಡಿದ ಮಹಿಳೆಯನ್ನು ಆಯ್ಕೆ ಮಾಡಿದ್ದಾರ ಅಂತ ಹೆಮ್ಮೆ ಪಡ್ತಾರೆ. ಇದು ನಮ್ಮ ಮಂಡ್ಯದ ಸಂಸ್ಕೃತಿ, ಇಡೀ ದೇಶ ಮಂಡ್ಯಕ್ಕೆ ಸಲಾಮೆನ್ನುತ್ತದೆ ಎಂದು ಸುಮಲತಾ ಗರ್ವದಿಂದ ಹೇಳಿದರು

ಮಂಡ್ಯ ಜಿಲ್ಲೆ ಅಂದರೆ ಅದ್ರಲ್ಲಿ ವಿಶೇಷತೆ ಇದೆ. ಸದ್ಗುರುಗಳು (ಜಗ್ಗಿ ವಾಸುದೇವರು) ಆರಂಭಿಸಿರುವ ಈ ಕಾವೇರಿ ಕೂಗು ಅಭಿಯಾನಕ್ಕೆ ಮಂಡ್ಯ ಜನ ಸ್ಪಂದಿಸಬೇಕು. ಕಾವೇರಿ ನದಿ ನಮ್ಮೆಲ್ಲರ ತಾಯಿ. ಅವಳನ್ನು ಪೋಷಣೆ ಮಾಡಬೇಕಾದ ಜವಾಬ್ದಾರಿ ಮಂಡ್ಯ ಜನರ ಮೇಲಿದೆ ಎಂದು ಸುಮಲಯಾ ಅಭಿಪ್ರಾಯಪಟ್ಟರು.

ಕಾವೇರಿಯ ಉಳಿವಿಗಾಗಿ ಹಮ್ಮಿಕೊಂಡಿರುವ ಈ ವೃಕ್ಷಾಂದೋಲನವನ್ನು ಮಂಡ್ಯದ ಜನ ಯಶಸ್ವಿಗೊಳಿಸಬೇಕು. ವೃಕ್ಷಗಳನ್ನ ನಾವು ರಕ್ಷಿಸಿದರೆ, ವೃಕ್ಷ ನಮ್ಮನ್ನು ರಕ್ಷಣೆ ಮಾಡುತ್ತವೆ. ಹಾಗಾಗಿ ಮುಂದಿನ‌ ಪೀಳಿಗೆಗೆ ನಾವು ಹೆಚ್ಚೆಚ್ಚು ಗಿಡ ನೆಟ್ಟು ಕಾವೇರಿ ನದಿಯನ್ನು ರಕ್ಷಣೆ ಮಾಡಬೇಕಿದೆ ಎಂದು ಅವರು ಕರೆ ನೀಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...