madakari ವರ್ಷಾಂತ್ಯಕ್ಕೆ ’ಮದಕರಿ ನಾಯಕ’ನಾಗಿ ಕಂಗೊಳಿಸಲಿದ್ದಾರೆ ದರ್ಶನ್

madakari
darshan as madakari nayaka

madakari ಭರದಿಂದ ಸಾಗಿದೆ ಚಿತ್ರಕಥೆ, ಗ್ರಾಫಿಕ್ಸ್ ಕೆಲಸ, ಡಿಸೆಂಬರ್‌ನಲ್ಲಿ ಚಿತ್ರೀಕರಣ ಶುರು

ಬೆಂಗಳೂರು: ಕುರುಕ್ಷೇತ್ರದ ಯಶಸ್ಸಿನ ಬೆನ್ನಲ್ಲಿಯೇ ಕನ್ನಡದಲ್ಲಿ ( madakari ) ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಿಗೆ ಜೀವ ತುಂಬಬಲ್ಲ ಕಲಾವಿದನಾಗಿ ಗುರುತಿಸಿಕೊಂಡಿರುವ ದಾಸ ದರ್ಶನ್ ಅವರ ಬಹು ನಿರೀಕ್ಷಿತ ಮದಕರಿ ನಾಯಕ ಚಿತ್ರದ ಚಿತ್ರೀಕರಣ ವರ್ಷಾಂತ್ಯಕ್ಕೆ ಆರಂಭವಾಗುವ ಲಕ್ಷಣಗಳಿವೆ.

ಇದನ್ನೂ ಒದಿ:ಕುರುಕ್ಷೇತ್ರ ಮೊದಲ ವಾರದ ಗಳಿಕೆ 30 ಕೋಟಿ ರೂ!

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಬಾರೀ ಬಜೆಟ್ ಚಿತ್ರಕ್ಕೆ ಇತಿಹಾಸದ ನಾನಾ ಪುಟಗಳನ್ನು ತಿರುವಿ ಹಾಕಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಟ್ಟಿ ಚಿತ್ರಕಥೆ ರಚನೆಯ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ.

ಇದಕ್ಕಾಗಿ ಇತಿಹಾಸಕಾರ ಲಕ್ಷ್ಮಣ್ ತೆಳಗಾವಿ ಅವರ ನೆರವು ಪಡೆದುಕೊಳ್ಳಲಾಗಿದ್ದು ಕಲಾವಿದರಾದ ಶ್ರೀನಿವಾಸ ಮೂರ್ತಿ ಮತ್ತು ದೊಡ್ಡಣ್ಣ ಕೈಜೋಡಿಸಿದ್ದಾರೆ. ಚಿತ್ರೀಕರಣ ಆರಂಭಕ್ಕೆ ಮುನ್ನ ಈ ಚಿತ್ರದ ಕಾಸ್ಟ್ಯೂಮ್ಸ್ ಮತ್ತು ಕಂಪ್ಯೂಟರ್‍ ಗ್ರಾಫಿಕ್ಸ್ ಕೆಲಸ ಈ ಆರಂಭವಾಗಿದೆ ಎಂದು ಚಿತ್ರತಂಡ ಹೇಳಿದೆ.

ಕುರುಕ್ಷೇತ್ರ ಭರ್ಜರಿ ಹಿಟ್

ಈ ಮಧ್ಯೆ ಸಂಗೊಳ್ಳಿ ರಾಯಣ್ಣ ಐತಿಹಾಸಿಕ ಸಿನೆಮಾದ ನಂತರ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಎನಿಸಿದೆ ಬಾಕ್ಸ್ ಆಫೀಸ್ ಚಿಂದಿ ಮಾಡಿದೆ. ಬಿಡುಗಡೆಯಾದ ಎರಡು ವಾರಗಳಲ್ಲಿ ಈಗಾಗಲೇ 60 ಕೊಟಿಗೂ ಹೆಚ್ಚು ಗಳಿಕೆ ಮಾಡಿರುವ ಚಿತ್ರ 100 ಕೋಟಿ ಕ್ಲಬ್‌ನತ್ತ ಮುನ್ನುಗ್ಗಿದೆ.

ಮಹಾಭಾರತದ ಅದರಲ್ಲಿಯೂ ದುರ್ಯೋಧನನ ವೈಭವವನ್ನು ಅದರೆಲ್ಲ ಗತ್ತು ಗೈರತ್ತಿನೊಂದಿಗೆ ತೆರೆಗೆ ತರಲಾಗಿರುವ ಕುರುಕ್ಷೇತ್ರ ಮೊದಲ ವಾರದಲ್ಲಿ 1500 ಶೋಗಳನ್ನು ಕಂಡಿರುವುದು ಅದರ ಜನಪ್ರಿಯತೆಗೆ ಮತ್ತೊಂದು ಆಯಾಮ ನೀಡಿದೆ.