lunar eclipse ಕುತೂಹಲ, ಕಾತರದ ವರ್ಷದ ಮೊದಲ ಚಂದ್ರಗ್ರಹಣಕ್ಕೆ ಕ್ಷಣಗಣನೆ

lunar eclipse

lunar eclipse ಶುಕ್ರವಾರ ರಾತ್ರಿ 10.37ದಿಂದ 2.42ರವರೆಗೆ ಚಂದ್ರನಿಗೆ ಗ್ರಹಣ

ಬೆಂಗಳೂರು: ಖಗ್ರಾಸ ಸೂರ್‍ಯಗ್ರಹಣದ ಬೆನ್ನಲ್ಲಿಯೇ ಚಂದ್ರಗ್ರಹಣ ಗೋಚರಿಸುತ್ತಿದ್ದು, ( lunar eclipse )  ಗ್ರಹಣ ಜನರಲ್ಲಿ ಕಾತರ, ಕುತೂಹಲಕ್ಕೆ ಕಾರಣವಾಗಿದೆ. ವರ್ಷದ ಪ್ರಥಮ ಗ್ರಹಣ ಇದಾಗಿದ್ದು, ನಾನಾ ಕಾರಣಗಳಿಂದಾಗಿ ಗಮನ ಸೆಳೆದಿದೆ.

ಇದನ್ನೂ ಓದಿ: ಯಡಿಯೂರಪ್ಪ ಸಂಪುಟದಿಂದ 5 ಸಚಿವರಿಗೆ ಕೊಕ್, ಎಲ್ಲ ಪಕ್ಷಾಂತರಿಗಳಿಗೂ ಮಣೆ

2020ರ ವರ್ಷದ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ಭಾರತ, ಆಫ್ರಿಕಾ, ಯುರೋಪ್​ ಮತ್ತು ಆಸ್ಟ್ರೇಲಿಯಾದಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಗೋಚರವಾಗಲಿದೆ. ಸುಮಾರು 4 ಗಂಟೆ 5 ನಿಮಿಷಗಳ ಕಾಲ ಭೂಮಿಗೆ ಗ್ರಹಣ ಹಿಡಿಯಲಿದೆ.

ಸಾಮಾನ್ಯವಾಗಿ ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ ಗ್ರಹಣ ಸಂಭವಿಸುತ್ತದೆ, ಆದರೆ ಈ ಬಾರಿ ಸೂರ್‍ಯ ಚಂದ್ರರ ನೆರಳಿನಾಟದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ಸಂದರ್ಭದಲ್ಲಿ ಚಂದ್ರ ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಗೋಚರಿಸಲಿದ್ದಾನೆ.

ಈ ಚಂದ್ರಗ್ರಹಣವನ್ನು ಜನರು ಬರಗಣ್ಣಿನಿಂದ ನೋಡಲು ಸಾಧ್ಯ. ಬರೀಗಣ್ಣಿಗೆ ಗೋಚರಿಸಿದರೂ ಮಸೂರ ಬಳಸಿ ನೋಡುವುದು ಸೂಕ್ತ ಎಂಬುದು ತಜ್ಞರ ಅಭಿಮತವಾಗಿದೆ. ಇದಲ್ಲದೇ ಈ ವರ್ಷ ಇನ್ನೂ ಮೂರು ಚಂದ್ರಗ್ರಹಣ ಸಂಭವಿಸಲಿದ್ದು, ಜೂನ್​ 5, ಜುಲೈ 5 ಹಾಗೂ ನವೆಂಬರ್​ 30ರಂದು ಚಂದ್ರನಿಗೆ ಗ್ರಹಣ ಹಿಡಿಯಲಿದೆ.

ಗ್ರಹಣದಲ್ಲಿ ಚಂದ್ರನು ಬೂದು ಬಣ್ಣದಲ್ಲಿ ಕಾಣಿಸುತ್ತಾನೆ. ಹೀಗಾಗಿ ಇದನ್ನು ತೋಳ ಚಂದ್ರ ಗ್ರಹಣ ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಶೇ.90ರಷ್ಟು ಭಾಗ ಚಂದ್ರನ ಮೇಲ್ಮೈಯನ್ನು ಭೂಮಿಯ ನೆರಳಿನ ಹೊರಭಾಗ ಆವರಿಸಿಕೊಂಡಿರುತ್ತದೆ.

ನೋಡಲು ಇದು ಬಿಳಿಯ ಚಂದ್ರನ ಮೇಲೆ ತೋಳಾಕೃತಿಯ ನೆರಳು ಕಂಡಂತೆ ಭಾಸವಾಗುತ್ತದೆ. ಈ ನಭೋಮಂಡಲದ ಕೌತುಕವನ್ನು ಕಣ್ಣತುಂಬಿಕೊಳ್ಳಲು ಇಡೀ ಜಗತ್ತು ತುದಿಗಾಲ ಮೇಲೆ ನಿಂತಿದೆ. ಮುಂದಿನ ಸಂಪೂರ್ಣ ಚಂದ್ರಗ್ರಹಣ 2021ರ ಮೇ 26ರಂದು ಸಂಭವಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...