last rites ಭಾನುವಾರ ಕನ್ನಡದ ಶಕ್ತಿ ಚಿಮೂ ಅಂತ್ಯಕ್ರಿಯೆ

last rites

last rites ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ನಿರ್ಧಾರ

ಬೆಂಗಳೂರು: ಅನಾರೋಗ್ಯದ ಕಾರಣ ಶನಿವಾರ ಮುಂಜಾನೆ ನಿಧನರಾದ ( last rites ) ಕನ್ನಡದ ಖ್ಯಾತ ಸಂಶೋಧಕ ಎಂ. ಚಿದಾನಂದ ಮೂರ್ತಿ ಅವರ ಅಂತ್ಯಸಂಸ್ಕಾರ ಭಾನುವಾರ ಬೆಳಗ್ಗೆ ನಡೆಯಲಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಮಂತ್ರಿಗಿರಿ ಮರೀಚಿಕೆ: ಗೆದ್ದ ಅನರ್ಹರ ಚಡಪಡಿಕೆ

ಚಿದಾನಂದ ಮೂರ್ತಿ ಅವರ ಇಚ್ಛೆಯಂತೆ ಐಆವುದೇ ಪೂಜೆ-ಪುನಸ್ಕಾರಗಳಿಲ್ಲದೇ ಸರಳವಾಗಿ ಅಂತ್ಯಸಂಸ್ಕಾರ ಮಾಡಲು ನಿರ್ಧಾರಿಸಿದ್ದೇವೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ಆದರೆ ರಾಜ್ಯ ಸರಕಾರವು ಅಲಿದ ಹಿರಿಯ ಸಂಶೋಧಕರಿಗೆ ಸಕಲ ಸರಕಾರಿ ಮರ್‍ಯಾದೆಯೊಂದಿಗೆ ಅಂತಿಮ ವಿದಾಯ ಹೇಳಲು ಮುಂದಾಗಿದೆ.

ಹಂಪಿಯ ಸ್ಮಾರಕಗಳನ್ನು ಉಳಿಸುವಲ್ಲಿ ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವಲ್ಲಿ ಸ್ಮರಣೀಯ ಕೊಡುಗೆ ನೀಡಿದ ಚಿದಾನಂದ ಮೂರ್ತಿ ಅವರು 88 ವರ್ಷಗಳ ತುಂಬು ಜೀವನ ನಡೆಸಿ ಶನಿವಾರ ಮುಂಜಾನೆ ತಮ್ಮ ಇಹ ಪಯಣ ಮುಗಿಸಿದ್ದರು.

ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಚಿರಸ್ಮರಣೀಯರು. ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ, ನಾನೂರಕ್ಕೂ ಹೆಚ್ಚು ಪ್ರಬಂಧಗಳನ್ನೂ ಅವರು ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಛಂದಸ್ಸು, ಜಾನಪದ, ಶಾಸನ, ಇತಿಹಾಸ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮೂರ್ತಿ ಅವರು ಸಂಶೋಧನೆ ಕೈಗೊಂಡಿದ್ದಾರೆ.

ಕನ್ನಡ ಶಕ್ತಿ ಕೇಂದ್ರ ಸ್ಥಾಪಿಸಿ ಕನ್ನಡ-ಕನ್ನಡಿಗ-ಕರ್ನಾಟಕತ್ವಕ್ಕಾಗಿ ಯಾವುದೇ ಹಿಂಜರಿಕೆ ಭಯಗಳಿಲ್ಲದೆ, ಹೋರಾಟದಲ್ಲಿ ತೊಗಿದ್ದ ಚಿದಾನಂದ ಮೂರ್ತಿಗಳ ನಿಧನಕ್ಕೆ ನಾಡು ಕಂಬನಿ ಮಿಡಿದಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...