landmark verdict 1045 ಪುಟಗಳ ಅಯೋಧ್ಯಾ ತೀರ್ಪಿನಲ್ಲೇನಿದೆ?

muslim board

landmark verdict ಸುಪ್ರೀಂ ಕೋರ್ಟಿನ ಮಹತ್ವದ ತೀರ್ಪಿನ ಪ್ರಮುಖಾಂಶ

ಹೊಸದಿಲ್ಲಿ: ದಶಕಗಳ ಕಾಲ ದೇಶವನ್ನು ಕಾಡಿದ್ದ ( landmark verdict ) ಅಯೋಧ್ಯೆ ವಿವಾದಕ್ಕೆ ಸುಪ್ರೀಂ ಕೋರ್ಟ್‌ ಕೊನೆಗೂ ಮಂಗಳ ಹಾಡಿದೆ. ರಾಮ ಜನ್ಮಭೂಮಿ ಹಿಂದೂಗಳಿಗೆ ಸೇರಿದ್ದು ಎಂದಿರುವ ಸುಪ್ರೀಂ ಕೋರ್ಟು ಮಸೀದಿ ನಿರ್ಮಾಣಕ್ಕೆ ಪರ್‍ಯಾಯ ಜಾಗ ನೀಡಬೇಕೆಂಬ ನಿದೇರ್ಶನವನ್ನೂ ನೀಡಿದೆ.

ಇದನ್ನೂ ಓದಿ: ಅಯೋಧ್ಯಾ ಐತೀರ್ಪು: ರಾಮ ಮಂದಿರ ನಿರ್ಮಾಣ ಹಾದಿ ಸುಗಮ, ಮಸೀದಿಗೆ ಪರ್ಯಾಯ…

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಈ ವಿವಾದದ ಸಂಬಂಧ ಒಮ್ಮತದ ತೀರ್ಪು ನೀಡಿದೆ. ಕಗ್ಗಂಟಾಗಿದ್ದ ಸಮಸ್ಯೆಗೆ ಸುಸೂತ್ರ ಪರಿಹಾರ ಒದಗಿಸುವ ಈ ತೀರ್ಪು 1045 ಪುಟಗಳಷ್ಟು ದೀರ್ಘವಿದ್ದು ನಾನಾ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ.

ಸುಪ್ರೀಂ ಕೋರ್ಟಿನ ಈ ಸುದೀರ್ಘ ತೀರ್ಪಿನ 5 ಪ್ರಮುಖ ಅಂಶಗಳು ಹೀಗಿವೆ…

1. ವಿವಾದಿತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ 3 ತಿಂಗಳಲ್ಲಿ ಹೊಸ ಟ್ರಸ್ಟ್ ರಚಿಸಬೇಕು. ಮೂಲ ವಿವಾದ ಇರುವ 2.77 ಎಕರೆಯಲ್ಲಿ ಕೇವಲ ರಾಮಲಲ್ಲಾಗಷ್ಟೇ ಅಧಿಕಾರವಿದೆ.

2. ಮಸೀದಿಗೆ ಹಾನಿ ಉಂಟು ಮಾಡಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಮುಸ್ಲಿಮರಿಗೆ ಮಸೀದಿ ನಿರ್ಮಿಸಿಕೊಳ್ಳಲು ಪರ್‍ಯಾಯವಾಗಿ 5 ಎಕರೆ ಭೂಮಿ ನೀಡಬೇಕು.

3. ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿಲ್ಲ. ಧಾರ್ಮಿಕ ನಂಬಿಕೆಗಳನ್ನು ಗೌರವಿಸಿ ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಲಾಗಿದೆ.

4. ಶ್ರೀರಾಮನ ಅಯೋಧ್ಯೆಯಲ್ಲೇ ಹುಟ್ಟಿದ್ದ ಅನ್ನೋ ನಂಬಿಕೆ ಅವಿವಾದಿತ. ಪುರಾಣಗಳಲ್ಲೂ ರಾಮಲಲ್ಲಾನ ಉಲ್ಲೇಖ ಇದೆ. ಭಾರತಕ್ಕೆ ಬ್ರಿಟಿಷರ ಆಗಮನಕ್ಕೂ ಮೊದಲು ಇಲ್ಲಿ ರಾಮ ದೇವರು ಹಾಗೂ ಸೀತೆಯನ್ನು ಪೂಜಿಸಿದ್ದಕ್ಕೆ ಸಾಕ್ಷಿ ಇದೆ. ವಿವಾದಿತ ಸ್ಥಳದ ಹೊರ ಆವರಣಗಳು ಹಿಂದುಗಳ ಸ್ವಾಧೀನದಲ್ಲಿ ಇದ್ದವು ಎಂಬುದಕ್ಕೂ ಪುರಾವೆಯಿದೆ.

5. ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ. ದಾಖಲೆಗಳ ಪ್ರಕಾರ ಅದು ಸರಕಾರಿ ಜಮೀನು. ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು ಮತ್ತು ಅಲ್ಲಿ ಸಿಕ್ಕಿರುವ (ಉತ್ಖನನ ವೇಳೆ) ಕಲಾಕೃತಿಗಳು ಇಸ್ಲಾಮಿಕ್ ರಚನೆಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...