kurukshetra ಕುರುಕ್ಷೇತ್ರ ಮೊದಲ ವಾರದ ಗಳಿಕೆ 30 ಕೋಟಿ ರೂ!

dboss kurukshetra
darshan in kurukshetra

kurukshetra ಮುಂದಿನ ದಿನಗಳಲ್ಲಿ ಗಳಿಕೆ ದುಪ್ಪಟ್ಟಾಗುವ ನಿರೀಕ್ಷೆ

ಬೆಂಗಳೂರು: ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡು ಪ್ರೇಕ್ಷಕರ ಮನಸ್ಸನ್ನು ( kurukshetra ) ಸೂರೆಗೊಮಡಿರುವ ದರ್ಶನ ಅಭಿನಯದ ಕುರುಕ್ಷೇತ್ರ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿಯೂ ದೊಡ್ಡದಾಗಿಯೇ ಸದ್ದು ಮಾಡಿದೆ.

ಇದನ್ನೂ ಓದಿ: ಅಕ್ಟೋಬರಿನಲ್ಲಿ ರಮ್ಯಾ ಕಲ್ಯಾಣ?

ಕಳೆದ ಶುಕ್ರವಾರ ಬಿಡುಗಡೆಯಾದ ಕುರುಕ್ಷೇತ್ರ ಚಿತ್ರವು ಒಂದೇ ವಾರದಲ್ಲಿ 30 ಕೋಟಿ ರೂ ಬಾಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಗಳಿಕೆ ದುಪ್ಪಟ್ಟಾಗುವ ಲಕ್ಷಣಗಳು ದಟ್ಟವಾಗಿವೆ.

ನೆರೆ, ಮಳೆಗೆ ಅರ್ಧ ರಾಜ್ಯ ಸಂಕಷ್ಟಗೊಳಗಾಗಿ ಹಲವೆಡೆ ಚಿತ್ರ ಪ್ರದರ್ಶನಕ್ಕೂ ತೊಂದರೆ ಉಂಟಾಗಿದೆಯಾದರೂ ಜನರ ಮನ ಮುಟ್ಟುವಲ್ಲಿ ಕುರುಕ್ಷೇತ್ರ ಗೆದ್ದಿದೆ ಎಂಬುದಕ್ಕೆ ಅದರ ಗಳಿಕೆಯೇ ಸಾಕ್ಷಿ ಎನ್ನುತ್ತಿದೆ ಚಿತ್ರ ತಂಡ.

ಮಹಾಭಾರತದ ಅದರಲ್ಲಿಯೂ ದುರ್ಯೋಧನನ ವೈಭವವನ್ನು ಅದರೆಲ್ಲ ಗತ್ತು ಗೈರತ್ತಿನೊಂದಿಗೆ ತೆರೆಗೆ ತರಲಾಗಿರುವ ಕುರುಕ್ಷೇತ್ರ ಮೊದಲ ವಾರದಲ್ಲಿ 1500 ಶೋಗಳನ್ನು ಕಂಡಿರುವುದು ಅದರ ಜನಪ್ರಿಯತೆಗೆ ಮತ್ತೊಂದು ಆಯಾಮ ನೀಡಿದೆ.

ದರ್ಶನ್, ಅರ್ಜುನ್ ಸರ್ಜಾ, ಅಂಬರಿಶ್ ಮುಂತಾದವರ ಬಹುದೊಡ್ಡ ತಾರಾಗಣ ಹೊಂದಿರುವ ಕುರುಕ್ಷೇತ್ರ 2-ಡಿ ಮತ್ತು 3-ಡಿ ಆಯಾಮಗಳಲ್ಲಿ ತೆರೆ ಮೇಲೆ ರಾರಾಜಿಸುತ್ತಿದೆ. ಕನ್ನಡದ ಜೊತೆ ತೆಲುಗು ಅವತರಣಿಕೆ ಬಿಡುಗಡೆಯಾಗಿದ್ದು, ತಮಿಳು ಹಾಗೂ ಹಿಂದಿಯಲ್ಲಿ ಕೂಡ ಚಿತ್ರ ಬಿಡುಗಡೆ ಕಾಣಲಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...