kpcc chief ಕೆಪಿಸಿಸಿ ಅಧ್ಯಕ್ಷರ ನೇಮಕ ಸದ್ಯಕ್ಕೆ ಡೌಟು

kpcc chief
congress interim president Sonia Gandhi

kpcc chief ಸೋನಿಯಾ ವಿದೇಶ ಪ್ರವಾಸ, ದಿಲ್ಲಿ ಚುಣಾವಣೆ ನೆವ, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ ಸಾಧ್ಯ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷೆ ಆಯ್ಕೆ ಸಂಬಂಧ ಉಂಟಾಗಿರುವ ಕಗ್ಗಂಟು (kpcc chief)  ಬಿಡಿಸಲು ಹೈಕಮಾಂಡ್ ವಿಫಲವಾಗಿದ್ದು ನೇಮಕ ಮತ್ತಷ್ಟು ವಿಳಂಬವಾಗುವ ಲಕ್ಷಣಗಳು ದಟ್ಟವಾಗಿವೆ. ಹೊಸ ವರ್ಷದ ಆರಂಭಕ್ಕೇ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕವಾಗಬೇಕಿತ್ತು. ಆದ್ರೆ ನಾನಾ ಕಾರಣಗಳಿಂದಾಗಿ ಅದು ಕೈಗೂಡಿಲ್ಲ.

ಇದನ್ನೂ ಓದಿ: ಬಿಜೆಪಿ, ಎಚ್ಡಿಕೆ ನಡುವೆ ಜೋರು ಪಡೆದ ಸಿಡಿ ವಾರ್, ಬಿಜೆಪಿ ನಾಯಕರಿಗೆ…

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ 10 ದಿನಗಳ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದು ಅದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಲಿದ್ದಾರೆ. ಇದಕ್ಕಾಗಿ ದಿಲ್ಲಿಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ತುರ್ತು ಬುಲಾವ್ ನೀಡಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲದೇ ಇತರ ಆಯ್ದ ಕೆಲ ನಾಯಕರೊಂದಿಗೂ ಸಮಲೋಚನೆ ನಡೆಯಲಿದೆ. ಆದರೆ ಸೋನಿಯಾ ನಿರ್ಗಮನದ ವೇಳೆಗೆ ಹೊಸ ಅಧ್ಯಕ್ಷನ ನೇಮಕ ಸುಲಭ ಸಾಧ್ಯ ಇಲ್ಲ ಎನ್ನುತ್ತಿವೆ ಕಾಂಗ್ರೆಸ್‌ ಪಕ್ಷದ ಉನ್ನತ ಮೂಲಗಳು.

ಇನ್ನು ಸೋನಿಯಾ ಆಗಮನದ ವೇಳೆಗೆ ದಿಲ್ಲಿ ಚುನಾವಣೆ ಪ್ರಚಾರ ಪರಾಕಾಷ್ಠೆ ತಲುಪಲಿದ್ದು, ಹೈಕಮಾಂಡ್ ಆದ್ಯತೆ ಚುನಾವಣೆ ಮೇಲೆ ಇರಲಿದೆ. ಹೀಗಾಗಿ ದಿಲ್ಲಿಯಲ್ಲಿ ಅಸೆಂಬ್ಲಿ ಚುನಾವಣೆ ಮುಗಿವವರೆಗೂ ಹೊಸ ನಾಯಕರ ಆಯ್ಕೆ ಕಷ್ಟ ಎಂದೇ ಹೇಳಲಾಗುತ್ತಿದೆ.

ಈ ಮಧ್ಯೆ ಮಾಜಿ ಸಚಿವರಾದ ಡಿಕೆ ಶಿವಕುಮಾರ್‍ ಹಾಗೂ ಎಂಬಿ ಪಾಟೀಲ್ ನಡುವೆ ಕೆಪಿಸಿಸಿ ಅಧ್ಯಕ್ಷತೆಗೆ ಪೈಪೋಟಿ ತೀವ್ರಗೊಂಡಿದೆ. ಯಭಯರ ಪರ ನಾಯಕರು ಹೈಕಮಾಂಡ್ ಮಟ್ಟದಲದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...