kotla t-20 ಮೊದಲ ಟಿ-20: ಭಾರತವನ್ನು 148 ರನ್ನುಗಳಿಗೆ ಕಟ್ಟಿಹಾಕಿದ ಬಾಂಗ್ಲಾ

kotla t-20
shikar dhawan in action

kotla t-20 ಜೈಟ್ಲಿ ಮೈದಾನದಲ್ಲಿ ಬಾಂಗ್ಲಾ ಬೌಲರುಗಳ ಮೇಲುಗೈ

ಹೊಸದಿಲ್ಲಿ: ದಟ್ ಹೊಗೆಮಂಜಿನ ನಡುವೆಯೇ ನಡೆದ ( kotla t-20) ಮೊದಲ ಟಿ-20 ಪಂದ್ಯದಲ್ಲಿ ಭಾರತವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರವಾಸಿ ಬಾಂಗ್ಲಾದೇಶದ ಬೌಲರುಗಳು ಯಶಸ್ವಿಯಾಗಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿದ ಭಾರತ ತನ್ನ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಮಾತ್ರ ಗಳಿಸಿತು.

ಇದನ್ನೂ ಓದಿ: ಬಾಂಗ್ಲಾ ಟಿ-20 ಸರಣಿಯಿಂದ ಕೊಹ್ಲಿಗೆ ವಿರಾಮ

ಮೊದಲ ಓವರಿನಲ್ಲಿಯೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡ ಭಾರತ ಇಬ್ಬಗೆಯ ಪುಟಿತ ಇದ್ದ ಪಿಚ್‌ನಲ್ಲಿ ಭಾರೀ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. ಆರಂಭಿಕ ಶಿಖರ್‍ ಧವನ್ 41 ರನ್ ಮಾಡಿ ತಂಡವನ್ನು ದೊಡ್ಡ ಮೊತ್ತದೆಡೆಗೆ ಕರೆದೊಯ್ಯುವ ಆಸೆ ಮೂಡಿಸಿದ್ದರಾದರೂ ರನೌಟಾಗಿ ಹೊರನಡೆದರು.

ಬಹಳ ಸಮಯದ ನಂತರ ರಾಷ್ಟ್ರೀತ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಕೆಎಲ್ ರಾಹುಲ್ ಅದರ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿ ಕೇವಲ 15 ರನ್‌ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆಕ್ರಮಣಕಾರಿಯಾಗಿ ಆಡಿದ ಶ್ರೇಯಸ್ ಅಯ್ಯರ್‍ (22) ಸಹ ದೀರ್ಘ ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಉಳಿದಂತೆ ರಿಶಬ್ ಪಂತ್ 27 ರನ್ ಗಳಿಸಿ ಔಟಾದರು.

ಭಾರತದ ಖ್ಯಾತನಾಮ ಆಟಗಾರರನ್ನು ಹಿಡಿತದಲ್ಲಿಟ್ಟ ಬಾಂಗ್ಲಾದೇಶ ಬೌಲರುಗಳ ಪೈಕಿ ಅಮಿನುಲ್ ಇಸ್ಲಾಮ್ ಹಾಗೂ ಶಫಿಯುಲ್ ಇಸ್ಲಾಮ್ ತಲಾ ಎರಡು ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...