kohli successful ವಿರಾಟ್ ಕೊಹ್ಲಿ ಈಗ ಭಾರತದ ಅತ್ಯಂತ ಯಶಸ್ವಿ ನಾಯಕ

kohli double
kohli record

kohli successful ನಾಯಕನಾಗಿ ಅತಿ ಹೆಚ್ಚು ಪಂದ್ಯ ಗೆದ್ದ ಹೆಗ್ಗಳಿಕೆ ಕೊಹ್ಲಿಗೆ, ಧೋನಿ ದಾಖಲೆ ಬದಿಗೆ

ಬೆಂಗಳೂರು: ಭಾರತದ ಬ್ಯಾಟಿಂಗ್‌ನ ಮೂಲಾಧಾರ ಮತ್ತು ವಿಶ್ವದ ಅತ್ಯಂತ ( kohli successful ) ಪ್ರಭಾವಿ ಆಟಗಾರ ವಿರಾಟ್ ಕೊಹ್ಲಿ ಮುಡಿಗೆ ಮತ್ತೊಂದು ಗರಿ ಸೇರಿದೆ.

ಇದನ್ನೂ ಓದಿ: ಟೆಸ್ಟ್ ಚಾಂಪಿಯನ್‌ಶಿಪ್ 120 ಅಂಕ ಬಾಚಿದ ಕೊಹ್ಲಿ ಬಾಯ್ಸ್

ವೆಸ್ಟ್ ಇಂಡೀಸ್‌ ವಿರುದ್ಧ ಜಮೈಕಾ ಟೆಸ್ಟ್ ಜಯ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಭಾರತಕ್ಕೆ ಸರಣಿ ಸ್ವೀಪ್ ಗರಿ ತಂದುಕೊಟ್ಟ ಈ ಜಯದ ಮೂಲಕ ಭಾರತವನ್ನು ಅತಿ ಹೆಚ್ಚು ಬಾರಿ ಜಯದೆಡೆಗೆ ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ.

ದೇಶಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ 60 ಟೆಸ್ಟ್ ಪಂದ್ಯಗಳಲ್ಲಿ ಭಾರತಕ್ಕೆ 27 ಬಾರಿ ಜಯ ತಂದುಕೊಟ್ಟಿದ್ದರು. ಆದರೆ ಕೊಹ್ಲಿ ನಾಯಕನಾಗಿ ತಮ್ಮ 28ನೇ ಪಂದ್ಯದಲ್ಲಿಯೇ ಈ ದಾಖಲೆ ಮುರಿದಿದ್ದಾರೆ. ತಮ್ಮ ನಾಯಕತ್ವದಲ್ಲಿ ಕೊಹ್ಲಿ ಪಾಲಿಗೆ ಜಮೈಕಾದಲ್ಲಿ ಕಂಡ ಯಶಸ್ಸು 28ನೇಯದ್ದಾಗಿದೆ.

ದೇಶ ಕಂಡ ಯಶಸ್ವಿ ನಾಯಕರ ಪಟ್ಟಿಯಲ್ಲಿ ಈ ಇಬ್ಬರ ನಂತರದ ಸ್ಥಾನದಲ್ಲಿರುವವರೆಂದರೆ ಸೌರವ್ ಗಂಗೂಲಿ ಮತ್ತು ಅಜರುದ್ದೀನ್. ಗಂಗೂಲಿ 21 ಪಂದ್ಯಗಳಲ್ಲಿ ಭಾರತಕ್ಕೆ ಜಯದ ಹಾರ ತೊಡಿಸಿದ್ದರೇ ಅಜರ್‍ ನಾಯಕತ್ವದಲ್ಲಿ ಭಾರತ 14 ಪಂದ್ಯಗಳಲ್ಲಿ ಜಯಶಾಲಿಯಾಗಿತ್ತು.