kohli rested ಬಾಂಗ್ಲಾ ಟಿ-20 ಸರಣಿಯಿಂದ ಕೊಹ್ಲಿಗೆ ವಿರಾಮ

kohli rested
indian captain virat kohli

kohli rested ಕೊಹ್ಲಿ ಬದಲು ತಂಡ ಸೇರಿದ ಶಿವಂ ದುಬೆ

ಮುಂಬೈ: ಬಾಂಗ್ಲಾದೇಶದ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ( kohli rested ) ಮೂರು ಪಂದ್ಯಗಳ ಟಿ-20 ಸರಣಿಯಿಂದ ನಾಯಕ ವಿರಾಟ್ ಕೊಹ್ಲಿ ಹೊರಗುಳಿಯಲಿದ್ದಾರೆ. ಕೊಹ್ಲಿ ಕೋರಿಕೆ ಹಿನ್ನೆಲೆಯಲ್ಲಿ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಇದನ್ನೂ ಓದಿ: ಕ್ರಿಕೆಟ್‌ನಲ್ಲಿ ಮತ್ತೆ ದಾದಾಗಿರಿಯ ದಿನಗಳು ಶುರು

ಇದೇ ವೇಳೆ ಮೂರು ಪಂದ್ಯಗಳ ಟಿ-20 ಸರಣಿ ನಂರ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ವಿರಾಟ್‍ ಕೊಹ್ಲಿ ಮರಳಲಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ಬಿಸಿಸಿಐನ ಆಯ್ಕೆ ಸಮಿತಿ ಬುಧವಾರ ಸಭೆ ಸೇರಿ ತಂಡಗಳನ್ನು ಆರಿಸಿತು.

ವಿಶ್ವಕಪ್ ನಂತರ ವಿಶ್ರಾಂತಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಿಂದ ತೆರವಾಗಿರುವ ಸ್ಥಾನಗಳಿಗೆ ಭರವಸೆಯ ಯುವ ದಾಂಡಿಗ ಶಿವಂ ದುಬೆ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ.

ಟಿ-20 ತಂದ: ರೋಹಿತ್ (ನಾಯಕ), ಧವನ್, ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್, ಮನೀಶ್, ರಿಶಬ್, ಸುಂದರ್‍, ಕೃಣಾಲ್, ಚಾಹಲ್, ರಾಹುಲ್ ಚಾಹರ್‍, ದೀಪಕ್ ಚಾಹರ್‍, ಖಲೀಲ್ ಅಹ್ಮದ್, ಶಿವಂ ದುಬೆ ಮತ್ತು ಶಾರ್ದುಲ್ ಠಾಕೂರ್‍

ಟೆಸ್ಟ್ ತಂಡ: ಕೊಹ್ಲಿ (ನಾಯಕ), ರೋಹಿತ್, ಮಾಯಂಕ್, ಪೂಜಾ, ರಹಾನೆ, ವಿಹಾರಿ, ಸಾಹಾ, ಜಡೇಜಾ, ಅಶ್ವಿನ್, ಕುಲ್ದೀಪ್, ಶಮಿ, ಉಮೇಶ್, ಇಶಾಂತ್, ಶುಭಮನ್, ರಿಶಬ್ ಪಂತ್.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...