kiran shaw ಸರಕಾರದ ಟೀಕಾಕಾರರನ್ನು ದೇಶದ್ರೋಹಿಗಳಂತೆ ನೋಡಲಾಗುತ್ತಿದೆ: ಕಿರಣ್

kiran shaw
kiram shaw and rajul bajaj

kiran shaw ಉದ್ಯಮಿ ರಾಹುಲ್ ಬೆನ್ನಿಗೆ ನಿಂತ ಬಯೋಕಾನ್ ಮುಖ್ಯಸ್ಥೆ ಕಿರಣ್ ಶಾ

ಬೆಂಗಳೂರು: ಪ್ರಧಾನಿ ಮೋದಿ ಆವರ ಸರಕಾರ ಟೀಕಾಕಾರರನ್ನು ( kiran shaw ) ಸಂಶಯದಿಂದ ನೋಡುತ್ತದೆ ಎಂದು ಖ್ಯಾತ ಉದ್ಯಮಿ ರಾಹುಲ್ ಬಜಾಜ್ ಆರೋಪಿಸಿದ ಬೆನ್ನಲ್ಲಿಯೇ ಮತ್ತೋರ್ವ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ ಈ ಆರೋಪವನ್ನು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ಇನ್ನೂ ಒಂದು ತಿಂಗಳು ಕೈಗೆಟುಕದು ಈರುಳ್ಳಿ

ಸರಕಾರದ ತನ್ನ ಟೀಕಾಕಾರರನ್ನು ದೇಶದ್ರೋಹಿಗಳಂತೆ ನೋಡಲಾಗುತ್ತಿದೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ತೀರಾ ಗಂಭೀರವಾದ ಆರೋಪ ಮಾಡಿದ್ದಾರೆ. ಇದಕ್ಕೆ ಮುನ್ನ ಕಾರ್ಯಕ್ರಮವೊಂದರಲ್ಲಿ ರಾಹುಲ್ ಬಜಾಜ್ ಸಹ ಕೇಂದ್ರ ಸರಕಾರದ ನೀತಿಗಳನ್ನು ಟೀಕಿಸಿ ಬದುಕುವುದು ಕಷ್ಟ ಎಂಬರ್ಥದಲ್ಲಿ ಮಾತನಾಡಿದ್ದರು.

ದೇಶದ ಖ್ಯಾತ ಉದ್ಯಮಿಗಳ ಈ ಟೀಕೆ ಸಹಜವಾಗಿಯೇ ರಾಝಕೀಯ ವಲಯದಲ್ಲಿ ಸಾಖಷ್ಟು ಸದ್ದು ಮಾಡುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ಇದನ್ನು ಉಲ್ಲೇಖಿಸಿ ಮೋದಿ ಸರಕಾರದ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದೆ. ಸಂಸತ್ತಿನಲ್ಲಿ ಸಹ ಸೋಮವಾರ ಈ ವಿಷಯ ಪ್ರಸ್ತಾಪವಾಯಿತು.

ಇದೇ ವೇಳೆ ಸ್ವಂತ ಅಭಿಪ್ರಾಯಗಳನ್ನು ಸಮುದಾಐದ ಅಭಿಪ್ರಾಯ ಎಂಬಂತೆ ಬಿಂಬಿಸುವುದು ದೇಶದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಹುಲ್ ಬಜಾಜ್ ಅವರಿಗೆ ನೇರವಾಗಿ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...