kichcha pailwan ಪಂಚಭಾಷೆಗಳಲ್ಲಿ ಕಿಚ್ಚನ ಪೈಲ್ವಾನ್ ಟ್ರೇಲರ್ ರಿಲೀಸ್

sudeep pailwaan
sudeep in pailwan

kichcha pailwan ಅಭಿಮಾನಿಗಳಲ್ಲಿ ನಿರೀಕ್ಷೆ, ಕಾತರ ಹೆಚ್ಚಿಸಿದ ಕಿಚ್ಚ ಪೈಲ್ವಾನ

ಬೆಂಗಳೂರು: ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಟ್ರೇಲರ್‍ ( kichcha pailwan ) ಅನ್ನು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಇದನ್ನೂ ಓದಿ:ಕುರುಕ್ಷೇತ್ರ ಮೊದಲ ವಾರದ ಗಳಿಕೆ 30 ಕೋಟಿ ರೂ!

ಚಿತ್ರ ಸೆಪ್ಟೆಂಬರ್ 12ಕ್ಕೆ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಮೊದಲ ತುಣುಕು ನೋಡಿಯೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರ ಜೊತೆಗೆ ಹಿಂದಿ ನಟ ಸುನೀಲ್ ಶೆಟ್ಟಿ ಸಹ ನಟಿಸುತ್ತಿದ್ದು ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಕನ್ನಡ, ಮಲಯಾಳಂ ಹಾಗೂ ತಮಿಳಿನ ಟ್ರೈಲರ್​ ಅನ್ನು ಲಹರಿ ಬಿಡುಗಡೆ ಮಾಡಿದರೆ, ತೆಲುಗು ಟ್ರೈಲರ್​ ಅನ್ನು ವರಾಹಿ ಚಲನಚಿತ್ರ ಹಾಗೂ ಹಿಂದಿ ಟ್ರೈಲರ್​ ಅನ್ನು ಝೀ ಸ್ಟುಡಿಯೋಸ್​ ಬಿಡುಗಡೆ ಮಾಡಿವೆ.

‘ಕೆ.ಜಿ.ಎಫ್’ ನಂತರ ಕನ್ನಡದ ಬಹುನಿರೀಕ್ಷಿತ ಚಿತ್ರ ಅಂತಲೇ ಬಿಂಬಿತವಾಗಿರೋ ‘ಪೈಲ್ವಾನ್’ ಟ್ರೈಲರ್ 5 ಭಾಷೆಗಳ್ಲಲಿ ಇಂದು ರಿಲೀಸ್ ಆಗಿದೆ. ಕೆಜಿಎಫ್ ನಂತರ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಚಿತ್ರ ಇದಾಗಿದ್ದು, ಕನ್ನೆದ ಮಾರುಕಟ್ಟೆಯ ವ್ಯಾಪ್ತಿಯನ್ನು ಹಿಗ್ಗಿಸಿದೆ.