kgf-2 ಹೀಗಿದೆ ನೋಡಿ ಯಶ್ ಕೆಜಿಎಫ್ ಚಾಪ್ಟರ್ 2 ಮೊದಲ ಲುಕ್

kgf-2
kgf 2 first look

kgf-2 ಕೆಜಿಎಫ್-1 ವರ್ಷಾಚರಣೆಗೆ ಬಿಡುಗಡೆಯಾಯ್ತು ಚಾಪ್ಟರ್ 2 ಲುಕ್ 

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ ಅಭಿನಯದ ಭಾರೀ ನಿರೀಕ್ಷೆಯ ( kgf-2) ಕೆಜಿಎಫ್ ಚಾಪ್ಟರ್ 2ರ ಫಸ್ಟ್ ಲುಕ್ ಕೊನೆಗೂ ಬಹಿರಂಗಗೊಂಡಿದೆ. ಈ ಹಿಂದೆ ಹೇಳಿದಂತೆಯೇ ಚಿತ್ರತಂಡ ಶನಿವಾರ ಸಂಜೆ ಚಿತ್ರದ ಮೊದಲ ತುಣುಕು ಬಿಡುಗಡೆ ಮಾಡಿತು.

ಇದನ್ನೂ ಓದಿ: ಜನವರಿ ಮೊದಲ ವಾರದಲ್ಲಿ ಯಶ್ ಕೆಜಿಎಫ್2 ಟೀಸರ್ ಝಲಕ್

ಕಳೆದ ವರ್ಷ ಡಿಸೆಂಬರ್ 21 ರಂದು ಕೆಜಿಎಫ್ ಚಾಪ್ಟರ್ 1 ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ಕನ್ನಡ ಚಿತ್ರರಂಗದತ್ತ ಇಡೀ ದೇಶವೇ ತಿರುಗಿನೋಡುವಂತೆ ಮಾಡಿತ್ತು. ಅದರ ವರ್ಷಾಚರಣೆಯ ಸಂದರ್ಭದಲ್ಲಿ ಈ ಕರಜಿಎಫ್-2 ಲುಕ್ ಬಿಡುಗಡೆ ಮಾಡಲಾಯಿತು.

ಕೆಜಿಎಫ್2 ಚಿತ್ರದ ಮೊದಲ ಟೀಸರ್ ಜನವರಿ ಮೊದಲ ವಾರದಲ್ಲಿ ಬಿಡುಗಡೆ ಆಗಲಿವೆ. ಸ್ವತಃ ನಾಯಕ ಯಶ್ ಈ ಮಾತನ್ನು ಸಾರ್ವಜನಿಕವಾಗಿ ಹೇಳಿದ್ದಾರೆ.

ಚಿತ್ರದ ಚಿತ್ರೀಕರಣ ಶೇ. 70 ಭಾಗ ಮುಕ್ತಾಯವಾಗಿದ್ದು, ಟೀಸ್ ಬಿಡುಗಡೆಯ ಮೂಲಕ ಮುಂದಿನ ಯುಗಾದಿ ವೇಳೆಗೆ ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರ ತಂಡ ನಿರತವಾಗಿದೆ.

ಬಾಕ್ಸಾಫೀಸಿನಲ್ಲಿ ನೂರಾರು ಕೋಟಿ ಬಾಚಿ ಕನ್ನಡದ ಅತ್ಯಂತ ಯಶಸ್ವಿ ಚಿತ್ರ ಎನಸಿರುವ ಕೆಜಿಎಫ್ ಚಾಪ್ಟರ್ ಒನ್‌ನ ಮುಂದುವರಿದ ಭಾಗವಾಗಿರುವ ಕೆಜಿಎಫ್2ನಲ್ಲಿ ಹಿಂದಿ ಚಿತ್ರರಂಗದ ಖ್ಯಾತ ನಟ ಸಂಜಯ್ ದತ್ ಪ್ರಮುಖವಾದ ಖಳನ ಪಾತ್ರ ನಿರ್ವಹಿಸುತ್ತಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ಕೆಜಿಎಫ್ ಮೊದಲ ಭಾಗಕ್ಕಿಂತ ಚಾಪ್ಟರ್‍ 2ರಲ್ಲಿ ಇನ್ನೂ ಭೀಕರವಾದ ಹೋರಾಟ ಸನ್ನಿವೇಶಗಳಿದೆ ಎನ್ನಲಾಗಿದೆ. ಮೊದಲ ಭಾಗಕ್ಕಿಂತ ಇನ್ನೂ ಹೆಚ್ಚಿನ ಆ್ಯಕ್ಷನ್ ಸನ್ನಿವೇಶಗಳನ್ನು ಇರಲಿವೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ಈಗಾಗಲೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...