kashmir placard ಫ್ರೀ ಕಾಶ್ಮೀರ ಎಂದ ಯುವತಿ ಮೈಸೂರಿನಿಂದ ನಾಪತ್ತೆ

kashmir placard
(ಪ್ರಾತಿನಿಧಿಕ ಚಿತ್ರ)

kashmir placard ಪ್ರತಿಭಟನೆಗೆ ಅನುಮತಿ ಇರಲಿಲ್ಲ: ರಾಜ್ಯಪಾಲರಿಗೆ ವಿವಿ ಕುಲಪತಿ ವರದಿ

ಮೈಸೂರು: ಮೈಸೂರು ವಿವಿಯಲ್ಲಿ “ಫ್ರೀ ಕಾಶ್ಮೀರ”ದ ಪೋಸ್ಟರ್ ಪ್ರದರ್ಶಿಸಿದ್ದ ಯುವತಿ, ( kashmir placard )  ತಮಿಳುನಾಡು ಮೂಲದ ನಳಿನಿ ಬಾಲಕುಮಾರ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಫ್ರೀ ಕಾಶ್ಮೀರ ನಾಮಫಲಕ: ವರದಿ ಕೇಳಿದ ವಾಲಾ, ಎಫ್‌ಐಆರ್‍ ದಾಖಲು

ಪ್ರತಿಭಟನೆ ಸಂಬಂಧ ಪೊಲೀಸ್ ಪ್ರಕರಣ ದಾಖಲಾಗುತಿದ್ದಂತೆ ತಮ್ಮ ಫೇಸ್‌ಬುಕ್‌ ಖಾತೆ ಡಿಲಿಟ್ ಮಾಡಿರುವ ಯುವತಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಜಯಲಕ್ಷ್ಮಿಪುರಂ ಪೊಲೀಸರು ಆಕೆಗಾಗಿ ಶೋಧ ನಡೆಸಿದ್ದಾರೆ. ಅಲ್ಲದೇ ಠಾಣೆಗೆ ಹಾಜರಾಗುವಂತೆ ಪ್ರತಿಭಟನೆ ಆಯೋಜಕರಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಈ ಮಧ್ಯೆ ಮೈಸುರು ವಿವಿ ಕುಲಪತಿ ಆರ್. ಶಿವಪ್ಪರಿಂದ ರಾಜ್ಯಪಾಲರಿಗೆ ಘಟನೆ ಕುರಿತು ವರದಿ ಸಲ್ಲಿಸಲಾಯಿತು. ವಿವಿಯಲ್ಲಿ ನಡೆದ ಪ್ರತಿಭಟನೆ ಅನಧಿಕೃತ, ಇದಕ್ಕೆ ಅನುಮತಿ ಇರಲಿಲ್ಲ ಎಂದು ಕುಲಪತಿ ಶಿವಪ್ಪ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಜೆಎನ್‌ಯು ಗಲಭೆ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ವೇಳೆ ನಳಿನಿ ಎಂಬಾಕೆಯು ಫ್ರೀ ಕಾಶ್ಮೀರ ಎಂಬ ನಾಮಫಲಕ ಪ್ರದರ್ಶಣ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯಪಾಲ ವಜೂಭಾಯಿ ವಾಲಾ ಘಟನೆ ಕುರಿತು ಕುಲಪತಿಯಿಂದ ವರದಿ ಕೇಳಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...