karnataka crush ಮಿಂಚಿದ ರಾಹುಲ್, ಮೋರೆ: ಪಂಜಾಬ್‌ಗೆ ಕರ್ನಾಟಕ ಪಂಚ್

karnataka crush
ronit more and kl rahul

karnataka crush ಮುಷ್ತಾಕ್ ಅಲಿ ಟಿ-20: ಪಂಜಾಬ್ 163/6, ಕರ್ನಾಟಕ 167/3

ಸೂರತ್: ದೇಶೀಯ ಕ್ರಿಕೆಟ್‌ನಲ್ಲಿ ತನ್ನ ನಾಗಾಲೋಟ ಮುಂದುವರಿಸಿರುವ ( karnataka crush ) ಕರ್ನಾಟಕ ತಂಡವು ಚುಟುಕು ಮಾದರಿಯ ಪಾರುಪತ್ಯಕ್ಕಾಗಿ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟಿ-20 ಪಂದ್ಯಾವಳಿಯ ಸೂಪರ್‍ ಲೀಗ್ ಹಂತದಲ್ಲಿ ಸತತ ಮೂರನೇ ಜಯ ದಾಖಲಿಸಿದೆ.

ಇದನ್ನೂ ಓದಿ: ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ’ದೇವದತ್ತ’ವಾದ ಗೆಲುವು

ಭಾನುವಾರ ನಡೆದ ಸೂಪರ್‌ ಲೀಗ್‌ ಪಂದ್ಯದಲ್ಲಿ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಪಂಜಾಬ್ ವಿರುದ್ಧ 7 ವಿಕೆಟ್‌ಗಳ ಸರಾಗ ಗೆಲುವು ಸಂಪಾದಿಸಿ ಲೀಗ್‌ನಲ್ಲಿ ಸತತ ಮೂರನೇ ಜಯ ತನ್ನ ಖಾತೆಗೆ ಬರೆದುಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಎದುರಾಳಿ ಪಂಜಾಬಿಗೆ ನೀಡಿದ ಕರ್ನಾಟಕ ಕರಾರುವಾಕ್ ದಾಳಿ ಸಂಘಟಿಸಿ ದೊಡ್ಡ ಸವಾಲು ಎದುರಾಗದಂತೆ ನೋಡಿಕೊಂಡಿತು.

ನಾಯಕ ಮಂದೀಪ್ ಸಿಂಗ್ ಅವರ 76 ರನ್ನುಗಳ ನೆರವಿನಿಂದ ಪಂಜಾಬ್ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಕಲೆ ಹಾಕಿತು. ಕರ್ನಾಟಕದ ಪರ ಭರ್ಜರಿ ಬೌಲಿಂಗ್ ಮಾಡಿದ ಮಧ್ಯಮ ವೇಗಿ ರೋನಿತ್ ಮೋರೆ ಕೇವಲ 27 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಪಂಜಾಬಿನ ಈ ಸಾಧಾರಣ ಮೊತ್ತಕ್ಕೆ ಕರ್ನಾಟಕದ ಉತ್ತರ ಭರ್ಜರಿಯಾಗಿಯೇ ಇತ್ತು. ಇನ್ನೂ ಎರಡು ಓವರು ಇರುವಂತೆಯೇ ಕರ್ನಾಟಕದ ದಾಂಡಿಗರು ಕೇವಲ ಮೂರು ಹುದ್ದರಿ ನಷ್ಟಕ್ಕೆ ತಂಡವನ್ನು ದಡ ದಾಟಿಸಿದರು. ಆರಂಭಿಕ ರಾಹುಲ್ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 48 ಎಸೆತಗಳಲ್ಲಿ 84 ರನ್ ಚಚ್ಚಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...