karnataka beat ರಣಜಿ: ಕರ್ನಾಟಕಕ್ಕೆ ಕೋಡು, ಮುಂಬೈಗೆ ಸೋಲು

karnataka beat

karnataka beat ಮುಂಬೈ ತಂಡವನ್ನು 5 ವಿಕೆಟ್ಟುಗಳಿಂದ ಮಣ್ಣುಮುಕ್ಕಿಸಿದ ಕರ್ನಾಟಕ

ಮುಂಬೈ: ಪ್ರಸಕ್ತ ಸಾಲಿನ ರಣಜಿ ಪಂದ್ಯಾವಳಿಯ ಮುಂಬೈ ( karnataka beat ) ವಿರುದ್ಧದ ಪ್ರತಿಷ್ಠಿತ ಕಾಳಗದಲ್ಲಿ ಕರ್ನಾಟಕ ತಂಡವು ಐದು ವಿಕೆಟ್ಟುಗಳಿಮದ ಜಯಶಾಲಿಯಾಗಿದೆ. ಈ ಋತುವಿನಲ್ಲಿ ಇದು ಕರ್ನಾಟಕಕ್ಕೆ ಸಂದಾಯವಾದ ಎರಡನೇ ಗೆಲುವಾಗಿದೆ.

ಇದನ್ನೂ ಓದಿ: ರಣಜಿ: ಕರ್ನಾಟಕದ ಚೆಂಡಾಟಕ್ಕೆ ಬೆಚ್ಚಿದ ಮುಂಬಯಿ

ಮೊದಲ ಸರದಿಯಲ್ಲಿ 24 ರನ್ ಮುನ್ನಡೆ ಪಡೆದಿದ್ದ ಕರ್ನಾಟಕ ಮುಂಬೈನ ಎರಡನೇ ಸರದಿಯನ್ನು 149 ರನ್ನುಗಳಿಗೆ ನಿಯಂತ್ರಿಸಿತು. ನಂತರ ಗೆಲುವಿಗೆ ಅಗತ್ಯವಾಗಿದ್ದ ರನ್ನುಗಳನ್ನು ಐದು ವಿಕೆಟ್ ಕಳೆದುಕೊಂಡು ಗಳಿಸಿ ಜಯಮಾಲೆ ತೊಟ್ಟಿತು.

ಎರಡನೇ ದಿನದಾಟದಲ್ಲಿ ಐದು ವಿಕೆಟ್ ಕಳೆದುಕೊಂಡು 109 ರನ್ ಮಾಡಿದ್ದ ಮುಂಬೈ ಮೂರನೇ ದಿನವಾದ ಭಾನುವಾರ ಹೆಚ್ಚು ಶರಣಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಪ್ರತೀಕ್ ಜೈನ್ 4 ವಿಕೆಟ್ ಪಡೆದರೇ ಅನುಭವಿ ಮಿಥುನ್ ಮೂರು ವಿಕೆಟ್ ಕಬಳಿಸಿ ಮುಂಬೈಗೆ ಮಾರಕವಾದರು.

ಗೆಲ್ಲಲು 12೬ ರನ್ನುಗಳ ಗುರಿ ಬೆಂಬತ್ತಿದ ಕರ್ನಾಟಕ ಉತ್ತಮ ಆರಂಭ ಪಡೆಯಿತು. ಮೊದಲ ಸರದಿಯಲ್ಲಿ ಶತಕ ವಂಚಿತ ಸಮರ್ಥ್ ಮತ್ತು ದೇವದತ್ ಕರ್ನಾಟಕಕ್ಕೆ ಉತ್ತಮ ಆರಂಭವನ್ನೇ ನೀಡಿದರು. ದೇವದತ್ ಅರ್ಧಶತಕ (50) ಬಾರಿಸಿದರೇ ಸಮರ್ಥ್ 34 ರನ್ ಗಳಿಸಿದರು.

ಈ ಜಯದೊಂದಿಗೆ ರಣಜಿ ಬಿ ಗುಂಪಿನಲ್ಲಿ ನಾಲ್ಕು ಪಂದ್ಯಗಳಿಂದ 16 ಅಂಕ ಶೇಖರಿಸಿ ಕರ್ನಾಟಕ ತಂಡವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...