kannadiga ಕನ್ನಡಿಗ ಎಂದರೆ ಯಾರು, ಕನ್ನಡಿಗನಾಗಲು ಏನು ಮಾಡಬೇಕು

kannadiga
kannada, kannadiga

kannadiga ಕನ್ನಡಿಗ ಎನಿಸಿಕೊಳ್ಳಲು ಸರಕಾರದ ಹೊಸ ಮಾನದಂಡ

ಬೆಂಗಳೂರು: ಕನ್ನಡ ಕೇವಲ ಒಂದು ಭಾಷೆಯಲ್ಲ ( kannadiga ) ಅದೊಂದು ಸಂಸ್ಕೃತಿ ಎಂದು ನಂಬಿರುವ ಜನ ನಾವು ಕನ್ನಡಿಗರು. ಹಾಗಾದರೇ ಕನ್ನಡಿಗರು ಎನಿಸಿಕೊಳ್ಳಲು ಈ ನಂಬಿಕೆಯೊಮದೇ ಸಾಕೇ ಅಥವಾ ಬೇರೆ ಯಾವುದಾದರೂ ಮಾನದಂಡವಿದೆಯೇ ಎಂದು ನೀವು ಕೇಳಿದರೇ ಹೌದು ಎನ್ನಲೇಬೇಕು.

ಇದನ್ನೂ ಓದಿ: ಉಪ ಚುನಾವಣೆವರೆಗೆ ರಾಜ್ಯಪಾಲ ವಾಲಾ ಸೇಫ್

ಕನ್ನಡಿಗರು ಎಂದರೆ ಯಾರು? ಕನ್ನಡಿಗನಾಗಲು ಏನು ಮಾಡಬೇಕು ಎಂಬುದರ ಬಗ್ಗೆ ರಾಜ್ಯ ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ರೂಪಿಸಿದೆ. ಈ ಮಾರ್ಗಸೂಚಿಗೆ ಒಳಪಡುವ ಎಲ್ಲರೂ ಇನ್ನು ಮುಂದೆ ತಮ್ಮನ್ನು ಕನ್ನಡಿಗರು ಎಂದು ಕರೆದುಕೊಳ್ಳಬಹುದಾಗಿದೆ.

ಹಾಗಾದರೇ ಆ ಮಾರ್ಗಸೂಚಿ ಏನಂತೀರಾ? ಕನ್ನಡ ನೆಲದಲ್ಲಿ ಕನಿಷ್ಟ 15 ವರ್ಷ ವಾಸವಿದ್ದು, ಕಸ್ತೂತಿ ಕನ್ನಡ ಭಾಷೆಯನ್ನು ಓದಲು, ಬರೆಯಲು ಬಂದರೆ ಸಾಕು ಯಾರು ಬೇಕಾದರೂ ಕನ್ನಡಿಗರಾಗುತ್ತಾರೆ ಎನ್ನುತ್ತದೆ ಸರಕಾರದ ಹೊಸ ಮಾರ್ಗಸೂಚಿ.

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವುದನ್ನು ಕಡ್ಡಾಯಗೊಳಿಸುವ ಹೊಸ ನಿಯಮಾವಳಿಗೆ ರಾಜ್ಯ ಸರಕಾರ ಅಸ್ತು ಎಂದಿದ್ದು ಅದರಲ್ಲಿ ಈ ಮಾರ್ಗಸೂಚಿಯನ್ನು ಅಳವಡಿಸಲಾಗಿದೆ. ಈ ನಿಯಮಾವಳಿ ಅನುಸಾರ ಖಾಸಗಿ ಸಂಸ್ಥೆಗಳಲ್ಲಿ ಕಾರಕೂನಿಕೆ ಮತ್ತು ಭದ್ರತಾ ಕಾರ್‍ಯಗಳಲ್ಲಿ ಕನ್ನಡಿಗರ ನೇಮಕವನ್ನು ಕಡ್ಡಾಯಗೊಳಿಸಲಾಗಿದೆ.

ಈ ನಿಯಮವನ್ನು ಉಲ್ಲಂಘಿಸುವ ಸಂಘ-ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರಕಾರ ಇನ್ನು ಮುಂದೆ ಹೊಂದಲಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಎಂಬ ಬಹು ವರ್ಷಗಳ ಕೂಗಿಗೆ ತಕ್ಕ ಮಟ್ಟಿನ ಯಶಸ್ಸು ಇದರಿಂದ ಸಿಗುವ ಆಶಾಭಾವ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...