justice santosh ಟಿಪು ಪರ ಬ್ಯಾಟ್ ಬೀಸಿದ ನ್ಯಾ. ಸಂತೋಷ್ ಹೆಗ್ಡೆ

justice santosh
justice santosh hegde on tipu sultan

justice santosh ಇತಿಹಾಸದಿಂದ ಟಿಪು ಮರೆಮಾಚಲು ಸಾಧ್ಯವಿಲ್ಲ ಎಂದ ನ್ಯಾ ಹೆಗ್ಡೆ

ಬಳ್ಳಾರಿ: ಸರಕಾರಗಳ ಏನೇ ಮಾಡಿದರೂ ( justice santosh ) ಇತಿಹಾಸ ಬದಲಾಗದು ಎಂದು ಹೇಳುವ ಮೂಲಕ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಟಿಪುವಿನ ಇತಿಹಾಸ ಮರೆಮಾಚುವ ರಾಜ್ಯಸ ರಕಾರದ ಕ್ರಮವನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್‌ನಲ್ಲಿ 10 ಸಾವಿರ ಉದ್ಯೋಗಿಗಳ ನೌಕರಿ ಕಟ್

ರಾಜ್ಯ ಸರಕಾರ ಪಠ್ಯ ಪುಸ್ತಕದಿಂದ ಟಿಪುವಿನ ಇತಿಹಾಸ ಮರೆಮಾಚಲು ಹೊರಟಿದೆ. ಆದರೆ ಇತಿಹಾಸದಿಂದ ಟಿಪುವನ್ನು ಅಳಿಸಿಹಾಕಲು ಅಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಹೆಗ್ಡೆ ಅವರು ಹೇಳಿದ್ದಾರೆ.

ಇತಿಹಾಸವನ್ನು ಯಾವುದೇ ಸರಕಾರವಾದರೂ ತಮ್ಮ ನಿರ್ದಿಷ್ಟ ರಾಜಕೀಯ ಲಾಭಕ್ಕಾಗಿ ಬದಲಿಸುವ ಸಾಹಸಕ್ಕೆ ಕೈ ಹಾಕಬಾರದು. ಒಬ್ಬ ವ್ಯಕ್ತಿಯ ಚರಿತ್ರೆಯನ್ನು ಅಷ್ಟು ಸುಲಭವಾಗಿ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ನ್ಯಾ ಹೆಗ್ಡೆ ಅಭಿಪ್ರಾಯಪಟ್ಟರು.

ರಾಜ್ಯ ಸರಕಾರ ಪಠ್ಯ ಪುಸ್ತಕಗಳಿಂದ ಟಿಪ್ಪು ಕುರಿತಾದ ಅಧ್ಯಾಯವನ್ನು ತೆಗೆದುಹಾಕಬಹುದು. ಆದರೆ, ಚರಿತ್ರೆಯ ಪುಟಗಳಿಂದ ಟಿಪುವಿನ ಇರುವಿಕೆಯನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ನ್ಯಾ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಯಡಿಯೂರಪ್ಪ ನೇತೃತ್ವದ ಸರಕಾರ ಟಿಪು ಜಯಂತಿ ಆಚರಣೆ ಕೈಬಿಟ್ಟ ಬೆನ್ನಲ್ಲಿಯೇ ಇತಿಹಾಸ ಪಠ್ಯದಿಂದಲೂ ಟಿಪು ಅಧ್ಯಾಐ ಕೈಬಿಡಲು ಮುಂದಾಗಿದ್ದು, ಅದಕ್ಕಾಗಿ ಸಮಿತಿಯೊಂದನ್ನು ರಚಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...