judgement day ಅಯೋಧ್ಯಾ ಐತೀರ್ಪು: ರಾಮ ಮಂದಿರ ನಿರ್ಮಾಣ ಹಾದಿ ಸುಗಮ, ಮಸೀದಿಗೆ ಪರ್ಯಾಯ ಜಾಗ

judgement day

judgement day ದಶಕಗಳ ಅಯೋಧ್ಯಾ ವಿವಾದಕ್ಕೆ ಸುಪ್ರೀಂ ತೆರೆ

ಹೊಸದಿಲ್ಲಿ: ದಶಕಗಳಿಂದ ಇತ್ಯರ್ಥ ಕಾಣದೇ ಉಳಿದಿದ್ದ ( judgement day ) ಅಯೋಧ್ಯೆಯ ರಾಮಜನ್ಮ ಭೂಮಿ ವಿವಾದಕ್ಕೆ ಸುಪ್ರೀಂ ಕೊರ್ಟು ಕೊನೆಗೂ ತೆರೆ ಎಳೆದಿದೆ. ರಾಮಜನ್ಮ ಭೂಮಿಯ ಹಕ್ಕನ್ನು ಹಿಂದೂಗಳಿಗೆ ನೀಡಿ ಮಸೀದಿ ನಿರ್ಮಾಣಕ್ಕೆ ಪರ್ಯಾಯ ಜಾಗೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಮೂರು ತಿಂಗಳ ಒಳಗಾಗಿ ಅಯೋಧ್ಯಾ ಟ್ರಸ್ಟ್ ರಚಿಸಿ ಆ ಮೂಲಕ ಭೂಮಿಯ ಪರಭಾರೆ ಸೇರಿದಂತೆ ಎಲ್ಲ ಕೆಲಸ ನಡೆಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ. ಅಯೊಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡುವಂತೆಯೂ ಕೋರ್ಟು ಆದೇಶಿಸಿದೆ.

ಅಯೋಧ್ಯೆಯಲ್ಲಿನ ಸಂಪೂರ್ಣ ವಿವಾದಿತ ಪ್ರದೇಶದ ಭೂ ಹಕ್ಕನ್ನು ಪ್ರಧಾನ ಅರ್ಜಿದಾರರಾದ ಜನ್ಮ ಭೂಮಿ ನ್ಯಾಸಕ್ಕೆ ಒಪ್ಪಿಸುವಂತೆ ವಿಶೇಷ ಪೀಠ ಆದೇಶ ನೀಡಿದೆ.

ಇದನ್ನೂ ಓದಿ: ಅಯೋಧ್ಯೆ ವಿವಾದದ ಕಾಲದರ್ಶಿ

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಐದು ನ್ಯಾಯಮೂರ್ತಿಗಳ ಪೀಠ ಶನಿವಾರ ಈ ಐತಿಹಾಸಿಕ ತೀರ್ಪು ಪ್ರಕಟಿಸಿತು. ಪೀಠದಲ್ಲಿ ಸಿಜೆ ಗೊಗೋಯಿ ಅವರಲ್ಲದೇ ನಿಯೋಜಿತ ಸಿಜೆ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್‍ ಅವರುಗಳಿದ್ದರು.

ಸತತ 40 ದಿನಗಳ ಕಾಳ ಪ್ರಕರಣದ ವಿಚಾರಣೆ ನಡೆಸಿದ್ದ ಈ ನ್ಯಾಯಪೀಠವು ಕಳೆದ ತಿಂಗಳು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ರಾಮಜನ್ಮ ಭೂಮಿಯ ವಿವಾದಿತ ಪ್ರದೇಶದ ಮೇಲೆ ನಿರ್ಮೋಹಿ ಅಖಾಡ ಮತ್ತು ಶಿಯಾ ವಕ್ಫ್ ಮಂಡಳಿಯ ಅಧಿಕಾರದ ದಾವೆಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿತು.

ಧರ್ಮ ಅಥವ ನಂಬಿಕೆಗಳ ಮೇಲಷ್ಟೇ ಈ ವಿವಾದವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದ ಪೀಠವು ವಿವಾದವನ್ನು ಕಾನೂನಿನ ಪರಿಧಿಯ ಒಳಗಷ್ಟೇ ಇತ್ಯರ್ಥ ಪಡಿಸುವುದಾಗಿ ಹೇಳಿತು.

ಇಷ್ಟಕ್ಕೂ ಏನಿದು ವಿವಾದ, ಯಾವಾಗಿದರ ಆರಂಭ, ಆಗಿನಿಮದ ಈವರೆಗೆ ಏನೆಲ್ಲ ನಡೆಯಿತು ಎಂಬುದರ ಕಾಲದರ್ಶಿ ಇಲ್ಲಿದೆ.

1528 – ಮೊಘಲರ ದೊರೆ ಬಾಬರ್‌ನ ಸೇನಾಧಿಪತಿ ಮಿರ್ ಬಾಕಿ ಅಯೋಧ್ಯೆ ಈಗಿನ ವಿವಾದಿತ ಪ್ರದೇಶದಲ್ಲಿ ಬಾಬ್ರಿ ಮಸೀದಿ ಕಟ್ಟಿದ. ಅಲ್ಲಿ ದೇವಾಲಯ ಇತ್ತೆಂಬುದು ಹಿಂದೂಗಳ ನಂಬಿಕೆ ಮತ್ತು ವಾದ.
1949–50: ರಾಮಲಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ. ವಿಗ್ರಹ ಪೂಜೆಗೆ ಅನುಮತಿ ಕೋರಿ ಫೈಜಾಬಾದ್ ಕೋರ್ಟ್‍ಗೆ ಅರ್ಜಿ.
1959 – ವಿವಾದಿತ ಪ್ರದೇಶದ ಭೂಮಿಯ ಸ್ವಾಧೀನ ಕೋರಿ ನಿರ್ಮೋಹಿ ಅಖಾಡದಿಂದ ಅರ್ಜಿ
1981 – 22 ವರ್ಷಗಳ ನಂತರ ಜಾಗದ ಒಡೆತನಕ್ಕೆ ಸುನ್ನಿ ವಕ್ಫ್ ಮಂಡಳಿಯಿಂದ ದಾವೆ
1986 – ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಕೋರ್ಟ್ ಆದೇಶ
1989 – ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಲಹಬಾದ್ ಹೈಕೋರ್ಟ್ ಆದೇಶ
1990 – ಬಿಜೆಪಿಯ ಲಾಲ್ ಕೃಷ್ಣ ಆಡ್ವಾಣಿ ಅವರಿಂದ ರಾಮಜನ್ಮ ಭೂಮಿಗಾಗಿ ರಥಯಾತ್ರೆ.
1992 – ಡಿಸೆಂಬರ್ 6 – ಬಾಬ್ರಿ ಮಸೀದಿಯ ಧ್ವಂಸ
2002 – ಜಾಗದ ಒಡೆತನದ ಬಗ್ಗೆ ಅಲಹಬಾದ್ ಹೈಕೋರ್ಟ್‍ನಲ್ಲಿ ವಿಚಾರಣೆ
2010 – ರಾಮಜನ್ಮ ಭೂಮಿಯ ವಿವಾದಿತ ಸ್ಥಳ ಮೂರ್ಭಾಗ. ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾ ನ್ಯಾಸಗಳಿಗೆ ಸಮಾಣ ಹಂಚಿಕೆ.
2011 – ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ
2017 – ಸಂಧಾನದ ಮೂಲಕ ವ್ಯಾಜ್ಯ ಪರಿಹಾರಕ್ಕೆ ಅಂದಿನ ಸಿಜೆಐ ಖೇಹರ್ ಸಲಹೆ
2017 – ಅಲಹಾಬಾದ್ ಹೈಕೋರ್ಟ್‍ನ 1994ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್‍ನಲ್ಲಿ ವಿಶೇಷ ಪೀಠ ರಚನೆ

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...