Jio ರೂ.594, ರೂ.297ಕ್ಕೆ ದೀರ್ಘಾವಧಿ ಪ್ಲಾನ್ ಲಾಂಚ್

ತನ್ನ ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಹೊಸದಾಗಿ ಮಾನ್ ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘವಧಿಯ ಪ್ಲಾನ್‌ಗಳನ್ನು ಲಾಂಚ್ ಮಾಡಿದೆ, ರೂ. 594 ಮತ್ತು ರೂ. 297ಕ್ಕೆ ದೊರೆಯುವ ಪ್ಲಾನ್ ಗಳು ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ.

ಇದನ್ನೂ ಓದಿ: ಅಂಗೈಯಲ್ಲಿ ಜಿಯೋಫೋನ್ ಇದ್ದರೆ, ಕುಂಭಮೇಳವೇ ನಿಮ್ಮೊಡನೆ!

Jio Phone Offer
Jio Phone Offer

ರೂ. 594 ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ, ಅಲ್ಲದೇ ನಿತ್ಯ 0.5 GB ಡೇಟಾ ವನ್ನುಪಡೆದುಕೊಳ್ಳಬಹುದಾಗಿದೆ, ಇದು ಖಾಲಿಯಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 168 ದಿನಗಳ ವ್ಯಾಲಿಡಿಟಿ ಹೊಂದಿದೆ, ಅಂದರೆ ಆರು ತಿಂಗಳ ವ್ಯಾಲಿಡಿಟಿ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

ಇದನ್ನೂ ಓದಿ: ರಿಲಯನ್ಸ್ jioಗೆ ಹೊಸ partner ರಿಯಲ್‌ಮಿ

ರೂ. 297ಕ್ಕೆ ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ, ಅಲ್ಲದೇ ನಿತ್ಯ 0.5 GB ಡೇಟಾ ವನ್ನುಪಡೆದುಕೊಳ್ಳಬಹುದಾಗಿದೆ, ಇದು ಖಾಲಿಯಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 84 ದಿನಗಳ ವ್ಯಾಲಿಡಿಟಿ ಹೊಂದಿದೆ, ಅಂದರೆ ಮೂರು ತಿಂಗಳ ವ್ಯಾಲಿಡಿಟಿ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...