jethmalani ಅಧಿಕಾರಸ್ಥರನ್ನು ಪ್ರಶ್ನಿಸಲೆಂದೇ ರಾಜಕೀಯ ಮಾಡಿದ ರಾಮ

jethmalani
former minister ram jethmalani

jethmalani  ಪ್ರಖರ ವಾಗ್ಮಿ ಮಾತ್ರವಲ್ಲ ನಿರ್ಭೀತ ರಾಜಕಾರಣಿಯೂ ಆಗಿದ್ದ ಜೇಠ್ಮಲಾನಿ

ಹೊಸದಿಲ್ಲಿ: ತೊಂಬತ್ತೈದರ ಇಳಿ ವಯಸ್ಸಿನಲ್ಲಿ ಭಾನುವಾರ ಬೆಳಗ್ಗೆ ನಿಧನರಾದ ಖ್ಯಾತ ( jethmalani ) ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ರಾಮ ಜೇಠ್ಮಲಾನಿ ಪ್ರರಖರ ವಾಗ್ಮಿ ಮಾತ್ರವಲ್ಲದೇ ನಿರ್ಭೀತ ರಾಜಕಾರಣಿಯೂ ಆಗಿದ್ದರು.

ಇದನ್ನೂ ಓದಿ: ಚಂದ್ರನ ಸನಿಹ ಕಳೆದುಹೋದ ಭಾರತದ ‘ವಿಕ್ರಮ’

ಅಧಿಕಾರಸ್ಥರನ್ನು ಪ್ರಶ್ನಿಸಲು ಮತ್ತು ಅವರ ಜನ್ಮ ಜಾಲಾಡಲು ರಾಂ ಜೇಠ್ಮಲಾನಿ ರಾಜಕೀಯವನ್ನು ಅಸ್ತ್ರವನ್ನಾಗಿ ಬಳಸಿಕೊಂಡರು ಎಂದರೆ ಅದು ತಪ್ಪಲ್ಲ. ದೇಶವೇ ಹೊಗಳಿದ್ದ ನಾಯಕರನ್ನು ಸಹ ತೆಗಳಲು, ಅವರ ಹುಳುಕೆತ್ತಿ ಪ್ರಶ್ನಿಸಲು ಜೇಠ್ಮಲಾನಿ ಎಂದೂ ಹಿಂಜರಿಯಲಿಲ್ಲ.

ಕಾಂಗ್ರೆಸ್ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಬೋಫೋರ್ಸ್‌ ಹಗರಣದ ಸಂದರ್ಭದಲ್ಲಿ ಸಾರ್ವಜನಿಕವಾಗಿ ದಿನಕ್ಕೆ ಹತ್ತು ಪ್ರಶ್ನೆ ಕೇಳಿ ಹೆಸರುವಾಸಿಯಾಗಿದ್ದ ಜೇಠ್ಮಲಾನಿ ನಂತರ ಅದೇ ಕಾಂಗ್ರೆಸ್ ಸಹಕಾರ ಪಡೆದು ಬಿಜೆಪಿಯನ್ನು ವಿರೋಧಿಸಿದರು.

ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಮಂತ್ರಿಯಾಗಿದ್ದ ಜೇಠ್ಮಲಾನಿ ನಂತರ 2004ರಲ್ಲಿ ಅವರ ವಿರುದ್ಧವೇ ಸ್ಪರ್ಧೆ ಮಾಡಿದ್ದರು. ಆಗ ಅವರ ವಿರುದ್ಧ ಅಭ್ಯರ್ಥಿ ಹಾಕದೇ ಕಾಂಗ್ರೆಸ್ ಪಕ್ಷವು ಸಹಕರಿಸಿತ್ತು.

ಇದು ಮೇಲ್ನೋಟಕ್ಕೆ ರಾಜೀ ಎನಿಸಿದರೂ ಜೇಠ್ಮಲಾನಿ ದನಿ ಇದ್ದದ್ದು ಅಧಿಕಾರಸ್ಥರ ವಿರುದ್ಧ. ಅದಕ್ಕಾಗಿ ಅವರು ಪಕ್ಷಗಳನ್ನು, ನಾಯಕರನ್ನೂ ತಮಗೆ ಬೇಕಾದಂತೆ ಬಳಸಿಕೊಂಡರಷ್ಟೆ.

1923ರಲ್ಲಿ ಸಿಂಧ್ ಪ್ರಾಂತ್ಯದ ಸಿಕಾಪುರ್ ಗ್ರಾಮದಲ್ಲಿ (ಈಗಿನ ಪಾಕಿಸ್ತಾನ ಪ್ರಾಂತ್ಯ) ಜನಿಸಿದ ರಾಮ್ ಜೇಠ್ಮಲಾನಿ ಸುಪ್ರೀಂ ಕೋರ್ಟ್, ಹೈಕೋರ್ಟ್‌ ಮತ್ತು ವಿಚಾರಣಾ ನ್ಯಾಯಾಲಗಳಲ್ಲಿ ಹಲವು ಮಹತ್ತರ ಪ್ರಕರಣಗಳಲ್ಲಿ ವಾದ ಮಂಡಿಸಿದವರು.

ವಕೀಲಿಕೆ ಮಾಡಲು ೨೧ರ ವಯಸ್ಸು ನಿಗದಿಯಾಗಿದ್ದ ಕಾಲದಲ್ಲಿ ಜಜ್‌ ಮುಂದೆ ಬಂದು ತಮಗೆ ವಕೀಲಿಕೆ ಮಾಡಲು ಅವಕಾಶ ನೀಡವಂತೆ ಕೋಡಿ ಒಪ್ಪಿಗೆಯನ್ನೂ ಪಡೆದು ತಮ್ಮ 17ನೇ ವಯಸ್ಸಿಗೇ ಕರಿ ಕೋಟು ಧರಿಸಿ ವಾದಕ್ಕಿಳಿದವರು ಜೇಠ್ಮಲಾನಿ.

1959ರಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ನಾನಾವತಿ ಕೊಲೆ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಾದ ಮಂಡಿಸಿ ಎಲ್ಲರ ಗಮನ ಸೆಳೆದಿದ್ದರು.

ತುರ್ತು ಪರಿಸ್ಥಿತಿ ಸಮಯದಲ್ಲಿ ಇಂದಿರಾ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದ ಅವರು ನಂತರ ಇಂದಿರಾ ಹಾಗೂ ಬಳಿಕ ರಾಜೀವ್ ಗಾಂಧಿ ಹಂತಕರ ಪರ ವಾದ ಮಂಡಿಸಿದ್ದರು. ಶೇರು ಪೇಟೆ ಹಗರಣ ಬೆಳಕಿಗೆ ಬಂದಾಗಿ ಇದೇ ಜೇಠ್ಮಲಾನಿ ಹರ್ಶದ್ ಮೆಹ್ತಾ ಅವರ ಪರವಾಗಿಯೂ ವಾದಿಸಿ ಅಚ್ಚರಿ ಮೂಡಸಿದ್ದರು. ಇದಕ್ಕಾಗಿ ಜೇಠ್ಮಲಾನಿ ಅವರು 25 ಲಕ್ಷರೂ ಫೀಸು ಪೀಕಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...