jarkiholi brothers ಜಾರಕಿಹೊಳಿ ಕುಟುಂಬದಲ್ಲಿ ಸಹೋದರರ ಸವಾಲ್

jarkiholi brothers
jarkiholi brothers at it against each other

jarkiholi brothers ’ರಮೇಶ್ ಸೀರಿಯಸ್ ರಾಜಕಾರಣಿ ಅಲ್ಲ’, ’ಸತೀಶ್ ಮೋಸಗಾರ’: ರಮೇಶ್, ಸತೀಶ ಜಾರಕಿಹೊಳಿ ಪರಸ್ಪರ ನಿಂದನೆ 

ಗೋಕಾಕ: ಬೆಳಗಾವಿಯ ಪ್ರಭಾವಿ ಜಾರಕಿಹೊಳಿ ಕುಟುಂಬದಲ್ಲಿ ಸಹೋದರರ ( jarkiholi brothers ) ನಡುವೆ ಸವಾಲ್ ಏರ್ಪಟ್ಟಿದೆ. ರಾಜಕೀಯವಾಗಿ ಎರಡು ಗುಂಪುಗಳಲ್ಲಿ ಹಂಚಿಹೋಗಿರುವ ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ಪರಸ್ಪರ ನಿಂದನೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಉಸ್ತುವಾರಿಗಾಗಿ ಅಶೋಕ, ಅಶ್ವತ್ಥ ಕಿತ್ತಾಟ

ತಮ್ಮ ಸ್ವಕ್ಷೇತ್ರದಲ್ಲಿ ಬೆಂಬಲಿಗರ ಸಮಾವೇಶ ನಡೆಸಿದ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರಿದರು. ಕುಟುಂಬದಲ್ಲಿ ಕಲಹ ತಂದಿಡುವ ಕೆಲಸವನ್ನು ಸತೀಶ್ ಮಾಡಿದ್ದಾರೆ ಎಂದು ದೂರಿದರು.

ತಮ್ಮ ಮತ್ತು ಲಖನ್ ಜಾರಕಿಹೊಳಿ ನಡುವೆ ಉತ್ತಮ ಸಂಬಂಧ ಇತ್ತು. ಈ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಮಾಡಿದ್ದೇ ಸತೀಶ. ಮುಂದಿನ ಚುನಾವಣೆಯಲ್ಲಿ ಗೋಕಾಕದಿಮದ ಟಿಕೆಟ್ ಕೊಡಿಸುವುದಾಗಿ ಹೇಳಿ ಲಖನ್‌ ನನ್ನಿಂದ ದೂರವಾಗುವಂತೆ ಮಾಡಿದ್ದೇ ಸತೀಶ್.

ಒಂದು ವೇಳೆ ನನ್ನ ಕೊನೆಯ ಸೋದರ ಲಖನ್ ಗೋಕಾಕದಿಂದ ಸ್ಪರ್ಧೆ ಮಾಡುವುದಾದರೆ ನಾನು ಬೇರೆ ಕಡೆ ಸ್ಪರ್ಧೆಗೆ ಸಿದ್ಧನಿದ್ದೇನೆ. ಆದರೆ ಸತೀಶ್ ಇದಕ್ಕೆ ರಾಜಕೀಯ ಬಣ್ಣ ಕೊಡಲು ಹೊರಟಿದ್ದಾರೆ. ಸತೀಶ್ ಒಬ್ಬ ಮೋಸಗಾರ ಎಂದು ರಮೇಶ್ ಆಪಾದಿಸಿದರು.

ಈ ಮಧ್ಯೆ ಬೆಳಗಾವಿಯಲ್ಲಿ ರಮೇಶ್ ನಿಂದನೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸತಿಶ್ ಜಾರಕಿಹೊಳಿ, ತಮ್ಮ ಸಹೋದರ ಗಂಭೀರವಾದ ರಾಜಕಾರಣಿಯೇ ಅಲ್ಲ. ಎದುರಾಳಿಗಳು ದರ್ಬಲರಾಗಿದ್ದ ಕಾರಣ ಅವರ ಶಾಸಕರಾಗಿ ಆಯ್ಕೆಯಾಗಲು ಕಾರಣವಾಗಿತ್ತ.

ಇತ್ತ ರಾಜ್ಯ ಭೀಕರ ನೆರೆಗೆ ತತ್ತರಿಸಿದ್ದರೇ ಅತ್ತ ರಮೇಶ ಹೊಸದಿಲ್ಲೀಲಿ ಠೀಕಾಣಿ ಹೂಡ್ತಾರೆ. ಅವರು ಸೀರಿಯಸ್ ರಾಜಕಾರಣಿಯೇ ಅಲ್ಲ, ಜನ ಅವರನ್ನು ನಂಬುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ನೇರವಾದ ಆಪಾದನೆ ಮಾಡಿದ್ದಾರೆ.