jamaica test ಜಮೈಕಾ ಟೆಸ್ಟ್: ಜಯದ ಹಾದಿಯಲ್ಲಿ ಕೊಹ್ಲಿ ಪಡೆ

jamaica test
rahane and hanuma vihari

jamaica test ಭಾರತ 416 ಹಾಗೂ 168/4 ಡಿ.; ವಿಂಡೀಸ್ 117 ಹಾಗೂ 45/2

ಜಮೈಕಾ: ಆತೀಥೆಯ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ( jamaica test ) ಸ್ವೀಪ್ ಮಾಡುವತ್ತ ಭಾರತ ತಂಡವು ದಾಪುಗಾಲು ಹಾಕಿದೆ. ಎರಡನೇ ಟೆಸ್ಟ್ ಗೆಲ್ಲಲು ಭಾರತಕ್ಕೆ ಕೇವಲ ಎಂಟು ವಿಕೆಟ್‌ಗಳ ಅವಶ್ಯಕತೆ ಇದ್ದು, ವಿಂಡೀಸ್ ಮುಂದೆ ಬೆಟ್ಟದಂತಹ ಸವಾಲು ಇದೆ.

ಇದನ್ನೂ ಓದಿ: ಬುಮ್ರಾ ಹ್ಯಾಟ್ರಿಕ್, ಹನುಮ ಸೆಂಚುರಿ: ವಿಂಡೀಸ್ ಉರಿಯುರಿ

ಪಂದ್ಯದ ಮೂರನೇ ದಿನವಾದ ಭಾನುವಾರ ಆಟದ ಅಂತ್ಯದ ವೇಳೆಗೆ ಪಂದ್ಯ ಗೆಲ್ಲಲು 468 ರನ್ ಗಳಿಸಬೇಕಾದ ಗುರುತರ ಸವಾಲು ಪಡೆದ ವೆಸ್ಟ್ ಇಂಡೀಸ್ ತಂಡವು 45 ರನ್ನುಗಳಿಗೆ 2 ವಿಕೆಟ್ ಕಳೆದುಕೊಂಡು ಪರದಾಡುವ ಸ್ಥಿತಿ ತಲುಪಿದೆ.

ಭಾರತದ 416 ರನ್ನುಗಳ ಮೊದಲ ಸರದಿಯ ಮೊತ್ತಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡವು ತನ್ನ ಮೊದಲ ಸರದಿಯಲ್ಲಿ ಕೇವಲ 117 ರನ್ ಗಳಿಸಿ ಸರ್ವ ಪತನ ಕಂಡು 299 ರನ್ ಹಿನ್ನಡೆ ಪಡೆದ ವಿಂಡೀಸ್‌ಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಫಾಲೋ ಆನ್ ನೀಡಲಿಲ್ಲ.

ಇದರ ಫಲವಾಗಿ ಎರಡನೇ ಸರದಿಯಲ್ಲಿ ಬ್ಯಾಟ್ ಮಾಡಿದ ಭಾರತವು 4 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ತನ್ನ ಎರಡನೇ ಸರದಿ ಘೋಷಿಸಿಕೊಂಡಿತು. ಭಾರತದ ಈ ಪ್ರತ್ಯುತ್ತರದಲ್ಲಿ ಉಪನಾಐಕ ರಹಾನೆ 64 ರನ್ ಮಾಡಿದರೇ ಮೊದಲ ಇನಿಂಗ್ಸ್ ಶತಕಧಾರಿ ಹನುಮ ವಿಹಾರಿ 54 ರನ್ ಮಾಡಿ ಅಜೇಯರಾಗುಳಿದರು.

ಇದಕ್ಕೆ ಮುನ್ನ ಏಳು ವಿಕೆಟ್ ನಷ್ಟಕ್ಕೆ 87 ರನ್ನುಗಳಿಂದ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು 117 ರನ್ನುಗಳಿಗೆ ತನ್ನ ಮೊದಲ ಸರದಿಯ ಹೋರಾಟ ಅಂತ್ಯಗೊಳಿಸಿಕೊಂಡಿತು. ಭಾರತದ ಪರ ಹ್ಯಾಟ್ರಿಕ್ ವೀರ ಬುಮ್ರಾ 6 ವಿಕೆಟ್ ಪಡೆದರೇ ಶಮಿ ಎರಡು ವಿಕೆಟ್ ಕಿತ್ತರು.

ಪಂದ್ಯ ಉಳಿಸಿಕೊಳ್ಳಲು ವಿಂಡೀಸ್ ದಾಂಡಿಗರು ಎರಡು ದಿನ ಪೂರ್ಣ ಆಡಬೇಕಾದ ಕಠಿಣ ಸವಾಲು ಎದುರಿಸುತ್ತಿದ್ದು, 18 ರನ್ ಮಾಡಿ ಅಜೇಯರಾಗಿರುವ ಡಾರೆನ್ ಬ್ರಾವೋ ಮೇಲೆ ಅವಲಂಬಿತರಾಗಿದ್ದಾರೆ. ಉಳಿದಿರುವ ಆರು ಅವಧಿಯಲ್ಲಿ ವಿಂಡೀಸ್ 423 ರನ್ ಗಳಿಸಬೇಕಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...