isro chandrayaan ಚಂದ್ರನ ಸನಿಹ ಕಳೆದುಹೋದ ಭಾರತದ ‘ವಿಕ್ರಮ’

isro chandrayaan
pm modi and vikram isro official

isro chandrayaan ಚಂದ್ರನ ಮೇಲೆ ಲ್ಯಾಂಡ್ ಆಗದ ಚಂದ್ರಯಾನ-2ರ ವಿಕರಂ ಲ್ಯಾಂಡರ್ , ಎದೆಗುಂದಬೇಡಿ ಎಂದ ಪ್ರಧಾನಿ ಮೋದಿ

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಯಶಸ್ವಿ ( isro chandrayaan) ಹಾಗೂ ಐತಿಹಾಸಿಕ ಹೆಜ್ಜ ಇಡುವಲ್ಲಿ ವಿಫಲವಾಗಿದೆ. ಇಸ್ರೊ ನಿರ್ಮಿತ ಚಂದ್ರಯಾನ-2 ಶಿಶಿಯಂಗಳಕ್ಕೆ ಯಶಸ್ವಿಯಾಗಿ ತಲುಪುವಲ್ಲಿ ಎಡವಿದೆ. ಅಷ್ಟೇ ಅಲ್ಲದೇ ವಿಕ್ರಮನಿಂದ ಯಾವುದೇ ರೀತಿಯ ಸಂಕೇತಗಳು ವಿಜ್ಞಾನಿಗಳಿಗೆ ಲಭಿಸಿಲ್ಲ.

ಇದನ್ನೂ ಓದಿ: ಚಂದ್ರನಿಗೆ ಮತ್ತಷ್ಟು ಸನಿಹವಾದ ’ವಿಕ್ರಮ’ ಲ್ಯಾಂಡರ್: ಇಸ್ರೊ

ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟ ವಿಕ್ರಂ ಲ್ಯಾಂಡರ್‍ ತಡರಾತ್ರಿ ಚಂದ್ರನ ಮೇಲೆ ಲ್ಯಾಂಡ್ ಆಗಲು ವಿಫಲ ಯತ್ನ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಖುದ್ದು ಬಾಹ್ಯಾಕಾಶ ಕೇಂದ್ರದಲ್ಲಿ ಈ ವೇಳೆ ವಿಜ್ಞಾನಿಗಳು, ಆಯ್ದ ವಿದ್ಯಾರ್ಥಿಗಳು ಅವರೊಂದಿಗಿದ್ದರು.

ಶ್ರೀಹರಿಕೋಟಾದಿಂದ ಹೊರಟು 45 ದಿನಗಳ ಬಳಿಕ ಚಂದ್ರಯಾನ-2 ಲ್ಯಾಂಡರ್ ವಿಕ್ರಮ್ ಚಂದ್ರನ ನೆಲದ ಮೇಲೆ ಇಳಿಯುವ ಕಡೆಯ ಕ್ಷಣದಲ್ಲಿ ವಿಫಲವಾಯಿತು. ನಿಗದಿತ ಮೇಲ್ಮೈ ಸ್ಪರ್ಶಕ್ಕೆ ಇನ್ನೂ 2.1 ಕಿಮೀ ಎತ್ತರದಲ್ಲಿರುವಾಗಲೇ ವಿಕ್ರಮ ಇಸ್ರೋದೊಂದಿಗೆ ಸಂಪರ್ಕ ಕಡಿದುಕೊಂಡಿತು.

ಶನಿವಾರ ನಸುಕಿನ 1.30ರಿಂದ 2.30ರ ನಡುವೆ ವಿಕ್ರಮ ಲ್ಯಾಂಡರ್ ಚಂದಿರನ ನೆಲವನ್ನು ಸ್ಪರ್ಶಿಸುವ ಮೂಲಕ ಚಂದ್ರನಂಗಳದಲ್ಲಿ ತಿರಂಗಾ ಹಾರುವಂತೆ ಮಾಡಬೇಕಿತ್ತು. ಆದರೆ ಆ ಕಾಯಕ ಯಶ ಸಾಧಿಸಲಿಲ್ಲ.

ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದರೇ ಭಾರತವು ಈ ಸಾಧನೆ ಮಾಡಿದ ದೇಶಗಳ ಸಾಲಿನಲ್ಲಿ ರಷ್ಯಾ, ಅಮೆರಿಕಾ ಹಾಗೂ ಚೀನಾವನ್ನು ಕೂಡಿಕೊಳ್ಳುತ್ತಿತ್ತು

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...