indore test ಬೆದರಿದ ಬಾಂಗ್ಲಾ ಮೇಲೆ ಭಾರತದ ಸವಾರಿ

indore test
team india

indore test ಮೊದಲ ಟೆಸ್ಟ್: ಬಾಂಗ್ಲಾ 150, ಭಾರತ 1/86

ಇಂದೋರ್: ಭಾರತದ ಕರಾರುವಾಕ್ ದಾಳಿಗೆ ದಾರಿ ಕಾಣದಂತಾದ ( indore test ) ಬಾಂಗ್ಲಾದೇಶ ಮೊದಲ ಕ್ರಿಕೆಟ್ ಟೆಸ್ಟ್ ಪಮದ್ಯದ ಮೊದಲ ದಿನವೇ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ದಿಟ್ಟ ನಿಧಾರ ಕೈಗೊಂಡ ಬಾಂಗ್ಲಾದೇಶ ಆ ದಿಟ್ಟತನವನ್ನು ಕೃತಿಗಿಳಿಸುವಲ್ಲಿ ವಿಫಲವಾಗಿ ಭಾರತದ ಮುಂದೆ ಮಮಡಿಯೂರಿತು.

ಇದನ್ನೂ ಓದಿ: ರಾಣೆಬೆನ್ನೂರು: ಈಶ್ವರಪ್ಪ ಪುತ್ರನಿಗಾಗಿ ಶಂಕರ್‌ಗೆ ಕೊಕ್

ಚಹಾ ವಿರಾಮದ ಬಳಿಕ ತುಸು ಹೊತ್ತಿನಲ್ಲಿಯೇ ಬಾಂಗ್ಲಾದೇಶದ ಮೊದಲ ಸರದಿ ಕೇವಲ 150 ರನ್ನುಗಳಿಗೆ ಪರ್‍ಯಾವಸಾನಗೊಂಡಿತು. ಮೊದಲ ಅವಧಿಯಲ್ಲಿ ಮೂರು, ಎರಡನೇ ಅವಧಿಯಲ್ಲಿ ನಾಲ್ಕು ಹಾಗೂ ಮೂರನೇ ಅವಧಿಯ ಆರಂಭದ ಕೆಲ ನಿಮಿಷಗಳಲ್ಲಿಯೇ ಮೂರು ವಿಕೆಟ್ ಕಲೆದುಕೊಂಡು ಬಾಂಗ್ಲಾ ತತ್ತರಿಸಿತು.

ಬಾಂಗ್ಲಾದ ಈ ಕ್ಷೀಣ ಸವಾಲನ್ನು ಸ್ವೀಕರಿಸಿದ ಭಾರತ ತಂಡವು ದಿನದಾಟದ ಅಂತ್ಯಕ್ಕೆ ಕೇವಲ ಒಂದು ವಿಕೆಟ್ ಕಳೆದುಕೊಂಡು 86 ರನ್ ಗಳಿಸಿತು. ಆರಂಭಿಕ ರೋಹಿತ್ ಶರ್ಮಾ ಕೇವಲ 6 ರನ್ ಗಳಿಸಿ ನಿರ್ಗಮಿಸಿದರೇ ಮಾಯಮಕ್ ಅಗರ್‍ವಾಲ್ 37 ಮತ್ತು ಚೇತೇಶ್ವರ ಪೂಜಾರ 43 ರನ್ ಗಳಿಸಿ ಅಜೇಯರಾಗುಳಿದರು.

ಬಾಂಗ್ಲಾದೇಶದ ಪರ ನಂಬಿಕಸ್ಥ ಹಿರಿಯ ಆಟಗಾರ ಮುಷ್ಫಿಕರ್‍ ರಹೀಂ 43 ರನ್ ಮಾಡಿದರೆ ನಾಯಕ ಮೊಮಿನುಲ್ ಹಕ್ 37 ಹಾಗೂ ವಿಕೆಟ್ ಕೀಪರ್‍ ಲಿಟನ್ ದಾಸ್ 21 ಗಳಿಸಿದರು. ಭಾರತದ ಪರ ಅಶ್ವಿನ್, ಉಮೇಶ್, ಇಶಾಂತ್ ತಲಾ ಎರಡು ವಿಕೆಟ್ ಕಬಳಿಸಿದರೇ ಶಮಿ ಮೂರು ವಿಕೆಟ್ ಕಿತ್ತರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...