ಜಮ್ಮು-ಕಾಶ್ಮೀರದ ಕುಲ್ಗಾಮ್ ಪ್ರದೇಶದಲ್ಲಿ ಭಾರತೀಯ ಸೇನೆಯು ಮೂವರು ಭಯೋತ್ಪಾದಕರನ್ನು ಹಡೆದುರುಳಿಸಿದೆ. ವಿಷಯವನ್ನು ಡಿಜಿಪಿ ವೈದ್ ದೃಢಪಡಿಸಿದ್ದಾರೆ.

ಕುಲ್ಗಾಮಿನಲ್ಲಿ ಈ ಹಿಂದೆ ಪೊಲೀಸ್​ ಪೇದೆಯೊಬ್ಬರನ್ನು ಅಪಹರಿಸಿ ಹತ್ಯೆಗೈದ ಭಯೋತ್ಪಾದಕರು ಇವರೆ ಎಂದು ಗುರುತಿಸಲಾಗಿದೆ. ಮೂವರು ಭಯೋತ್ಪಾದಕರ ಮೃತ ದೇಹಗಳು ಹಾಗೂ 2 ಎಕೆ 47 ರೈಫಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಘಟನೆ ಬೆನ್ನಲ್ಲೇ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿಯಲಾಯಿತು. ತರಬೇತಿ ನಿರತ ಪೇದೆ ಸಲೀಂ ಅಹ್ಮದ್​ ಶಾ ಎಂಬುವರನ್ನು ಭಯೋತ್ಪಾದಕರು ಕಿಡ್ನಾಪ್​ ಮಾಡಿ ಕೊಲೆ ಮಾಡಿದ್ದರು.

ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಕೊಂದು ಹಾಕಲಾಗಿದೆ.

ಮೂವರು ಕೂಡಾ ಲಷ್ಕರ್ ಇ ತೋಯ್ಬಾ ಸಂಘಟನೆ ಜತೆ ಸಂಪರ್ಕ ಹೊಂದಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್ಪಿ ವೈದ್ ಹೇಳಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...