india wraps ಹಗಲಿರುಳು ಶ್ರಮ ವಹಿಸದೇ ಬಾಂಗ್ಲಾವನ್ನು ಬಗ್ಗು ಬಡಿದ ಭಾರತ

india wraps
team india

india wraps ಈಡನ್ ಟೆಸ್ಟ್: ಕೊಹ್ಲಿ ಪಡೆಗೆ ಇನಿಂಗ್ಸ್, 46 ರನ್ ಗೆಲುವು, ಸರಣಿ ಕೈವಶ

ಈಡನ್ ಗಾರ್ಡನ್ಸ್: ನಿರೀಕ್ಷೆಯಂತೆಯೇ ಪ್ರಬಲ ಭಾರತ ತಂಡವು ( india wraps ) ಐತಿಹಾಸಿಕ ಹಗಲಿರುಳು ಟೆಸ್ಟ್ ಪಮದ್ಯದಲ್ಲಿ ತೀರಾ ದುರ್ಬಲ ಬಾಂಗ್ಲಾದೇಶವನ್ನು ಇನಿಂಗ್ಸ್ ಮತ್ತು 46 ರನ್ನುಗಳಿಂದ ಹೊಸಕಿಹಾಕಿ ಎರಡು ಪಂದ್ಯಗಳ ಸರಣಿಯನ್ನು ಗುಡಿಸಿದೆ.

ಇದನ್ನೂ ಓದಿ: ಮಿಂಚಿದ ರಾಹುಲ್, ಮೋರೆ: ಪಂಜಾಬ್‌ಗೆ ಕರ್ನಾಟಕ ಪಂಚ್

ಭಾರತವನ್ನು ಮತ್ತೆ ಬ್ಯಾಟಿಂಗ್‍ಗೆ ಅಟ್ಟಲು 241 ರನ್ ಗಳಿಸಬೇಕಿದ್ದ ಬಾಂಗ್ಲಾದೇಶವು ಮೂರನೇ ದಿನದಾಟದ ಮೊದಲ ಅವಧಿಯಲ್ಲಿಯೇ ಕೇವಲ 195 ರನ್ನುಗಳಿಗೆ ಮುದುಡಿಕೊಂಡು ಭಾರತಕ್ಕೆ ಸುಲುಭದ ತುತ್ತಾಯಿತು. ಎರಡನೇ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 152 ರನ್ ಮಾಡಿದ್ದ ಬಾಂಗ್ಲಾ ಹೆಚ್ಚಿನ ಹೋರಾಟ ತೋರಲಿಲ್ಲ.

ಮಾಜಿ ನಾಯಕ ಮುಷ್ಫಿಕರ್ ರಹೀಮ್ 72 ರನ್ ಗಳಿಸಿ ಏಕಾಂಗಿಯಾಗಿ ಹೋರಾಡಿದರು. ಭಾರತದ ಪರ ಪಂದ್ಯ ಹಾಗೂ ಸರಣಿ ಪುರುಷ ಇಶಾಂತ್ ಶರ್ಮಾ 4 ವಿಕೆಟ್ ಪಡೆದರೇ ಉಮೇಶ್ ಯಾದವ್ ಐದು ವಿಕೆಟ್ ಕಬಳಿಸಿ ಬಾಂಗ್ಲಾವನ್ನು ಕಬ್ಜಾ ಮಾಡಿಕೊಂಡರು.

ಇದಕ್ಕೆ ಮುನ್ನ ಬಾಂಗ್ಲಾದೇಶವು ತನ್ನ ಮೊದಲ ಸರದಿಯಲ್ಲಿ ಕೇವಲ 106 ರನ್ನುಗಳಿಗೆ ಸರ್ವಪತನ ಕಂಡಿತ್ತು. ಉತ್ತರವಾಗಿ ಭಾರತ ತಂಡವು ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ 136 ಹಾಗೂ ಪೂಜಾರ ಮತ್ತು ರಹಾನೆ ಅವರ ಅರ್ಧಶತಕಗಳ ನೆರವಿನಿಂದ 9 ವಿಕೆಟ್‍‍ಗೆ 347 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಈ ಸರಣಿ ಗೆಲುವಿನೊಂದಿಗೆ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್‍‍ಶಿಪ್‍‍ನಲ್ಲಿ ಈವರೆಗೆ ತಾನಾಡಿರುವ ಎಲ್ಲ ಏಳೂ ಪಂದ್ಯಗಳನ್ನು ಗೆದ್ದಿದ್ದು 360 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಮಾತ್ರ 116 ಅಂಕಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...